https://youtube.com/shorts/JFDfzeRUAUw?si=UPiQjhCFAIkLXEhb
newsics.com
ಕಳೆದ ವರ್ಷ ಆರ್‌ಸಿಬಿಯ ಮೊದಲ ಐಪಿಎಲ್ ಪ್ರಶಸ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಯಶ್ ದಯಾಳ್ ಗುಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ವಾಸ್ತವವಾಗಿ ಯಶ್ ದಯಾಳ್ ಹುಡುಗಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾತ್ರವಲ್ಲದೆ ಅವರನ್ನು ಯಾವಾಗ ಬೇಕಾದರೂ ಬಂಧಿಸಿ ಜೈಲಿಗಟ್ಟಬಹುದು. ಹೀಗಿರುವಾಗ ಯಶ್ ದಯಾಳ್ ರಹಸ್ಯವಾಗಿ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.ಈ ಜೋಡಿ ಫೆಬ್ರವರಿ 4ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಆದರೆ ಕ್ರಿಕೆಟ್ ಜಗತ್ತಿನಿಂದ ಯಾರೂ ಮದುವೆಗೆ ಹಾಜರಾಗಿರಲಿಲ್ಲ
ಶ್ವೇತಾ ಪುಂಡಿರ್ ದೆಹಲಿ ಮೂಲದ ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ವ್ಲಾಗರ್. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 5.87 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಶ್ವೇತಾ ಇಂಟರ್‌ಕಾಂಟಿನೆಂಟಲ್ ಲೆಜೆಂಡ್ಸ್ ಲೀಗ್‌ನ ಪ್ರಸಾರಕರಾಗಿಯೂ ಕೆಲಸ ಮಾಡಿದ್ದರು.
ಕಳೆದ ವರ್ಷ ಆರ್‌ಸಿಬಿ ತಂಡದ ಗೆಲುವಿನಲ್ಲಿ ಎಡಗೈ ವೇಗಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಆರ್‌ಸಿಬಿ ಪ್ರಶಸ್ತಿ ಗೆದ್ದ ಕೆಲವೇ ದಿನಗಳಲ್ಲಿ, ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ದಯಾಳ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ದಯಾಳ್ ಅವರೊಂದಿಗಿನ ಹಳೆಯ ಫೋಟೋಗಳು ಮತ್ತು ಚಾಟ್‌ಗಳನ್ನು ಹಂಚಿಕೊಂಡ ಅವರು, ಮದುವೆಯ ಸುಳ್ಳು ಭರವಸೆ ನೀಡಿ ದಯಾಳ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಇದರ ನಂತರ, ದಯಾಳ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ದಯಾಳ್ ಬಂಧನಕ್ಕೆ ತಡೆ ನೀಡಿತ್ತು.