newsics.com
ಬೆಂಗಳೂರು: ʼವಿಶ್ವ ಶ್ರೇಷ್ಠ ಕನ್ನಡಿಗ 2024ʼ ಪ್ರಶಸ್ತಿಗೆ ಶ್ರೀರಾಮ ವಿಗ್ರಹದ ರೂವಾರಿ ಅರುಣ್ ಯೋಗಿರಾಜ್ ಆಯ್ಕೆ ಆಗಿದ್ದಾರೆ.
ಅಮೇರಿಕಾದ ಸಿಯಾಟಲ್ ನಗರದಲ್ಲಿನ ಸಹ್ಯಾದ್ರಿ ಕನ್ನಡ ಸಂಘ ನೀಡುವ, ಪ್ರತಿಷ್ಠಿತ ವಿಶ್ವ ಶ್ರೇಷ್ಠ ಕನ್ನಡಿಗ 2024ನೇ ಸಾಲಿನ ಪ್ರಶಸ್ತಿಗೆ ಹೆಮ್ಮೆಯ ಕನ್ನಡಿಗ ಖ್ಯಾತ ಶಿಲ್ಪಿ ಅಯೋಧ್ಯೆ ಶ್ರೀರಾಮ ವಿಗ್ರಹದ ನಿರ್ಮಾತೃ ಡಾ. ಅರುಣ್ ಯೋಗಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಿಯಾಟಲ್ ನಗರದಲ್ಲಿ ಇಂದು ನಡೆದ ಸಹ್ಯಾದ್ರಿ ಕನ್ನಡ ಸಂಘದ ಪದಾಧಿಕಾರಿಗಳ ಸಭೆಯಲ್ಲಿ, ಸಂಘದ ಚೇರ್ಮನ್ ಮನು ಗೊರೂರು ಈ ವಿಷಯವನ್ನು ಪ್ರಕಟಿಸಿದರು ಹಾಗೂ ಸೆಪ್ಟೆಂಬರ್ 7ರಂದು ಸಿಯಾಟಲ್‌ನ ಬೆನಾರೋಯಾ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.