https://youtube.com/shorts/DiU6l59Harw?si=Atk3K2_RIgW0n5N2
newsics.com
ಬೆಂಗಳೂರು : ಇರಾನ್ ಇಸ್ರೇಲ್ ಯುದ್ಧದ ಪರಿಣಾಮವಾಗಿ ಬೆಂಗಳೂರಿನಲ್ಲಿ ಸಿಲಿಂಡರ್ ಇಲ್ಲದೆ ಬಹುತೇಕ ದೊಡ್ಡ ದೊಡ್ಡ ಹೋಟೆಲ್ ಗಳು ಬಂದ್ ಆಗಿವೆ. ಇದರ ಮಧ್ಯ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು ಇನ್ನೂ ಒಂದು ವಾರ ಅಥವಾ 10 ದಿನ ಸಿಲಿಂಡರ್ ಸಿಗಲ್ಲ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಆಹಾರ ಸಚಿವ ಮುನಿಯಪ್ಪ ಹೇಳಿಕೆ ನೀಡಿದ್ದು ಇನ್ನೂ ಒಂದು ವಾರ ಅಥವಾ ಹತ್ತು ದಿನ ಸಿಲಿಂಡರ್ ಸಿಗಲ್ಲ. ಕಮರ್ಷಿಯಲ್ ಸಿಲಿಂಡರ್ ಸದ್ಯಕ್ಕೆ ಸ್ಟಾಕ್ ಇಲ್ಲ. ಹಾಗಾಗಿ ಹೋಟೆಲ್ ಮಾಲೀಕರು ತಾಳ್ಮೆಯಿಂದ ಕಾಯಬೇಕು. ಆಸ್ಪತ್ರೆ, ಹಾಸ್ಟೆಲ್ ಮತ್ತು ವಸತಿ ನಿಲಯಕ್ಕೆ ಗ್ಯಾಸ್ ನೀಡುತ್ತೇವೆ.
ಹೋಟೆಲ್ ನವರು ಎಲೆಕ್ಟ್ರಿಕ್ ಸ್ಟವ್ ಬಳಸಬೇಕು. ಒಂದು ವಾರ ಹತ್ತು ದಿನ ಸುಧಾರಿಸಿಕೊಂಡರೆ ಸಮಸ್ಯೆ ಬಗ್ಗೆ ಹರಿಯುತ್ತದೆ ಎಂದು ಸಚಿವ ಮುನಿಯಪ್ಪ ಉತ್ತರಿಸಿದರು.