https://youtube.com/shorts/8vXYZAagRTI?si=TOMvue_f8l6FavIl
newsics.com
ಕೆಲವು ಪುರುಷರು ನಿಮ್ಮ ಜೀವನಕ್ಕೆ ಪ್ರೀತಿಗಾಗಿ ಬರುವುದಿಲ್ಲ. ಅವರು ಬರುವುದು ನಿಮ್ಮನ್ನು ಬಳಸಿಕೊಳ್ಳಲು. ನಿಮ್ಮ ಮೃದುಸ್ವಭಾವ, ನಿಮ್ಮ ದೇಹ, ನಿಮ್ಮ ಕ್ಷಮಿಸುವ ಗುಣ- ಇವೆಲ್ಲವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ.
ಮುಖದಲ್ಲಿ ಗಂಭೀರತೆ ಇಟ್ಟುಕೊಂಡೇ ನಿಮ್ಮ ಸಮಯವನ್ನು ಹಾಳು ಮಾಡುತ್ತಾರೆ. ನಿಮ್ಮ ಜೀವನದಲ್ಲಿ ಇದ್ದರೂ, ನಿಮ್ಮ ಮುಂದೆ ಜವಾಬ್ದಾರಿ ಹೊರುವ ಧೈರ್ಯವಿಲ್ಲ. ಅವರಿಗೆ ಬೇಕಾದದ್ದು ʼಗರ್ಲ್‌ಫ್ರೆಂಡ್ ಅನುಭವʼ. ಅನೇಕ ಯುವತಿಯರು ಇಂಥ ಪುರುಷರಿಂದ ಮೋಸ ಹೋದ ಬಳಿಕ ಬುದ್ಧಿ ಕಲಿಯುತ್ತಾರೆ. ಆದರೆ ಅದಕ್ಕೆ ಚಾಣಕ್ಯ 5 ಗುರುತುಗಳನ್ನು ನೀಡಿದ್ದಾರೆ.
1. ʼಹೆಚ್ಚು ಸ್ನೇಹಿತೆಯರುʼ ಇರುವ ವ್ಯಕ್ತಿ
ಸ್ನೇಹಿತೆಯರು ಇರುವವರೆಲ್ಲ ಅಪಾಯಕಾರಿ ಎನ್ನಲಾಗುವುದಿಲ್ಲ. ಆದರೆ ಕೆಲವರು ʼಸ್ನೇಹʼ ಎಂಬ ಹೆಸರಿನಲ್ಲಿ ಹಿಂದಿನ ಅಪೂರ್ಣ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರಿಗೆ ಸ್ನೇಹಕ್ಕಿಂತ ಮಹಿಳೆಯರ ಪ್ರಾಪ್ತಿ ಮುಖ್ಯ. ಮನಸ್ಥಿತಿ ಅನುಸಾರ ಹಲವರಿಗೆ ಮೆಸೇಜ್ ಮಾಡುತ್ತಾರೆ. ಒಬ್ಬಳಿಂದ ಮೆಚ್ಚುಗೆ, ಮತ್ತೊಬ್ಬಳಿಂದ ಭಾವನಾತ್ಮಕ ಸಹಾಯ, ಇನ್ನೊಬ್ಬಳ ಜೊತೆ ಫ್ಲರ್ಟ್, ಮತ್ತೊಬ್ಬಳನ್ನು ಅಹಂಕಾರಕ್ಕೆ ಬಳಸಿಕೊಳ್ಳುವುದು ಹೀಗೆ. ʼಅವಳು ಕೇವಲ ಸ್ನೇಹಿತೆʼ ಎಂದು ಹೇಳುತ್ತಾರೆ. ಆದರೆ ಎಲ್ಲರೂ ಸ್ನೇಹಿತೆಯರೇ! ಇದು ಶಾಣ್ಯಾತನ. ಕೆಲವರು ಮಹಿಳೆಯರನ್ನು ಸ್ಪೇರ್ ಚಾರ್ಜರ್‌ಗಳಂತೆ ಇಟ್ಟುಕೊಳ್ಳುತ್ತಾರೆ, ಬೇಡಿಕೆಯಾದಾಗ ಬಳಸಲು.
2. ತನ್ನ ಎಕ್ಸ್ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿ
ಯಾವ ವ್ಯಕ್ತಿ ತನ್ನ ಹಿಂದಿನ ಪ್ರೇಯಸಿಯ ಬಗ್ಗೆ ಸದಾ ಕೆಟ್ಟದಾಗಿ ಮಾತನಾಡುತ್ತಾನೋ, ಬೇರೆಲ್ಲ ಮಹಿಳೆಯರನ್ನು ʼಪಾಗಲ್ʼ, ʼಡ್ರಾಮಾಟಿಕ್ʼ, ʼಸೈಕೋʼ ಎಂದು ಹೇಳುತ್ತಾನೋ- ಅವನು ಸತ್ಯವಂತನಲ್ಲ. ಅವನು ತನ್ನನ್ನು “ಬಲಿಪಶು” ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಅವನು ಹೇಳುವ ಎಲ್ಲ ಕಥೆಗಳಲ್ಲಿ ತಪ್ಪು ಮಹಿಳೆಯರದ್ದೇ, ಆತ ಮಾತ್ರ ನಿರಪರಾಧಿ! ಇಂತಹವರು ಮಹಿಳೆಯರನ್ನು ಹೀನಗೊಳಿಸಿ ನಿಮ್ಮನ್ನು ವಿಶೇಷವಾಗಿ ಕಾಣಿಸುತ್ತಾರೆ. ಆದರೆ ನಾಳೆ ನೀವು ಅವನನ್ನು ವಿರೋಧಿಸಿದರೆ, ನೀವು ಕೂಡ ಅವನ ಕಥೆಯ “ವಿಲನ್” ಆಗುತ್ತೀರಿ.
3. ʼಹಾಟ್ ಆಂಡ್ ಕೋಲ್ಡ್ʼ ವ್ಯಕ್ತಿ
ಒಂದು ದಿನ ಅವನು ತುಂಬಾ ಕಾಳಜಿ ತೋರಿಸುತ್ತಾನೆ. ಸಂದೇಶಗಳು, ಗಾಢವಾದ ಮಾತುಗಳು, ಭವಿಷ್ಯದ ಯೋಜನೆಗಳು ಇತ್ಯಾದಿ. ನೀವು ಅವನಿಗೆ ವಿಶೇಷ ವ್ಯಕ್ತಿ ಎಂದು ಭಾಸವಾಗುತ್ತದೆ. ಮರುದಿನ ಅವನು ಕಾಣೆಯಾಗುತ್ತಾನೆ. ನೀವು ಗೊಂದಲಕ್ಕೆ ಸಿಲುಕುವಷ್ಟು. ಮತ್ತೆ ಬರುತ್ತಾನೆ- ಏನೂ ಆಗಿಲ್ಲ ಎಂಬಂತೆ. “ಅವನಿಗೆ ನನ್ನ ಮೇಲೆ ಪ್ರೀತಿ ಇರಬಹುದು, ಅದನ್ನು ತೋರಿಸಲು ಬಾರದಿರಬಹುದು” ಎಂದು ನೀವು ಯೋಚಿಸುತ್ತೀರಿ. ಹಾಗಲ್ಲ ಅದು. ಅವನು ಏನು ಮಾಡುತ್ತಿದ್ದಾನೋ ಅವನಿಗೆ ಗೊತ್ತಿದೆ. ಒಂಟಿತನ ಆದಾಗ ಬರುತ್ತಾನೆ. ತೃಪ್ತಿಯಾದಾಗ ದೂರವಾಗುತ್ತಾನೆ. ನೀವು ದೂರವಾಗುತ್ತಿದ್ದೀರಿ ಅನ್ನಿಸಿದಾಗ ಮತ್ತೆ ಬರುತ್ತಾನೆ. ಅವನಿಗೆ ಸಂಬಂಧ ಬೇಡ- ನಿಮ್ಮ ಲಭ್ಯತೆ ಮಾತ್ರ ಬೇಕು.
4. ವೇಗವಾಗಿ ಹತ್ತಿರವಾಗುವ ವ್ಯಕ್ತಿ
ಅತ್ಯಂತ ಬೇಗ ಹತ್ತಿರವಾಗುವವರು ಸಾಮಾನ್ಯವಾಗಿ ಆಳವಾದ ವ್ಯಕ್ತಿತ್ವದವರಲ್ಲ. ಅವರು ಚತುರ ಸುಳ್ಳುಗಾರರು. “ನಾನು ಇಂಥ ಭಾವನೆ ಎಂದಿಗೂ ಅನುಭವಿಸಿಲ್ಲ” “ನೀನು ವಿಭಿನ್ನ” “ನೀನು ನನ್ನ ಫ್ಯೂಚರ್” ಇಂಥದೆಲ್ಲ ಮಾತುಗಳು ಆ ಸ್ಪೀಡ್‌ನ ಭಾಗ. ಅವರು ನಿಮ್ಮನ್ನು ಬೇಗ ಅಂಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನೀವು ಭಾವನಾತ್ಮಕವಾದ ನಂತರ, ನಿಮ್ಮನ್ನು ನಿಯಂತ್ರಿಸಲು ಅವರಿಗೆ ಸುಲಭವಾಗುತ್ತದೆ. ಆ ವ್ಯಕ್ತಿ ನಂತರ ಬದಲಾಗುವುದಿಲ್ಲ. ಆ ನಟನೆಯಷ್ಟೇ ಮುಗಿದಿರುತ್ತದೆ.
5. ಮೊದಲು ಹೊಗಳಿ, ನಂತರ ನೋವು ಕೊಡುವವನು
ಮೊದಲಿಗೆ ಅವನು ನಿಮ್ಮನ್ನು ಆರಾಧಿಸುತ್ತಾನೆ. “ನೀನು ಅದ್ಭುತ”, “ನಿನ್ನಂತಹವರು ನನಗೆ ಸಿಗುತ್ತಾರೆ ಎಂದು ಭಾವಿಸಲೇ ಇಲ್ಲ” ಎಂದು ಹೇಳುತ್ತಾನೆ. ನಂತರ ಅದೇ ಆರಾಧನೆ ಬದಲಾಗುತ್ತದೆ. ಹಾಸ್ಯದ ಹೆಸರಿನಲ್ಲಿ ಅವಮಾನ, ನೀವು ಚೆನ್ನಾಗಿ ಕಾಣಿಸಿದಾಗ ವಿಚಿತ್ರ ಪ್ರತಿಕ್ರಿಯೆ, ನೀವು ಸಾಧನೆ ಮಾಡಿದಾಗ ದೂರವಾಗುವುದು, ಇತರರು ಮೆಚ್ಚಿದಾಗ ಅಸಹನೆ, ಅರ್ಥವಿಲ್ಲದ ಮೋಸಗಳು ಶುರುವಾಗುತ್ತದೆ. ಕಾರಣವೇನು? ನೀವು ಅವನಿಗಿಂತ ಉತ್ತಮ ಎಂಬ ಸತ್ಯವನ್ನು ಅವನು ತಾಳಲಾರ. ಅಸುರಕ್ಷಿತ ವ್ಯಕ್ತಿ ಪ್ರೀತಿಗಾಗಿ ಅಲ್ಲದೆ ತನ್ನ ಅಹಂಕಾರದ ಶಮನಕ್ಕಾಗಿ ಸಂಬಂಧ ಸಾಧಿಸುತ್ತಾನೆ.
ಇಂಡಕ್ಷನ್ ಸ್ಟೌವ್ ಬಳಸಿ ಕರೆಂಟ್ ಬಿಲ್ ಕಡಿಮೆ ಮಾಡಲು ಈ ಟಿಪ್ಸ್ ಟ್ರೈ ಮಾಡಿ