https://youtube.com/shorts/DiU6l59Harw?si=ZuaOlVBTxzvWqxLP
newsics.com
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫಂಕ್ಷನ್ ಒಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಸಹಜವಾಗಿ ಸೆಲೆಬ್ರಿಟಿ ದಂಪತಿ ಒಟ್ಟಿಗೇ ಬರುವಾಗ ಕೈ ಕೈ ಹಿಡಿದು ಬರುವುದು ಮಾಮೂಲು. ಇಲ್ಲಿಯೂ ಅದೇ ರೀತಿ ಆಗಿದೆ.
ಮುಕೇಶ್ ಅಂಬಾನಿ ಅವರು, ನೀತಾ ಜೊತೆ ಕಾಣಿಸಿಕೊಂಡಾಗ, ಆರಂಭದಲ್ಲಿ ಅವರ ಕೈ ಹಿಡಿದಿದ್ದಾರೆ. ಕೈ ಹಿಡಿಯುತ್ತಿದ್ದಂತೆಯೇ ನೀತಾ ತಪ್ಪಿಸಿಕೊಂಡು ಅತ್ತ ಸಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ವಲ್ಪ ಗರಂ ಆಗಿದ್ದಂಗೆ ಕಂಡಿತು.
ಆದರೆ ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇದೆ ಎನ್ನುವುದು ತಿಳಿಯುತ್ತಲೇ ಸ್ವಲ್ಪ ಮುಂದೆ ಬಂದಾಗ ಮುಕೇಶ್ ಅವರು ಮತ್ತೊಮ್ಮೆ ಕೈಹಿಡಿದುಕೊಳ್ಳಲು ಮುಂದಾದಾಗ, ಅವರು ಟಚ್ ಮಾಡುತ್ತಿದ್ದಂತೆಯೇ ನೀತಾ ಅತ್ತ ಹೋಗಿದ್ದಾರೆ.
ಅದೂ ಸಾಲದು ಎನ್ನುವಂತೆ ಕೊನೆಯದಾಗ ಮತ್ತೆ ಮುಂದೆ ಬಂದಾಗ ಮುಕೇಶ್ ಅವರು ಸೊಂಟದ ಮೇಲೆ ಕೈಹಾಕಲು ಹೋದಾಗಲೂ ನೀತಾ ತಪ್ಪಿಸಿಕೊಂಡು ಹೋಗಿದ್ದಾರೆ.
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಹಲವಾರು ಮಂದಿ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.