https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಪ್ರಧಾನಿ ರೇಂದ್ರ ಮೋದಿ ಅವರು ದೈವ ಭಕ್ತರು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅದರಂತೆ ಮೋದಿ ಅವರು ಇಂದು ಕನ್ನಡದ ವರನಟ ಡಾ.ರಾಜ್‌ಕುಮಾರ್ ಅಭಿನಯದ ಚಿತ್ರದ ಹಾಡೊಂದನ್ನು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.
ರಾಜ್‌ಕುಮಾರ್ ಅವರು ಬಾಂಡ್ ಸಿನಿಮಾಗಳಿಂದ ಹಿಡಿದು, ಪೌರಾಣಿಕ ಸಿನಿಮಾಗಳವರೆಗೆ, ಆ್ಯಕ್ಷನ್ ಸಿನಿಮಾದಿಂದ ಹಿಡಿದು ಭಕ್ತಿ ಪ್ರಧಾನ ಸಿನಿಮಾವರೆಗೆ ಎಲ್ಲ ರೀತಿಯ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಕೃಷ್ಣದೇವರಾಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ 1970ರಲ್ಲಿ ರಿಲೀಸ್ ಆಯಿತು. ಈ ಚಿತ್ರದ ‘ಶ್ರೀ ಚಾಂಮುಂಡೇಶ್ವರಿ..’ ಹಾಡು ಗಮನ ಸೆಳೆಯಿತು. ಇದನ್ನು ಮೋದಿ ಶೇರ್ ಮಾಡಿಕೊಂಡಿದ್ದಾರೆ.
ಮೋದಿ ಅವರು ಶ್ರೀಕೃಷ್ಣದೇವರಾಯ ಚಿತ್ರದ ಶ್ರೀ ಚಾಂಮುಂಡೇಶ್ವರಿ ಹಾಡನ್ನು ಹಂಚಿಕೊಂಡಿದ್ದು, ‘ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ’ ಎಂದು ಬರೆದುಕೊಂಡು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಈ ಶ್ರೀ ಚಾಂಮುಂಡೇಶ್ವರಿ ಹಾಡನ್ನು ಪಿ. ಲೀಲಾ, ಎಸ್ ಗೋವಿಂದರಾಜು ಹಾಡಿದ್ದಾರೆ. ಪ್ರಭಾಕರ ಶಾಸ್ತ್ರಿ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ.