https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಬೆಳಗಾವಿ : ಸಿಬಿಐ ಡೈರೆಕ್ಟರ್ ಹೆಸರಿನಲ್ಲಿ ನಗರದ ವೃದ್ಧ ನಾಗರಿಕರೊಬ್ಬರಿಗೆ ಕರೆ ಮಾಡಿದ ಆನಲೈನ್ ಅಪರಾಧಿಗಳು ಬರೋಬ್ಬರಿ 15.45ಕೋಟಿ RTGS ಮೂಲಕ ಲಪಟಾಯಿಸಿರುವ ಮಾಹಿತಿ ತಡವಾಗಿ ಹೊರಬಿದ್ದಿದ್ದು, FIR ದಾಖಲಾಗಿದೆ.
ಕೇಂದ್ರ ತನಿಖಾ ದಳದ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಎಂದು ಹೇಳಿಕೊಂಡು ನಗರದ ಹಿರಿಯ ನಾಗರಿಕರಾದ ಇಲ್ಲಿನಟಿಳಕವಾಡಿ ಅಗರಕರ ರಸ್ತೆಯ ಅಜಿತ ಗೋಪಾಲಕೃಷ್ಣ ಸರಾಫ್ (81) ಎಂಬುವವರಿಗೆ ಕಳೆದ ಫೆ. 5ರಂದು ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿ ಹೆಸರಿಸಿರುವುದು ಹೊರ ಬಿದ್ದಿದೆ. ಫೆ. 5ರ ಬೆಳಿಗ್ಗೆ ಸಿಬಿಐ ಕಚೇರಿಯಿಂದ ಫೋನ್ ಮಾಡುತ್ತಿರುವುದಾಗಿ ಮೊ. ಸಂಖ್ಯೆ : 9084065580 ಯಿಂಸ ವಂಚನೆಗೊಳಗಾದ ಅಜಿತ ಗೋಪಾಲಕೃಷ್ ಸರಾಫ್ ಎಂಬುವವರ ಮೊಬೈಲ್ 9448231246 ಗೆ ಕರೆ ಮಾಡಿ ನಿಮ್ಮಬಳಿ ಎರಡು ಆಕ್ಟೀವ್ ಸಿಮ್ ಕಾರ್ಡ್ ಇವೆ ಅವುಗಳಿಂದ ಜೆಟ್ ಏರವೇಸ್ ಸಿಇಓ ನರೇಶ್ ಗೋಯಲ್ ಅವರಿಗೆ ಕರೆ ಮಾಡಿ ಸಂಪರ್ಕ ಹೊಂದಿದ್ದೀರಿ ಎಂದು ಕಥೆ ಕಟ್ಟಿ ಹೆದರಿಸಿದ್ದು, ಸದ್ಯ ನರೇಶನನ್ನು ಬಂಧಿಸಲಾಗಿದ್ದು ನೀವು ನರೇಶನೊಂದಿಗೆ ಮನಿಲಾಂಡರಿಂಗ್ನಲ್ಲಿತೊಡಗಿ 25ಲಕ್ಷ ಹಣಕೆನರಾ ಬ್ಯಾಂಕ್ ಕೊಟ್ಟು 5ಲಕ್ಷ ಕಮಿಷನ್ ಪಡೆದಿದ್ದೀರಿ ಎಂದು ದೂರುದಾರರಿಗೆ ಹೆದರಿಸಿರುವುದು ನಗರದ ಟಿಳಕವಾಡಿ ಠಾಣೆಯಲ್ಲಿ ದಾಖಲಿಸಲಾದ ಪ್ರಥಮ ವರ್ತಮಾನ ವರದಿಯಲ್ಲಿ ನಮೂದಾಗಿದೆ.
ಈ ಆನಲೈನ್ ಅಪರಾಧಿಗಳು ದೂರುದಾರರ ಎಫ್ ಡಿ ಹ ಹಾಗೂ ಷೇರುಗಳ ಬಗ್ಗೆ ಮಾಹಿತಿ ಪಡೆದು ದೂರುದಾರರು ಮೋತಿಲಾಲ ಓಸ್ವಾಲ್ ಕಂಪನಿಯಲ್ಲಿ ಹೊಂದಿದ್ದ ಹೂಡಿಕೆ ಷೇರುಗಳನ್ನು ಮಾರಿಸಿ ವಂಚನೆಗೊಳಗಾದ ದೂರುದಾರನಿಂದ 15.45ಕೋಟಿ ಹಣವನ್ನು RTGS ಮೂಲಕ ಫೆ. 7ರಂದು ಮತ್ತು ಮಾರ್ಚ್ 9ರವರೆಗೆ ಲಪಟಾಯಿಸಿರುವುದು ಗಮನ ಸೆಳೆದಿದೆ.
ಸಿಬಿಐ ನಿರ್ದೇಶಕ, ಕೆ.ಸುಬ್ರಹ್ಮಣ್ಯಂ, ಸಿಬಿಐ ಚೀಫ್ ಶಿವಾ ಸುಬ್ರಹ್ಮಣ್ಯ ಹಾಗೂ ಆರ್ ಬಿಐ ವಿಚಕ್ಷಣಾಧಿಕಾರಿ ಜಾರ್ಜ್ ಮ್ಯಾಥ್ಯೂ ಹೆಸರಿನ ವಂಚಕರು ಬೃಹತ್ ಹಣಕಾಸಿನ ಅಪರಾಧ ಎಸಗಿರುವುದ ಬೆಳಗಾವಿ ಪೊಲೀಸರ ನಿದ್ದೆಗೆಡಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ 66ಡಿ, 66ಸಿ, BNS 2023ರ 318(4), 319(2) ರ ಅಡಿ ಪ್ರಕರಣ ಮಾರ್ಚ್ 18ರಂದು ಪ್ರಕರಣ ದಾಖಲಾಗಿದೆ.
ಬೆಳಗಾವಿ ಸಿಇಎನ್ ಠಾಣೆ ಪೋಲಿಸ್ ಇನ್ಸಪೆಕ್ಟರ್ ಶ್ರೀಶೈಲ್ ಗಾಬಿ ಅವರು ತನಿಖೆ ಕೈಗೊಂಡಿದ್ದಾರೆ.
https://www.newsics.com/2026/03/21/one-of-the-twins-who-married-off-twin-sisters-commits-suicide/