Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ನಟ ಪ್ರಕಾಶ್ ರಾಜ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ;ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
Uncategorized

ನಟ ಪ್ರಕಾಶ್ ರಾಜ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ;ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

Share
1 Min Read
SHARE

ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಭಾರತದ ಚುನಾವಣಾ ನಿಯಮಗಳ ಪ್ರಕಾರ, ಒಬ್ಬ ನಾಗರಿಕ ದೇಶದ ಯಾವುದೇ ಒಂದು ಕಡೆಯಲ್ಲಿ ಮಾತ್ರ ಮತದಾರರ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಆದರೆ, ನಟ ಪ್ರಕಾಶ್ ರಾಜ್ ಅವರು ನಿಯಮಗಳನ್ನು ಗಾಳಿಗೆ ತೂರಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಕಾಶ್ ರಾಜ್ ಹೆಸರಿನಲ್ಲಿ ವೋಟರ್ ಐಡಿಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಇದು ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ.

ಕೋರ್ಟ್ ಮೆಟ್ಟಿಲೇರಿದ್ದ ದೂರು
ಈ ಅಕ್ರಮದ ಕುರಿತಾಗಿ ದಿಲೀಪ್ ಕುಮಾರ್ ಎಂಬುವವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಈ ಹಿಂದೆ ನಟ ಪ್ರಕಾಶ್ ರಾಜ್ ಅವರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದ ನಟ
ನ್ಯಾಯಾಲಯ ನೀಡಿದ ಎರಡು ಸಮನ್ಸ್‌ಗಳಿಗೂ ಬೆಲೆ ಕೊಡದ ಪ್ರಕಾಶ್ ರಾಜ್, ವಿಚಾರಣೆಗೆ ಹಾಜರಾಗದೆ ಗೈರುಳಿದಿದ್ದರು. ನ್ಯಾಯಾಲಯದ ಆದೇಶವನ್ನು ಪದೇ ಪದೇ ನಿರ್ಲಕ್ಷಿಸಿದ ನಟನ ವರ್ತನೆಗೆ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅವರ ವಿರುದ್ಧ ಈಗ ನೇರವಾಗಿ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಸದಾ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಸಕ್ರಿಯರಾಗಿರುವ ಪ್ರಕಾಶ್ ರಾಜ್ ಅವರಿಗೆ ಈ ಅಕ್ರಮ ಮತದಾರರ ಗುರುತಿನ ಚೀಟಿ ಪ್ರಕರಣವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಾರಾ ಅಥವಾ ಕಾನೂನು ಹೋರಾಟ ಮುಂದುವರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

 

TAGGED:Prakash Raj: Arrest warrant issued against actor Prakash Raj: Arrest possible at any moment
Share This Article
Facebook Twitter Copy Link Print
Previous Article ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ.. ಫಹಾದ್ ಫಾಸಿಲ್ ಡಿವೋರ್ಸ್‌ ವಂದತಿ ನಿಜನಾ..?
Next Article Toxic release ಮತ್ತೆ ಬದಲಾಯ್ತು ಟಾಕ್ಸಿಕ್ ರಿಲೀಸ್ ದಿನ: ಅಧಿಕೃತ ದಿನಾಂಕ ಘೋಷಿಸಿದ ಚಿತ್ರತಂಡ

Popular Posts

Toxic release ಮತ್ತೆ ಬದಲಾಯ್ತು ಟಾಕ್ಸಿಕ್ ರಿಲೀಸ್ ದಿನ: ಅಧಿಕೃತ ದಿನಾಂಕ ಘೋಷಿಸಿದ ಚಿತ್ರತಂಡ

1 Min Read

ನಟ ಪ್ರಕಾಶ್ ರಾಜ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ;ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

1 Min Read

ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ.. ಫಹಾದ್ ಫಾಸಿಲ್ ಡಿವೋರ್ಸ್‌ ವಂದತಿ ನಿಜನಾ..?

2 Min Read

ಮೈಸೂರು ದಸರಾದಲ್ಲಿ ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

1 Min Read

You Might Also Like

ಪ್ರಮುಖUncategorized

ಭಯ ಹುಟ್ಟಿಸುವ 5 ಪ್ರಾಣಿಗಳು: ಶಿವನೊಂದಿಗೆ ಅವುಗಳ ನಂಟೇನು?

1 Min Read
Uncategorized

ವೆಂಕಟೇಶ್-ಕಲ್ಯಾಣ್ ರಾಮ್ ಜೊತೆ ಅನಿಲ್ ರವಿಪುಡಿ ಹೊಸ ಸಿನಿಮಾ ಆರಂಭ; ಕೀರ್ತಿ ಸುರೇಶ್ ಎಂಟ್ರಿ

1 Min Read
Uncategorized

ಸಂಗಾತಿ ಜತೆ ಜಗಳವಾಡಿತಾ ಗೊರಿಲ್ಲಾ? ಪಾಥೋ ಮೂಡ್‌ನ ವೈರಲ್ ವಿಡಿಯೋ ನೋಡಿ

1 Min Read
Uncategorized

Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?