newsics.com
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಡಾಡ್ತಿರೋ ಬಿಳಿ ಬೊಲೆರೋ ಜನರಲ್ಲಿ ಭಯ ಮೂಡಿಸಿದೆ. ಈ ಬೊಲೆರೋ ಹೆಣ್ಣು ಮಕ್ಕಳೇ ಇವರ ಟಾರ್ಗೆಟ್ ಎನ್ನುವ ವಿಡಿಯೋ ಒಂದು ವೈರಲ್ ಆಗ್ತಿದೆ.
ಪರೀಕ್ಷೆ ಮುಗಿಯುತ್ತಿದ್ದು, ಮಕ್ಕಳೆಲ್ಲಾ ಬೀದಿಗಳಲ್ಲಿ ಆಟವಾಡುವ ಸಮಯ ಬಂದಿದೆ. ಇದರ ನಡುವೆಯೇ ಬನಶಂಕರಿ 2ನೇ ಹಂತದಲ್ಲಿ ಈ ಅನುಮಾನಸ್ಪದ ವ್ಯಕ್ತಿಗಳು ಓಡಾಡ್ತಿರೋ ಆತಂಕದ ವಿಚಾರವಾಗಿದೆ. ಇವರ ಮೊದಲ ಟಾರ್ಗೆಟ್ ಹೆಣ್ಣು ಮಕ್ಕಳಾಗಿದ್ದಾರೆ ಎನ್ನಲಾಗ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಈ ವಿಡಿಯೋದಲ್ಲಿ ಭಯ ಮೂಡಿಸುವಂತಹ ಘಟನೆ ನಡೆದಿದೆ. ಆಗಷ್ಟೇ ಶಾಲೆ ಮುಗಿಸಿಕೊಂಡು ಬಾಲಕಿ ಮನೆಗೆ ಹೋಗ್ತಿದ್ದಳು, ಒಬ್ಬಳೇ ಗೇಟ್ ತೆಗೆದಿದ್ದಾಳೆ ಅಷ್ಟೇ. ಅದೇ ರಸ್ತೆಯಲ್ಲಿ ಒಂದು ಬೊಲೊರೊ ಕಾರು ಬಂದಿದೆ. ಒಳಗೆ ಕೂತಿದ್ದವರು ಹುಡುಗಿಯನ್ನ ಕರೆದಿದ್ದಾರಂತೆ. ಆಶೀರ್ವಾದ ಮಾಡ್ತೀವಿ ಬಾ ಬಾ ಎಂದು ಕರೆದಿದ್ದಾರೆ ಎನ್ನಲಾಗ್ತಿದೆ.
ಕಾವಿ, ವಿಭೂತಿ ಹಾಕಿಕೊಂಡು ಕಾರಿನಲ್ಲಿ ಬಂದವರನ್ನ ಕಂಡು ಬಾಲಕಿ ಗಾಬರಿಯಾಗಿದ್ದಾಳೆ. ತಕ್ಷಣ ತಂದೆಯನ್ನು ಕರೆದಿದ್ದಾಳಂತೆ. ತಂದೆ ಮನೆಯಿಂದ ಹೊರಗೆ ಬಂದು ವಿಚಾರಿಸಲು ಹೋಗ್ತಿದ್ದಂತೆ ಕಾರಿನಲ್ಲಿ ಬಂದವರು ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಕಾರು ಕರ್ನಾಟಕದಲ್ಲ, ಉತ್ತರ ಪ್ರದೇಶದ ನಂಬರ್ ಇರುವ ಬಿಳಿ ಬೊಲೆರೋ ಕಾರು ಅನ್ನೋದು ಗೊತ್ತಾಗಿದೆ. ಈ ವಿಡಿಯೋ ಬಗ್ಗೆ ಬನಶಂಕರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.