https://youtube.com/shorts/DiU6l59Harw?si=ZuaOlVBTxzvWqxLP
newsics.com
ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿತ್ತು. ಆದರೆ ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತದ ನಂತರ ಚಿನ್ನದ ಬೆಲೆಯು 15 ಸಾವಿರದ ಮಿತಿಯೊಳಗೆ ಬಂದು ನಿಂತಿದೆ. ಸೋಮವಾರವೂ ತೀವ್ರ ಕುಸಿತ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ಸ್ವಲ್ಪ ಚೇತರಿಕೆ ಕಂಡಿದೆ. ಇದೀಗ ಬುಧವಾರ ಮತ್ತೆ ಅಲ್ಪಮಟ್ಟಿಗೆ ಕುಸಿತ ಕಂಡಿದೆ.
ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರಿಲ್ಲ. ಬದಲಾಗಿ ಕುಸಿಯುತ್ತಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ತನ್ನ ಹಣಕಾಸು ನೀತಿಯನ್ನು ಘೋಷಣೆ ಮಾಡುವ ಮೊದಲು ಹೂಡಿಕೆದಾರರು ಎಚ್ಚರಿಕೆಯ ನಿಲುವು ತೆಗೆದುಕೊಂಡಿರುವ ಕಾರಣ ಚಿನ್ನ-ಬೆಳ್ಳಿ ವಹಿವಾಟು ದುರ್ಬಲವಾಗಿ ಆರಂಭವಾಗಿದೆ. ಫೆಡರಲ್ ರಿಸರ್ವ್ ದರ ಕಡಿತ ಮಾಡುವ ನಿರ್ಧಾರ ಪ್ರಕಟಿಸುವುದೆ ಇಲ್ಲವೇ ಎನ್ನುವತ್ತ ಹೂಡಿಕೆದಾರರ ಚಿತ್ತ ಹರಿದಿದೆ.
ಇಂದಿನ ಚಿನ್ನದ ದರ ಹೇಗಿದೆ?
ಮಾರ್ಚ್ 18ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 33 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,57,750 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 30 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,44,600 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 25 ರೂ. ಕುಸಿದು ಹತ್ತು ಗ್ರಾಂಗೆ 1,18,310 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮಾರ್ಚ್ 18ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,775 (-33) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,460 (-30) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,831 (-25) ರೂ. ಬೆಲೆಗೆ ತಲುಪಿದೆ.
ಭಾರೀ ಕುಸಿತ ಕಂಡ ಬೆಳ್ಳಿ
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರಂದು ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5ರೂ. ಕುಸಿದು ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ನಂತರ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ಆಗಿತ್ತು. ಬುಧವಾರ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ಗುರುವಾರ 10 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ತಲುಪಿದೆ. ಶುಕ್ರವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಆದರೆ ಶನಿವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿಗೆ 2,75,000 ರೂ. ಗೆ ತಲುಪಿತ್ತು. ಸೋಮವಾರ ಮಾರ್ಚ್ 16ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ತಲುಪಿದರೆ, ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ ಮತ್ತೆ 2,75,000 ರೂ.ಗೆ ಬಂದು ನಿಂತಿದೆ. ಇದೀಗ ಬುಧವಾರ ಪ್ರತಿಗ್ರಾಂಗೆ 10 ರೂ. ಕುಸಿತ ಕಂಡಿರುವ ಬೆಳ್ಳಿ ಪ್ರತಿ ಕೆಜಿಗೆ 2,65,000 ರೂ.ಗೆ ಬಂದಿದೆ.