https://youtube.com/shorts/Uyg7eLAiO4c?si=HGl_mdjplGhkcNCz
newsics.com
ನಟ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಅಭಿನಯದ ಬಹು ನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.ಈ ಕುರಿತು ಸ್ವತಃ ನಟನೇ ಸ್ಪಷ್ಟನೆ ನೀಡಿದ್ದಾರೆ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀಲೀಲಾ ವೇದಿಕೆ ಮೇಲೆ ನಿಂತಿದ್ದರು. ನಟ ಪವನ್ ಕಲ್ಯಾಣ್, ನಿರ್ದೇಶಕ ಹರೀಶ್ ಶಂಕರ್ ಸೇರಿದಂತೆ ಹಲವರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ನಟಿ ಶ್ರೀಲೀಲಾ ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ರತ್ತ ತಿರುಗಿ ನೋಡಿದ್ದರು.
ಈ ವಿಡಿಯೋ ವೈರಲ್ ಆಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ನಟ ಮಹೇಶ್ ಅಚಂತಾ, ‘ಅಂತಹುದೇನೂ ಆಗಿಲ್ಲ.. ಶ್ರೀಲೀಲಾ ಫೋನ್ ಕೊಟ್ಟಿದ್ರು.. ಹಿಡ್ಕೊಂಡಿದ್ದೆ ಅಷ್ಟೇ.. ಅಲ್ಲೇನೂ ಆಗಿಲ್ಲ.. ನಾನೇನೂ ಮಾಡಿಲ್ಲ..’ ಎಂದು ಪೋಸ್ಟ್ ಮಾಡಿದ್ದಾರೆ.
ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ತರಹೇವಾರಿ ಹೆಡ್ ಲೈನ್ ಗಳನ್ನು ನೀಡಿ ವ್ಯಾಪಕ ವೈರಲ್ ಮಾಡಲಾಗುತ್ತಿತ್ತು.
https://www.newsics.com/2026/03/17/big-shock-for-boss-movie-darshans-lawyer-sends-notice-to-cbfc/