https://youtube.com/shorts/w77Qj39UtDA?si=G-t7V0TrkmzYuWQ5
newsics.com
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಂಕಷ್ಟ ಎದುರಾಗಿದೆ. ಮೈಸೂರು ಡಿಸಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಕುರಿತು ಸೆಕ್ಷನ್ 17 ಎ ಅಡಿ ತನಿಖೆಗೆ ಅನುಮತಿ ನೀಡಲು ಹೈಕೋರ್ಟ್ ಆದೇಶ ಹೊರಡಿಸಿದೆ.
ಅಕ್ರಮ ಆರೋಪ ಹಿನ್ನೆಲೆ ಸೆಕ್ಷನ್ 17 ಎ ಅಡಿ ತನಿಖೆಗೆ ಅನುಮತಿ ನೀಡಲು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ ತನಿಖೆಗೆ ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮ ಕೂಡ ಹೈಕೋರ್ಟ್ ರದ್ದುಪಡಿಸಿದೆ.
ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಮೈಸೂರು ಡಿಸಿಯಾಗಿದ್ದ ವೇಳೆ ರೋಹಿಣಿ ಸಿಂಧೂರಿ ಅವರು 13 ರೂ. ಬೆಲೆಯ ಬಟ್ಟೆ ಬ್ಯಾಗ್ ಅನ್ನು 52 ರೂ.ಗೆ ಖರೀದಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ರೋಹಿಣಿ ಸಿಂಧೂರಿ ಅವರು ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 7.55 ಕೋಟಿ ನಷ್ಟವುಂಟು ಮಾಡಿದ್ದರು ಎಂಬ ಆರೋಪವಿತ್ತು, ಈ ಆರೋಪದ ಕುರಿತು ದೂರುದಾರರಾದ ವಕೀಲ ರವಿಚಂದ್ರೇಗೌಡ ಎನ್.ಆರ್. ರಿಟ್ ಅರ್ಜಿ ಸಲ್ಲಿಸಿದ್ದರು.
ಈ ವಿಚಾರವಾಗಿ ಸರ್ಕಾರಕ್ಕೆ ದೂರು ಬಂದ ಸಂದರ್ಭದಲ್ಲಿ ಸರ್ಕಾರ ಪ್ರಾಥಮಿಕ ತನಿಖೆಯನ್ನು ನಡೆಸಿತ್ತು. ಅಂದಿನ ವಸತಿ ಇಲಾಖೆ ಕಾರ್ಯದರ್ಶಿಯಾಗಿದ್ದ ಡಾ ಜಿ ರವಿಶಂಕರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಪ್ರಾಥಮಿಕವಾಗಿ ಒಂದು ವರದಿ ಸಲ್ಲಿಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು. ಈ ತನಿಖೆಯ ಸಂದರ್ಭದಲ್ಲಿ ರೋಹಿಣಿ ಅವರು ಸಮರ್ಪಕ ಉತ್ತರ, ಸರಿಯಾಗಿ ಮಾಹಿತಿಯ ದಾಖಲೆಗಳು ಕೊಡದೆ ಇರುವ ಕಾರಣ ಮೇಲ್ನೋಟಕ್ಕೆ ಅಕ್ರಮ ನಡೆಸಿದ್ದಾರೆ ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಿತಿ ವರದಿಯನ್ನು ಕೊಟ್ಟಿತ್ತು.
https://www.newsics.com/2026/04/02/deloitte-to-hire-50000-candidates-in-india/