https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಅಕ್ಷರಶಃ ಬೆಂಕಿಯುಗುಳುತ್ತಿದ್ದ ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಅಂತಿಮವಾಗಿ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಹೌದು ಮೊದಲ ಗಂಟೆಯಲ್ಲಿ ‘ಯಾವುದೇ ಕಾರಣಕ್ಕೂ ಸೀಜ್‌ಫೈರ್ ಮಾಡಲ್ಲ’ ಎಂದು ಯುದ್ಧದ ಕಿಚ್ಚು ಹಚ್ಚಿದ್ದ ಅದೇ ನಾಲಿಗೆ, ಎರಡನೇ ಗಂಟೆಯಲ್ಲಿ ದಿಢೀರ್ ಆಗಿ ‘ಈಗ ಯುದ್ಧ ನಿಲ್ಲಿಸುವ ಸಮಯ’ ಎಂದು ಶಾಂತಿ ಮಂತ್ರ ಜಪಿಸಿದ್ದೇಕೆ?
ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದಾಗ, ಟ್ರಂಪ್ ಮೊದಲಿಗೆ ಕಠಿಣ ನಿಲುವನ್ನು ತಾಳಿದರು. ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಮೇಲುಗೈ ಸಾಧಿಸಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ನಾವು ಮಾತುಕತೆ ನಡೆಸಬಹುದು, ಆದರೆ ಕದನ ವಿರಾಮ ಬೇಡ ಎಂದು ಸ್ಪಷ್ಟಪಡಿಸಿದರು. ಅವರ ಪ್ರಕಾರ, ಯುದ್ಧಭೂಮಿಯಲ್ಲಿ ಎದುರಾಳಿ ದುರ್ಬಲವಾಗಿರುವಾಗ ನಿಲ್ಲುವುದು ಸರಿಯಲ್ಲ. ಇರಾನ್ ಈಗಾಗಲೇ ಭಾರೀ ನಷ್ಟ ಅನುಭವಿಸಿದೆ ಎಂದು ಅವರು ಹೇಳಿ, ಮಿಲಿಟರಿ ಕಾರ್ಯಾಚರಣೆ ಮುಂದುವರಿಸುವ ಸೂಚನೆ ನೀಡಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಆದರೆ ಈ ಹೇಳಿಕೆಗೆ ಕೇವಲ ಒಂದು ಗಂಟೆಯ ನಂತರವೇ ಅವರು ತಮ್ಮ ನಿಲುವನ್ನು ಬದಲಿಸಿಕೊಂಡರು. ಮತ್ತೆ ಮಾತನಾಡಿದ ಟ್ರಂಪ್, ಇರಾನ್ ಯುದ್ಧವನ್ನು ಈಗ ಕೊನೆಗೊಳಿಸುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಮೆರಿಕ ತನ್ನ ಗುರಿಗಳಿಗೆ ಹತ್ತಿರವಾಗಿದೆ ಎಂದು ಅವರು ಒಪ್ಪಿಕೊಂಡು, ಮುಂದಿನ ಹಂತದಲ್ಲಿ ಮಿಲಿಟರಿ ಕ್ರಮಗಳನ್ನು ಕಡಿಮೆ ಮಾಡುವ ಸಾಧ್ಯತೆ ಸೂಚಿಸಿದರು. ಈ ಯು-ಟರ್ನ್ ಜಾಗತಿಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಈ ಗೊಂದಲಕಾರಿ ನಿಲುವು ಯುದ್ಧದ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹೆಚ್ಚಿಸಿದೆ. ಒಂದು ಕಡೆ ಅಮೆರಿಕ ಕಠಿಣ ಸೈನಿಕ ಕ್ರಮವನ್ನು ಮುಂದುವರಿಸಲು ಬಯಸಿದರೆ, ಇನ್ನೊಂದು ಕಡೆ ಮಾತುಕತೆ ಮತ್ತು ಯುದ್ಧ ಅಂತ್ಯವನ್ನೂ ಪರಿಗಣಿಸುತ್ತಿದೆ. ಇದರಿಂದ ಮಿತ್ರ ರಾಷ್ಟ್ರಗಳಿಗೂ ಸ್ಪಷ್ಟ ಸಂದೇಶ ಸಿಗದೆ ಗೊಂದಲ ಉಂಟಾಗಿದೆ.
https://www.newsics.com/2026/03/21/gold-becomes-cheaper-rs-2940-down-in-a-single-day/