https://youtube.com/shorts/Uyg7eLAiO4c?si=HGl_mdjplGhkcNCz
newsics.com
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ನೆರಳು ಈಗ ಚಿತ್ರರಂಗದ ಮೇಲೂ ಬಿದ್ದಿದೆ. ಈ ಪ್ರಕರಣದ ಎಳೆಗಳನ್ನು ಹೋಲುವ ಕಥಾಹಂದರ ಹೊಂದಿರುವ ‘ಬಾಸ್’ ಚಲನಚಿತ್ರದ ವಿರುದ್ಧ ದರ್ಶನ್ ಪರ ವಕೀಲರು ದೂರು ದಾಖಲಿಸಿದ್ದಾರೆ.
ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಲೇವಾರಿಯಾಗದ ಕಾರಣ, ಸತ್ಯಾಸತ್ಯತೆ ತಿಳಿಯುವ ಮೊದಲೇ ಸಿನಿಮಾ ಮೂಲಕ ಘಟನೆಯನ್ನು ವೈಭವೀಕರಿಸುವುದು ಸರಿಯಲ್ಲ ಎಂದು ವಕೀಲರು ವಾದಿಸಿದ್ದಾರೆ.
ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ನೈಜ ಘಟನೆಗಳನ್ನು ಆಧರಿಸಿ ನಿರ್ಮಾಣವಾಗಿದೆ ಎನ್ನಲಾದ ‘ಬಾಸ್’ (Boss) ಚಿತ್ರದ ಬಿಡುಗಡೆಗೆ ಈಗ ಕಾನೂನು ತೊಡಕು ಎದುರಾಗಿದೆ. ದರ್ಶನ್ ಪರ ವಕೀಲರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ನೋಟಿಸ್ ನೀಡಿದ್ದು, ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು ಎಂದು ಒತ್ತಾಯಿಸಿದ್ದಾರೆ.