https://youtube.com/shorts/T_aMW9fkptU?si=5dNoX3esn0X-svY6
newsics.com
ಯುವತಿಯೊಬ್ಬರನ್ನು ಪ್ರೀತಿಸಿ, ಹೆಸರು ಬದಲಿಸಿಕೊಂಡು ಮದುವೆಯಾದ ನವಾಜ್ ಎಂಬಾತ, ಮೊದಲ ರಾತ್ರಿಯಂದೇ ತನ್ನ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇ*ಪ್ ಮಾಡಿರುವ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮದುವೆಯಾದ ದಿನವೇ ಫಸ್ಟ್‌ನೈಟ್ ಮಾಡಿಕೊಳ್ಳಲು ನವಾಜ್ ಪ್ಲಾನ್ ಮಾಡಿಕೊಂಡಿದ್ದನು. ಕೋಣೆಯನ್ನು ಅಲಂಕಾರ ಮಾಡಲು ಆತನ ಗೆಳೆಯರು ಬಂದಿದ್ದರು. ನಾನು ಕೋಣೆಯೊಳಗೆ ಬರುತ್ತಿದ್ದಂತೆ ಗೆಳೆಯರಾದ ಮುನ್ನಾವರ್ ಶಾರುಖ್, ಇಸ್ಮೈಲ್, ಇರ್ಫಾನ್ ಮತ್ತು ಸಮೀರ್ ಜೊತೆ ಸೇರಿಕೊಂಡು ನನ್ನ ಮೇಲೆ ಗ್ಯಾಂಗ್ ರೇ*ಪ್ ಮಾಡಿದ್ದಾರೆ.
ಅತ್ಯಾ*ಚಾರ ವಿಷಯ ಯಾರಿಗಾದ್ರೂ ಹೇಳಿದ್ರೆ ಕೊ*ಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವೇ ದಿನಗಳ ಬಳಿಕ ನವಾಜ್‌ಗೆ ತಾನು ಮೂರನೇ ಹೆಂಡತಿ ಎಂಬ ವಿಷಯ ತಿಳಿದಿದೆ. ಮದುವೆಗೂ ಮುಂಚೆ ಮತ್ತು ನಂತರವೂ ಸಂತ್ರಸ್ತೆಯಿಂದ ಹಣ, ಚಿನ್ನಾಭರಣ ಪಡೆದುಕೊಂಡಿದ್ದಾನೆ. ಬೇರೆ ಬೇರೆ ಕಾರಣಗಳನ್ನು ನೀಡಿ ನಮ್ಮ ಕುಟುಂಬಸ್ಥರಿಂದಲೂ ಹಣ ಪಡೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಸಂತ್ರಸ್ತೆಯ ಫ್ಲ್ಯಾಟ್ ಮೇಲೆಯೂ ಸಾಲ ಪಡೆದುಕೊಂಡಿದ್ದಾನೆ. ಚಿನ್ನಾಭರಣಗಳನ್ನು ಒತ್ತೆ ಇಟ್ಟು ಹಣ ತೆಗೆದುಕೊಂಡಿದ್ದಾನೆ. ಮದುವೆ ಬಳಿಕಬೀಫ್ ತಿನ್ನುವಂತೆ, ಕಲ್ಮಾ ಓದುವಂತೆ ನನ್ನ ಮೇಲೆ ಒತ್ತಡ ಹಾಕ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.