https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ದೆಹಲಿ ಮೂಲದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಹಾಗೂ ಇನ್‌ಫ್ಲುಯೆನ್ಸರ್ ಯುವರಾಜ್ ದುವಾ ಅವರ ಇತ್ತೀಚಿನ ವಿಡಿಯೋ. ತಮ್ಮ ತಂದೆಯ ಸಿಹಿ ತಿನ್ನುವ ಚಟವನ್ನು ಬಿಡಿಸಲು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿದ್ದರು. ಅಚ್ಚರಿ ಎಂದರೆ, ಸ್ವತಃ ಪ್ರಧಾನಿಯೇ ಈ ವಿಡಿಯೋಗೆ ಸ್ಪಂದಿಸುವ ಮೂಲಕ ಇಂಟರ್ನೆಟ್ ಲೋಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಯುವರಾಜ್ ದುವಾ, ಈ ವಾರದ ಆರಂಭದಲ್ಲಿ ‘ಮೋದಿ-ಪಗ್ಲು ಪಾಪಾ’ ಎಂಬ ಶೀರ್ಷಿಕೆಯಡಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು.
ಅದಕ್ಕೆ ‘ಪಾಪಾ ಕಿ ಶುಗರ್ ಕಮ್ ಕರ್ವಾ ದೋ’ (ದಯವಿಟ್ಟು ನನ್ನ ತಂದೆಯ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿಸಿ) ಎಂಬ ಕ್ಯಾಪ್ಶನ್ ನೀಡಿದ್ದರು. ವಿಡಿಯೋದಲ್ಲಿ ಯುವರಾಜ್, ತಮ್ಮ ತಂದೆ ಪ್ರಧಾನಿ ಮೋದಿಯವರ ಎಷ್ಟು ದೊಡ್ಡ ಅಭಿಮಾನಿ ಎಂಬುದನ್ನು ತಮಾಷೆಯಾಗಿ ವಿವರಿಸಿದ್ದರು. “ನನ್ನ ತಂದೆ ಟಿವಿ ನೋಡುತ್ತಿರುವಾಗ ಮೇಲಿನಿಂದ ಡ್ರ್ಯಾಗನ್ ಹಾರಿಬಂದರೂ ಅವರ ಗಮನ ಬೇರೆಡೆಗೆ ಹರಿಯುವುದಿಲ್ಲ, ಏಕೆಂದರೆ ಅವರು ಮೋದಿಯವರ ಅಪ್ಪಟ ಭಕ್ತರು” ಎಂದು ಹಾಸ್ಯಭರಿತವಾಗಿ ಹೇಳಿಕೊಂಡಿದ್ದರು.
ಆದರೆ, ಈ ಕಥೆಗೆ ಅಸಲಿ ತಿರುವು ಸಿಕ್ಕಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಡಿಯೋಗೆ ಪ್ರತಿಕ್ರಿಯಿಸಿದಾಗ.
“ನಿಮ್ಮ ತಂದೆಯವರ ಈ ಪ್ರೀತಿಯನ್ನು ಕಂಡು ನನಗೆ ತುಂಬಾ ಸಂತೋಷವಾಯಿತು. ನಾನು ಅವರಲ್ಲಿ ಒಂದು ವಿನಂತಿ ಮಾಡುತ್ತೇನೆ. ಅವರು ತಮ್ಮ ಮಗನ ಜೊತೆಗೂ ಅಷ್ಟೇ ಸಮಯ ಕಳೆಯಲಿ ಮತ್ತು ಇಬ್ಬರೂ ಸೇರಿ ದೇಶದ ಪ್ರಗತಿಯ ಬಗ್ಗೆ ಚರ್ಚಿಸಲಿ,” ಎಂದು ಬರೆದಿದ್ದಾರೆ.
ಪ್ರಧಾನಿಯವರ ಈ ಸರಳ ಮತ್ತು ಆತ್ಮೀಯ ಪ್ರತಿಕ್ರಿಯೆಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಕೇವಲ ರಾಜಕೀಯವಲ್ಲದೆ, ಸಾಮಾನ್ಯ ಜನರ ಭಾವನೆಗಳಿಗೂ ಮೋದಿ ಅವರು ಸ್ಪಂದಿಸುತ್ತಾರೆ ಎಂದು ಅನೇಕರು ಶ್ಲಾಘಿಸಿದ್ದಾರೆ.
https://www.instagram.com/reel/DV6Io_PjrZP/?igsh=M2E1amJpdXdqaGlq