https://youtube.com/shorts/qIu1k1AjcVg?si=asT_CsSQI4v14g8C
newsics.com
ಬ್ಯೂಟಿ ಪಾರ್ಲರ್ ತರಬೇತಿ ನೆಪದಲ್ಲಿ ಯುವತಿಯರನ್ನು ಮನೆಗೆ ಕರೆಸಿಕೊಂಡು ಪತಿಯ ಅತ್ಯಾ*ಚಾರಕ್ಕೆ ಪತ್ನಿಯೇ ಸಹಾಯ ಮಾಡುತ್ತಿದ್ದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಕೈಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುಲಾಬಗಂಜ್ ನಿವಾಸಿಯಾಗಿರುವ ಯಾಸ್ಮೀನ್ ಖಾನ್ ಎಂಬಾಕೆ ಬ್ಯೂಟಿ ಪಾರ್ಲರ್ ತರಬೇತಿ ನೀಡುತ್ತಿದ್ದಳು. ಈ ಬ್ಯೂಟಿ ಪಾರ್ಲರ್‌ನಲ್ಲಿ ಯಾಸ್ಮೀನ್ ಗಂಡ ಶರೀಫ್ ಖಾನ್ ಹಾಜರಿರುತ್ತಿದ್ದನು. ಸುಮಾರು 4 ತಿಂಗಳ ಹಿಂದೆ ಸಂತ್ರಸ್ತೆಗೆ ತನ್ನ ಮನೆಗೆ ಬರುವಂತೆ ಯಾಸ್ಮೀನ್ ಹೇಳಿದ್ದಳು.
ಯಾಸ್ಮೀನ್‌ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಯುವತಿ ಮೇಲೆ ಶರೀಫ್ ಅತ್ಯಾ*ಚಾರ ಎಸಗಿದ್ದಾನೆ. ನಂತರ ಈ ವಿಷಯ ಯಾರಿಗಾದ್ರೂ ತಿಳಿಸಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಸಂತ್ರಸ್ತೆ ನಾಲ್ಕು ತಿಂಗಳು ಅತ್ಯಾ*ಚಾರದ ವಿಷಯವನ್ನು ಯಾರ ಮುಂದೆಯೂ ಹೇಳಿರಲಿಲ್ಲ. ಶರೀಫ್ ತನ್ನ ಮೇಲೆ ಅತ್ಯಾ*ಚಾರ ಎಸಗಿರುವ ವಿಷಯವನ್ನು ಯಾಸ್ಮೀನ್ ಮುಂದೆ ಸಂತ್ರಸ್ತೆ ಹೇಳಿಕೊಂಡಿದ್ದಳು. ಆದ್ರೆ ಈ ವಿಷಯವನ್ನು ಯಾಸ್ಮೀನ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಶರೀಫ್ ಖಾನ್ ಕೋಣೆಯಲ್ಲಿ ರೇ*ಪ್ ಮಾಡ್ತಿದ್ರೆ ಯಾಸ್ಮೀನ್ ಗೇಟ್ ಬಳಿ ನಿಂತು ಕಾವಲು ಕಾಯುತ್ತಿದ್ದಳು ಎಂದು ಎಸ್‌ಪಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಫೋನ್ ಮಾಡಿ ಶನಿವಾರ ಮನೆಗೆ ಬರುವಂತೆ ಯುವತಿಯನ್ನು ಶರೀಫ್ ಖಾನ್ ಕರೆದಿದ್ದಾನೆ. ಬರದಿದ್ರೆ ಅತ್ಯಾ*ಚಾರದ ವಿಷಯವನ್ನು ಬಹಿರಂಗಪಡಿಸೋದಾಗಿ ಬೆದರಿಕೆ ಹಾಕಿದ್ದಾನೆ. ಮನೆಗೆ ಹೋದಾಗ ಅಲ್ಲಿ ಯಾಸ್ಮೀನ್, ಆಕೆಯ ಗಂಡ ಶರೀಫ್ ಮತ್ತು ಮೈದುನ ಮುವೀನ್ ಖಾನ್ ಸಹ ಇದ್ದನು. ಈ ವೇಳೆ ಇಬ್ಬರ ಮುಂದೆಯೇ ಯುವತಿಯನ್ನು ಕೋಣೆಗೆ ಎಳೆದೊಯ್ದು ರೇ-ಪ್ ಮಾಡಲು ಶರೀಫ್ ಮುಂದಾಗಿದ್ದಾನೆ. ಯುವತಿ ವಿರೋಧಿಸಿದಾಗ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಆಗ ಶರೀಫ್ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.
ಈ ಸಂದರ್ಭದಲ್ಲಿ ಆತಂಕಗೊಂಡ ಯುವತಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾಳೆ. ಈ ಪ್ರಕರಣ ಸಂಬಂಧ ಪೊಲೀಸರು ಮಹಿಳೆ ಮತ್ತು ಆಕೆಯ ಪತಿ, ಮೈದುನನ್ನು ಬಂಧಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
https://www.newsics.com/2026/03/30/gold-prices-which-had-been-rising-sharply-have-fallen/