https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ಚಿತ್ರರಂಗದಲ್ಲಿ ಕೆಲವರು ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿ ಮಂಚಕ್ಕೆ ಕರೆಯುತ್ತಾರೆ ಎನ್ನುವ ಆರೋಪ ಇದೆ. ಹುಡುಗ ಹಾಗೂ ಹುಡುಗಿಯರಿಬ್ಬರಿಗೂ ಇಂತಹ ಆಫರ್ ಕೊಟ್ಟಿರುವ ಉದಾಹರಣೆಗಳಿವೆ. ಬಣ್ಣದ ಲೋಕದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಚರ್ಚೆ ಇಂದು ನಿನ್ನೆಯದಲ್ಲ.
ತಮ್ಮ ಕಾಮತೃಷೆಗೆ ನಾಯಕಿಯರ ಹಿಂದೆ ಬೀಳುವ ಕಾಮಾಂಧರ ಸಂತತಿ ಕಡಿಮೆಯಾಗುತ್ತಿಲ್ಲ. ಇಷ್ಟೆಲ್ಲಾ ಆದರೂ ಕೂಡ ಯಾರಲ್ಲಿಯೂ ಭಯ ಎನ್ನುವುದು ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ತೆಲುಗು ಚಿತ್ರರಂಗದ ಕರಾಳ ಸತ್ಯವನ್ನು ಯುವತಿಯೊಬ್ಬರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಈ ಯುವತಿಯ ಹೆಸರು ಪಿಕು ನೆಮಲಿ. ಮೂಲತಃ ತೆಲುಗು ಚೆಲುವೆ . ಆದರೆ ಬದುಕು ರೂಪಿಸಿಕೊಂಡಿದ್ದು ಅಮೆರಿಕಾದಲ್ಲಿ. ಸಪ್ತಸಾಗರದಾಚೆ ಇದ್ದರೂ ತಮ್ಮ ಭಾಷೆ ಮತ್ತು ಸಂಸ್ಕ್ರತಿಯ ಕುರಿತು ಪೋಸ್ಟ್ ಗಳನ್ನು ಹಂಚಿಕೊಳ್ಳುವ ಪಿಕು ನೆಮಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಹೆಸರು ಮಾಡಿದ್ದಾರೆ.
ಸಪ್ತಸಾಗರದಾಚೆ ಇದ್ದರೂ ತಮ್ಮ ಭಾಷೆ ಮತ್ತು ಸಂಸ್ಕ್ರತಿಯ ಕುರಿತು ಪೋಸ್ಟ್ ಗಳನ್ನು ಹಂಚಿಕೊಳ್ಳುವ ಪಿಕು ನೆಮಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಹೆಸರು ಮಾಡಿದ್ದಾರೆ.
ಆದರೆ ಇವರಿಗೆ ಚಿತ್ರರಂಗ ಪ್ರವೇಶ ಮಾಡುವ ಬಯಕೆ. ಹೀಗಾಗಿಯೇ ತೆಲುಗು ಚಿತ್ರರಂಗದ ಬಾಗಿಲು ಬಡಿಯುವ ಪ್ರಯತ್ನವನ್ನು ಪಿಕು ನೆಮಲಿ ಮಾಡಿದ್ದಾರೆ. ಚಿತ್ರರಂಗದ ಕರಾಳ ಮುಖ ಕಂಡು ಬೆಚ್ಚಿ ಬಿದ್ದಿದ್ದಾರೆ.
ತಮಗಾದ ಈ ಕಹಿ ಅನುಭವವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪಿಕು ನೆಮಲಿ, ಗೆಳೆಯರ ಸಹಾಯದಿಂದ ನನಗೆ ಸಹಾಯಕ ನಿರ್ದೇಶಕರ ನಂಬರ್ ಸಿಕ್ಕಿತ್ತು ಆ ಪೈಕಿ ಒಬ್ಬರ ಜೊತೆ ಮಾತನಾಡುವಾಗ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿಯ ಪರಿಚಯ ನನಗಾಯ್ತು ಎಂದಿದ್ದಾರೆ.
ನಿಮ್ಮ ಪೋರ್ಟ್ ಪೋಲಿಯೊ ಕಳಿಸಿ ಎಂದರು, ನಾನು ಕೂಡ ಅವರಿಗೆ ನನ್ನ ಫೋಟೊಗಳನ್ನು ಕಳಿಸಿದೆ ಎಂದಿರುವ ಪಿಕು ನೆಮಲಿ ಆ ನಂತರ ಅವರು ನನಗೆ ಕರೆ ಮಾಡಿ ಕಮಿಟ್‌ಮೆಂಟ್‌ಗೆ ನೀವು ರೆಡಿಯಲ್ವಾ..? ಎಂದು ಕೇಳಿದರು ಎಂದು ಹೇಳಿದ್ದಾರೆ.
ಕಮಿಟ್‌ಮೆಂಟ್ ಅಂದರೆ ನಾನು ಶಿಸ್ತು, ಬದ್ದತೆ, ನಟನೆಯ ಕುರಿತು ಕೇಳುತ್ತಿದ್ದಾರೆ ಎಂದುಕೊಂಡೆ, ಹೀಗಾಗಿ ನಾನು ಬಹಳ ಕಮಿಟ್‌ಮೆಂಟ್ ಇರುವ ಯುವತಿ, ನಾನು ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತೇನೆ ಎಂದೆಲ್ಲ ಹೇಳಿದೆ ಎಂದಿರುವ ಪಿಕು ನೆಮಲಿ ಆ ನಂತರ ಆ ವ್ಯಕ್ತಿ ಮತ್ತೆ ಕರೆ ಮಾಡಿ ಖ್ಯಾತ ನಿರ್ಮಾಪಕರು ಭೇಟಿ ಮಾಡಲು ಬಯಸಿದ್ದಾರೆ. ರೆಸಾರ್ಟ್ ಒಂದರಲ್ಲಿ ನಿಮ್ಮ ಮೀಟಿಂಗ್ ಫಿಕ್ಸ್ ಮಾಡಿದ್ದೇನೆ, ನೀವು ಫ್ಲೈಟ್ ಹತ್ತಿ ಬಂದುಬಿಡಿ ಎಂದ ಎಂದು ಹೇಳಿದ್ದಾರೆ. ಪರೋಕ್ಷವಾಗಿ ನಿರ್ಮಾಪಕನ ಜೊತೆಗೆ ಸಮಯ ಕಳೆಯಬೇಕು ಎಂದು ಕೂಡ ಅವನು ಹೇಳಿದ ಎಂದು ಪಿಕು ನೆಮಲಿ ತಮ್ಮ ವಿಡಿಯೋದಲ್ಲಿ ಹೇಳಿದ್ಧಾರೆ.
ಚಿತ್ರರಂಗದ ಈ ಅಸುರಕ್ಷಿತ ಮತ್ತು ಭಯದ ವಾತಾವರಣದಿಂದ ಹಲವು ಯುವತಿಯರು ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.ಕಾಸ್ಟಿಂಗ್ ಕೌಚ್ ಸಂಸ್ಕ್ರತಿ ವಿರುದ್ದ ಕಿಡಿ ಕಾರಿದ್ದಾರೆ.
ಸದ್ಯ ಇವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತೆಲುಗು ಚಿತ್ರರಂಗದ ನಟಿ ಮತ್ತು ಹೋರಾಟಗಾರ್ತಿ ಆಂಕರ್ ಝಾನ್ಸಿ ಅವರು ಪಿಕು ಅವರಿಗೆ ಬೆಂಬಲ ಸೂಚಿಸಿದ್ದಾರೆ.
https://www.newsics.com/2026/04/04/nivedita-gowda-danced-with-her-girlfriend-in-the-bathroom/