https://youtube.com/shorts/DiU6l59Harw?si=Atk3K2_RIgW0n5N2
newsics.com
ದೇಶಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಿ ಮಹಿಳೆಯರಿಗೆ ಮುಟ್ಟಿನ ರಜೆ ಒದಗಿಸುವ ನೀತಿಯನ್ನು ರೂಪಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಇಂತಹ ಕಾನೂನು ಜಾರಿಗೆ ಬಂದರೆ ಮಹಿಳೆಯರಿಗೆ ಯಾರೂ ಕೆಲಸ ನೀಡುವುದಿಲ್ಲ ಮತ್ತು ಇದು ಲಿಂಗ ತಾರತಮ್ಯದ ರೂಢಿಗತ ನಂಬಿಕೆಗಳನ್ನು ಅರಿವಿಲ್ಲದೆಯೇ ಬಲಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ .
ಇಂತಹ ಅರ್ಜಿಗಳು ಮಹಿಳೆಯರನ್ನು ಕೀಳು ಎಂದು ತೋರಿಸುವ ಅಥವಾ ಮುಟ್ಟು ಎಂಬುದು ಏನೋ ಕೆಟ್ಟದ್ದು ಎಂಬ ಭಯವನ್ನು ಸೃಷ್ಟಿಸುತ್ತವೆ. ಇದೊಂದು ಹಕ್ಕು ಹೌದು, ಆದರೆ ವೇತನ ಸಹಿತ ರಜೆ ನೀಡಬೇಕಾದ ಉದ್ಯೋಗದಾತರ ಬಗ್ಗೆಯೂ ಯೋಚಿಸಿ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿದೆ.