Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪೆದ್ದಿ ಸಿನಿಮಾ ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ
ಪ್ರಮುಖಮನರಂಜನೆ

ಪೆದ್ದಿ ಸಿನಿಮಾ ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ

Share
2 Min Read
SHARE

https://youtube.com/shorts/8vXYZAagRTI?si=TOMvue_f8l6FavIl

newsics.com

ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಅವರು ‘ಪೆದ್ದಿ’ (Peddi) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬೇಸರದ ವಿಷಯ ಏನೆಂದರೆ, ಈ ಸಿನಿಮಾದ ಚಿತ್ರೀಕರಣದ ವೇಳೆ ರಾಮ್ ಚರಣ್ ಅವರು ಗಾಯಗೊಂಡಿದ್ದಾರೆ. ಮಂಗಳವಾರ (ಮಾರ್ಚ್ 24) ಹೈದರಾಬಾದ್‌ನಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವಾಗ ಈ ಘಟನೆ ನಡೆದಿದೆ. ರಾಮ್ ಚರಣ್ (Ram Charan) ಕಣ್ಣಿಗೆ ಗಾಯವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಆದ್ದರಿಂದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ದೊಡ್ಡ ಗಾಯ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ..
ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ರಾಮ್ ಚರಣ್ ಅವರ ಆಪ್ತ ಮೂಲಗಳು, ನಟನ ಕಣ್ಣಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿವೆ. ‘ಮಂಗಳವಾರ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ರಾಮ್ ಚರಣ್ ಅವರ ಕಣ್ಣಿನ ಮೇಲ್ಭಾಗದಲ್ಲಿ ಸಣ್ಣ ಗಾಯವಾಗಿದೆ. ಇದಕ್ಕಾಗಿ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಆದರೆ ಅವರ ಕಣ್ಣು ಸುರಕ್ಷಿತವಾಗಿದೆ. ಇದು ಸಣ್ಣ ಗಾಯವಾದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರ ತಂಡ ಸ್ಪಷ್ಟಪಡಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ
ಗಾಯವಾದರೂ ಸಹ ರಾಮ್ ಚರಣ್ ಅವರು ಕೆಲಸಕ್ಕೆ ವಿರಾಮ ನೀಡಿಲ್ಲ. ವೈದ್ಯಕೀಯ ಚಿಕಿತ್ಸೆಯ ನಂತರ ಅವರು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ವಿಶ್ರಾಂತಿ ಪಡೆಯದೆ ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಅವರ ವೃತ್ತಿಪರತೆಗೆ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಿನಿಮಾಗೆ ‘ಉಪ್ಪೇನಾ’ ಖ್ಯಾತಿಯ ಬುಚ್ಚಿಬಾಬು ಸನಾ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರು ನಾಯಕಿಯಾಗಿ ನಟಿಸುತ್ತಿದ್ದು, ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಕುತೂಹಲ ಮೂಡಿಸಿದೆ. ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಎ.ಆರ್. ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ವೃದ್ಧಿ ಸಿನಿಮಾಸ್’ ಮೂಲಕ ‘ಪೆದ್ದಿ’ ಸಿನಿಮಾ ನಿರ್ಮಾಣ ಆಗುತ್ತಿದೆ. ಮೊದಲು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಬಳಿಕ ರಿಲೀಸ್ ದಿನಾಂಕ ಮುಂದೂಡಲಾಯಿತು. ಏಪ್ರಿಲ್ 30ರಂದು ವಿಶ್ವದಾದ್ಯಂತ ಈ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ. ರಾಮ್ ಚರಣ್ ಅವರ ಜನ್ಮದಿನದ (ಮಾರ್ಚ್ 27) ಪ್ರಯುಕ್ತ ಚಿತ್ರದ ವಿಶೇಷ ಟೀಸರ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮೊಬೈಲ್ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯವೇನು?

TAGGED:Ram Charan injured during the shooting of Peddi movie
Share This Article
Facebook Twitter Copy Link Print
Previous Article ಮೊಬೈಲ್ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯವೇನು?
Next Article ಮೆಟಾ ಇತಿಹಾಸದಲ್ಲೇ ಬೃಹತ್ ಲೇಆಫ್‌ಗೆ ಸಜ್ಜಾದ ಮಾರ್ಕ್‌ ಜುಕರ್‌ಬರ್ಗ್‌!

Popular Posts

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

You Might Also Like

ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?