newsics.com
2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಇದೇ ಮಾರ್ಚ್ 18ರಿಂದ ಏಪ್ರಿಲ್ 2ರ ವರೆಗೆ ನಡೆಯಲಿದ್ದು, ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.
ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆ ವರೆಗೆ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ಬರೆಯಬೇಕಾದರೆ ಹಾಲ್ ಟಿಕೆಟ್ ಅವಶ್ಯವಾಗಿದೆ. ಅದೇ ರೀತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬಸ್ ಕಂಡೆಕ್ಟರ್ಗೆ ಹಾಲ್ ಟಿಕೆಟ್ ತೋರಿಸಿದರಷ್ಟೇ ಉಚಿತವಾಗಿ ಪ್ರಯಾಣಿಸುವ ಅವಕಾಶ ಸಿಗಲಿದೆ.
ಕರ್ನಾಟಕ ಎಸ್ಎಸ್ಎಲ್ಸಿ ವೇಳಾಪಟ್ಟಿ 2026 ಪ್ರಕಾರ, 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ. ಈ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುತ್ತಿದೆ.
ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
* ಎಸ್ಎಸ್ಎಲ್ಸಿ ಪರೀಕ್ಷೆ ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ಗಂಟೆವರೆಗೆ ಇರಲಿದ್ದು, ಒಟ್ಟು ಪರೀಕ್ಷಾ ಅವಧಿ 3 ಗಂಟೆ 15 ನಿಮಿಷಗಳು.
* ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಸಮಯ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಯನ್ನು ಬೆಳಿಗ್ಗೆ 10 ಗಂಟೆಗೆ ನೀಡಲಾಗುತ್ತದೆ. ನಂತರ ವಿದ್ಯಾರ್ಥಿಗಳು 10:15ರಿಂದ ಉತ್ತರ ಬರೆಯಲು ಆರಂಭಿಸಬಹುದು.
* ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ಅಂದರೆ, ಬೆಳಿಗ್ಗೆ 9:45ರಿಂದ 10 ಗಂಟೆಯೊಳಗೆ ತಲುಪಲು ಸೂಚಿಸಲಾಗಿದೆ.
* ಹಾಲ್ ಟಿಕೆಟ್ (ಪ್ರವೇಶ ಪತ್ರ) ಮತ್ತು ಅಗತ್ಯ ದಾಖಲೆಗಳನ್ನು ಜೊತೆಯಲ್ಲಿ ತರಬೇಕು ಎಂದು ಮಂಡಳಿ ಸೂಚಿಸಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ
ಮಾರ್ಚ್ 18 – ಪ್ರಥಮ ಭಾಷೆ
ಮಾರ್ಚ್ 23 – ವಿಜ್ಞಾನ
ಮಾರ್ಚ್ 25 – ದ್ವಿತೀಯ ಭಾಷೆ
ಮಾರ್ಚ್ 28 – ಗಣಿತ
ಮಾರ್ಚ್ 30 – ತೃತೀಯ ಭಾಷೆ
ಏಪ್ರಿಲ್ 2 – ಸಮಾಜ ವಿಜ್ಞಾನ
ವಿಷಯವಾರು ವೇಳಾಪಟ್ಟಿ
* ಮಾರ್ಚ್ 18: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (ಎನ್ಸಿಇಆರ್ಟಿ), ಸಂಸ್ಕೃತಿ)
* ಮಾರ್ಚ್ 23: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
* ಮಾರ್ಚ್ 25: ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ)
* ಮಾರ್ಚ್ 28: ಕೋರ್ ಸಬ್ಜೆಕ್ಟ್ (ಗಣಿತ, ಸಮಾಜಶಾಸ್ತ್ರ)
* ಮಾರ್ಚ್ 30: ತೃತೀಯ ಭಾಷೆ (ಹಿಂದಿ (NCERT), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ)
* ಏಪ್ರಿಲ್ 1: ಜಿ.ಟಿ.ಎಸ್. ವಿಷಯಗಳು (ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – IV, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್ – IV, ಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ – IV, ಪ್ರೋಗ್ರಾಮಿಂಗ್ ಇನ್ ANSI ‘C’)
* ಏಪ್ರಿಲ್ 2: ಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನ
ಡ್ರೆಸ್ಕೋಡ್ ಮತ್ತು ನಿಯಮಗಳು
* ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸುವುದು ಕಡ್ಡಾಯ.
* ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಸರಳ ಹಾಗೂ ಸರಿಯಾದ ಶಾಲೆಯ ಯೂನಿಫಾರ್ಮ್ ಧರಿಸಿ ಬರಬೇಕು.
ಪರೀಕ್ಷಾ ಕೇಂದ್ರದಲ್ಲಿ ಯಾವೆಲ್ಲಾ ವಸ್ತುಗಳಿಗೆ ಅನುಮತಿ?
* ಎಸ್ಎಸ್ಎಲ್ಸಿ ಹಾಲ್ ಟಿಕೆಟ್
* ನೀಲಿ ಅಥವಾ ಕಪ್ಪು ಬಣ್ಣದ ಬಾಲ್ಪಾಯಿಂಟ್ ಪೆನ್ಗಳು
* ಜಾಮಿಟರ್ ಬಾಕ್ಸ್ (ಗಣಿತ ಪರೀಕ್ಷೆಗೆ)
* ಪಾರದರ್ಶಕ ನೀರಿನ ಬಾಟಲ್
* ಪರೀಕ್ಷೆಗೆ ಅಗತ್ಯವಿರುವ ವಸ್ತುಗಳು
* ಮುಖ್ಯವಾಗಿ ಹಾಲ್ ಟಿಕೆಟ್ ಇಲ್ಲದಿದ್ದರೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್ಗೆ ಪ್ರವೇಶ ನೀಡಲಾಗುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.
ಯಾವೆಲ್ಲಾ ವಸ್ತುಗಳಿಗೆ ನಿಷೇಧ?
* ಮೊಬೈಲ್ ಫೋನ್ಗಳು
* ಸ್ಮಾರ್ಟ್ ವಾಚ್ಗಳು
* ಬ್ಲೂಟೂತ್ ಸಾಧನಗಳು, ಇಯರ್ಫೋನ್ಗಳು
* ಕ್ಯಾಲ್ಕ್ಯುಲೇಟರ್ಗಳು (ವಿಶೇಷವಾಗಿ ಅನುಮತಿ ನೀಡಿದಲ್ಲಿ ಮಾತ್ರ)
* ನೋಟ್ಸ್ ಅಥವಾ ಚೀಟಿಗಳು
* ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು
* ಈ ಮೇಲಿನ ನಿಯಮಗಳನ್ನು ಉಲ್ಲಂಘಿಸಿದರೆ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು
* ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷ ಮುಂಚಿತವಾಗಿ ತಲುಪಬೇಕು.
* ನಿಗದಿಪಡಿಸಿದ ಆಸನದಲ್ಲಿ ಕುಳಿತುಕೊಳ್ಳಬೇಕು.
* ಉತ್ತರ ಪತ್ರಿಕೆಯ ಮೇಲೆ ನೋಂದಣಿ ಸಂಖ್ಯೆ ಮತ್ತು ವಿಷಯದ ಕೋಡ್ ಅನ್ನು ಎಚ್ಚರಿಕೆಯಿಂದ ಬರೆಯಬೇಕು.
* ಪರೀಕ್ಷಾ ಕೊಠಡಿಯಲ್ಲಿ ನಿಶ್ಶಬ್ದ ಮತ್ತು ಶಿಸ್ತು ಕಾಯ್ದುಕೊಳ್ಳಬೇಕು.
* ಪರೀಕ್ಷಾ ಅಧಿಕಾರಿಗಳು ನೀಡುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
* ಜೊತೆಗೆ, ಪರೀಕ್ಷೆಗೆ ಮುನ್ನವೇ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ನಲ್ಲಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು, ಇದರಿಂದ ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲ ಉಂಟಾಗುವುದನ್ನು ತಪ್ಪಿಸಬಹುದು. ಒಟ್ಟಿನಲ್ಲಿ ಪರೀಕ್ಷೆ ಬರೆಯುವ ಎಲ್ಲಾ ವಿದಾರ್ಥಿಗಳಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದುವುದು ‘ದ್ವಿಪತ್ನಿತ್ವ’ ವಲ್ಲ ಎಂದ ಹೈಕೋರ್ಟ್!