Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ತಿಂಗಳುಗಟ್ಟಲೆ ಬೆದರಿಸುತ್ತಿತ್ತು, ಈಗ ಬೇಡಿಕೊಳ್ಳುತ್ತಿದೆ: ಇರಾನ್‌ ವ್ಯಂಗ್ಯ
ಪ್ರಮುಖವಿದೇಶ

ತಿಂಗಳುಗಟ್ಟಲೆ ಬೆದರಿಸುತ್ತಿತ್ತು, ಈಗ ಬೇಡಿಕೊಳ್ಳುತ್ತಿದೆ: ಇರಾನ್‌ ವ್ಯಂಗ್ಯ

Share
2 Min Read
SHARE

https://youtube.com/shorts/JFDfzeRUAUw?si=UPiQjhCFAIkLXEhb

newsics.com

ಪಶ್ಚಿಮ ಏಷ್ಯಾದಲ್ಲಿಯ ಬಿಕ್ಕಟ್ಟಿನ ನಡುವೆ ರಶ್ಯಾದ ತೈಲದ ಬಗ್ಗೆ ಅಮೆರಿಕವು ತನ್ನ ನಿಲುವು ಬದಲಿಸಿದ್ದನ್ನು ಇರಾನಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಗೇಲಿ ಮಾಡಿದ್ದಾರೆ.

ಈ ಹಿಂದೆ ರಶ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದ ಡೊನಾಲ್ಡ್ ಟ್ರಂಪ್ ಆಡಳಿತವು ಈಗ ಆ ದೇಶದಿಂದಲೇ ತೈಲವನ್ನು ಖರೀದಿಸುವಂತೆ ಭಾರತ ಮತ್ತು ವಿಶ್ವಾದ್ಯಂತದ ಇತರ ರಾಷ್ಟ್ರಗಳನ್ನು ಬೇಡಿಕೊಳ್ಳುತ್ತಿದೆ ಎಂದು ಅರಾಘ್ಚಿ ಶನಿವಾರ ಎಕ್ಸ್ ಪೋಸ್ಟ್‌ನಲ್ಲಿ ಕುಟುಕಿದ್ದಾರೆ.
ರಶ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ಅಮೆರಿಕವು ತಿಂಗಳುಗಟ್ಟಲೆ ಭಾರತವನ್ನು ಬೆದರಿಸಿತ್ತು. ಇರಾನ್ ಜೊತೆ ಎರಡು ವಾರಗಳ ಬಳಿಕ ಅದು ಈಗ ಭಾರತದ ಸೇರಿದಂತೆ ಜಗತ್ತನ್ನು ರಶ್ಯಾದ ಕಚ್ಚಾತೈಲವನ್ನು ಖರೀದಿಸುವಂತೆ ಬೇಡಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ವಿರುದ್ಧದ ‘ಕಾನೂನು ಬಾಹಿರ ಯುದ್ಧ’ವನ್ನು ಬೆಂಬಲಿಸುತ್ತಿರುವುದಕ್ಕಾಗಿ ಐರೋಪ್ಯ ದೇಶಗಳನ್ನೂ ಟೀಕಿಸಿರುವ ಅರಾಘ್ಚಿ, ಪ್ರತಿಫಲವಾಗಿ ಅಮೆರಿಕವು ರಶ್ಯಾದ ವಿರುದ್ಧ ತಮ್ಮನ್ನು ಬೆಂಬಲಿಸುತ್ತದೆ ಎಂದು ಅವು ಭಾವಿಸಿದ್ದವು, ಶೋಚನೀಯ ಎಂದು ಹೇಳಿದ್ದಾರೆ.
ಈ ನಡುವೆ ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಸಂಘರ್ಷದ ನಡುವೆಯೇ ಇರಾನ್ ಭಾರತದ ಧ್ವಜವನ್ನು ಹೊತ್ತಿರುವ ಎಲ್‌ಪಿಜಿ ಸಾಗಣೆಯ ಎರಡು ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅನುಮತಿಸಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ Financial Times article ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸೌದಿ ಅರೇಬಿಯಾದ ಕಚ್ಚಾ ತೈಲವನ್ನು ಹೊತ್ತಿರುವ ತೈಲ ಟ್ಯಾಂಕರ್ ಮಾ.1ರ ಸುಮಾರಿಗೆ ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಶನಿವಾರ ಭಾರತವನ್ನು ತಲುಪುವ ನಿರಿಕ್ಷೆಯಿದೆ ಎಂದು ಸುದ್ದಿಸಂಸ್ಥೆಯು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಭಾರತದಿಂದ ರಶ್ಯಾ ತೈಲ ಖರೀದಿ ಕುರಿತು ಅಮೆರಿಕ ಹೇಳಿದ್ದೇನು?
ಭಾರತದಿಂದ ರಶ್ಯಾ ತೈಲ ಖರೀದಿಯ ಮುಂದುವರಿಕೆಯನ್ನು ‘ಅನಿವಾರ್ಯ’ ಎಂದು ಬಣ್ಣಿಸಿರುವ ಅಮೆರಿಕದ ವಿತ್ತಸಚಿವ ಸ್ಕಾಟ್ ಬೆಸೆಂಟ್ ಅವರು, ಪಶ್ಚಿಮ ಏಶ್ಯಾ ಸಂಘರ್ಷದಿಂದ ಉಂಟಾಗಿರುವ ಇಂಧನ ವ್ಯತ್ಯಯಗಳ ನಡುವೆ ತುರ್ತು ಪೂರೈಕೆ ಅಗತ್ಯಗಳಿಂದಾಗಿ ಭಾರತೀಯ ಸಂಸ್ಕರಣಾಗಾರಗಳಿಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ʼಸ್ಕೈ ನ್ಯೂಸ್‌ʼಗೆ ನೀಡಿರುವ ಸಂದರ್ಶನದಲ್ಲಿ ಬೆಸೆಂಟ್, ರಶ್ಯಾದ ತೈಲವನ್ನು ಹೊತ್ತ ಟ್ಯಾಂಕರ್‌ಗಳು ಈಗಾಗಲೇ ಸಮುದ್ರದಲ್ಲಿದ್ದು, ಅದು ಭಾರತೀಯ ಸಂಸ್ಕರಣಾಗಾರಗಳಿಗೆ ತ್ವರಿತ ಮೂಲವಾಗಿದೆ. ಹೀಗಾಗಿ ಅವು ರಶ್ಯಾದಿಂದ ತೈಲವನ್ನು ಖರೀದಿಸಲು 30 ದಿನಗಳ ಅವಕಾಶವನ್ನು ನೀಡಲಾಗಿದೆ. ಇಲ್ಲದಿದ್ದರೆ ಆ ತೈಲ ಹೇಗಿದ್ದರೂ ಚೀನಾವನ್ನು ತಲುಪುತ್ತಿತ್ತು ಎಂದು ಹೇಳಿದ್ದಾರೆ.

ಗಾಳಿಯಿಂದ ನೀರು: ಇದು ಹೇಗೆ ಸಾಧ್ಯ?; MIT ವಿಜ್ಞಾನಿಯ ಮ್ಯಾಜಿಕ್ ಏನು?

TAGGED:"They threatened for monthsnow they're begging": Iran's sarcasm
Share This Article
Facebook Twitter Copy Link Print
Previous Article ಗಾಳಿಯಿಂದ ನೀರು: ಇದು ಹೇಗೆ ಸಾಧ್ಯ?; MIT ವಿಜ್ಞಾನಿಯ ಮ್ಯಾಜಿಕ್ ಏನು?
Next Article ನಗೆಪಾಟಲಿಗೀಡಾಗಿದ್ದ ಕೆನರಾ‌ ಬ್ಯಾಂಕ್! ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?