https://youtube.com/shorts/DiU6l59Harw?si=ZuaOlVBTxzvWqxLP
newsics.com
ಬೆಳಗಿನ ದಿನಚರಿಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ಜೀವನಕ್ಕೆ ಎದುರಾಗುವ ಅನೇಕ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ನೀವೇನಾದರೂ, ಜೀವನದಲ್ಲಿ ಪ್ರಗತಿಯನ್ನು ಕಾಣಬೇಕೆಂದು ಬಯಸಿದರೆ, ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ…
ನಕಾರಾತ್ಮಕ ಆಲೋಚನೆಗಳೊಂದಿಗೆ ದಿನವನ್ನು ಪ್ರಾರಂಭಿಸಬೇಡಿ.
ಪ್ರತಿಯೊಬ್ಬ ಮನುಷ್ಯನಿಗೆ ಮನಸ್ಸು ಮತ್ತು ಮಾತನ್ನು ಶುದ್ಧೀಕರಿಸುವುದು ಬಹಳ ಮುಖ್ಯವಾಗಿರುತ್ತದೆ. ಆದಾಗ್ಯೂ, ನೀವು ಒತ್ತಡ, ಕೋಪ ಅಥವಾ ದೂರುಗಳ ಬಗ್ಗೆ ಯೋಚಿಸುತ್ತಾ ಎಚ್ಚರಗೊಂಡರೆ, ಅದು ಇಡೀ ದಿನ ನಿಮ್ಮ ದಿನದ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಎದ್ದ ತಕ್ಷಣ ನಿಮ್ಮ ಮನೆಯ ದೇವರನ್ನು ಸ್ಮರಿಸಿ ಇದು ನಿಮ್ಮ ದಿನವನ್ನು ಉತ್ತಮವಾಗಿ ಕಳೆಯಲು ಸಹಾಯ ಮಾಡುತ್ತದೆ.
ಜೋರಾಗಿ ನೆಲದ ಮೇಲೆ ಕಾಲಿಡಬೇಡಿ
ವಾಸ್ತು ಶಾಸ್ತ್ರದಲ್ಲಿ, ಭೂಮಿಯನ್ನು “ತಾಯಿ” ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜೋರಾಗಿ ನಡೆಯುವುದು, ನೆಲವನ್ನು ತುಳಿಯುವುದು ಮತ್ತು ಕೋಪದಿಂದ ಹಾಸಿಗೆಯಿಂದ ಎದ್ದೇಳುವ ಅಭ್ಯಾಸವನ್ನು ಇಂದಿಗೇ ನಿಲ್ಲಿಸಿ ಇಲ್ಲದಿದ್ದರೆ, ಇದು ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ಉಂಟು ಮಾಡುವುದರ ಜೊತೆಗೆ, ಆರ್ಥಿಕ ತೊಂದರೆಗಳು ಉಂಟಾಗಬಹುದು.
ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಬೇಡಿ
ಸಾಮಾನ್ಯವಾಗಿ, ಜನರು ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮ ಮುಖಗಳನ್ನು ನೋಡಿಕೊಳ್ಳುತ್ತಾರೆ. ಇದು ವಾಸ್ತು ಪ್ರಕಾರ, ಶುಭವಲ್ಲ ಎಂದು ಹೇಳುತ್ತಾರೆ. ಬೆಳಿಗ್ಗೆ ಎದ್ದಾಗ ನಿಮ್ಮ ಮುಖವು ನಿದ್ರೆಯಿಂದ ಕೂಡಿರುವುದರಿಂದ ಕನ್ನಡಿಯಲ್ಲಿ ನೋಡಿಕೊಂಡಾಗ ನಕರಾತ್ಮಕ ಶಕ್ತಿಯನ್ನು ಎಳೆದುಕೊಳ್ಳುತ್ತದೆ. ಇದರಿಂದ ನಿಮ್ಮ ಮನೆಯ ಲಕ್ಷ್ಮೀ ದೇವಿ ಕೋಪಗೊಳ್ಳಬಹುದು.
ತಡವಾಗಿ ಎಚ್ಚರಗೊಳ್ಳಬೇಡಿ
ಬ್ರಹ್ಮ ಮುಹೂರ್ತದ ಸಮಯದಲ್ಲಿ ಏಳುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಸೂರ್ಯ ಉದಯಿಸಿದ ನಂತರ ಹಾಗೂ ಸೂರ್ಯ ಮುಳುಗುವ ಸಮಯದಲ್ಲಿ ಮಲಗುವುದನ್ನು ದಾರಿದ್ರ್ಯ ಎಂದು ಕರೆಯಲಾಗುತ್ತದೆ. ಇದರಿಂದ ನಿಮ್ಮ ಮನೆಯ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆ ಬರಬಹುದು.
ಪ್ರಗತಿಗಾಗಿ ಬೆಳಿಗ್ಗೆ ಮಾಡಬೇಕಾದ ಕೆಲಸಗಳು
ಬೆಳಿಗ್ಗೆ ಎದ್ದ ನಂತರ ಮೊದಲ 10 ನಿಮಿಷಗಳ ಕಾಲ ಮೌನವಾಗಿರಿ. ಮಂತ್ರಗಳನ್ನು ಪಠಿಸಿರಿ. ಜೊತೆಗೆ ಕೆಲವೊಂದು ವಾಸ್ತು ತತ್ವಗಳನ್ನು ಸೇರಿಸಿಕೊಂಡರೆ, ನಿಮ್ಮ ವೃತ್ತಿ ಮತ್ತು ಆರ್ಥಿಕ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತವೆ.
ಅಂತರ್ಜಾತಿ ವಿವಾಹಿತರ ರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ: ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ