https://youtube.com/shorts/DiU6l59Harw?si=Atk3K2_RIgW0n5N2
newsics.com
ನವದೆಹಲಿ: ಇರಾನ್ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಉದ್ಯಮದ ಮೇಲೆ ಬಿದ್ದಿದೆ. ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿರುವುದರಿಂದ, ಮುಂದಿನ ಕೆಲವು ದಿನಗಳಲ್ಲಿ ಬಾಟಲಿ ನೀರಿನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಪ್ಲಾಸ್ಟಿಕ್ ಬಾಟಲಿಗಳು, ಮುಚ್ಚಳಗಳು (Caps) ಮತ್ತು ಲೇಬಲ್ಗಳನ್ನು ಕಚ್ಚಾ ತೈಲದ ಉಪ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ತೈಲ ಬೆಲೆ ಏರಿಕೆಯಿಂದಾಗಿ ಈ ಕೆಳಗಿನ ಬದಲಾವಣೆಗಳಾಗಿವೆ
ಪಾಲಿಮರ್ ಬೆಲೆ: ಪ್ಲಾಸ್ಟಿಕ್ ತಯಾರಿಕೆಗೆ ಬೇಕಾದ ಮುಖ್ಯ ಕಚ್ಚಾ ವಸ್ತುವಾದ ಪಾಲಿಮರ್ ಬೆಲೆ ಶೇ. 50 ರಷ್ಟು ಹೆಚ್ಚಾಗಿದ್ದು, ಪ್ರತಿ ಕೆಜಿಗೆ 170 ರೂ. ತಲುಪಿದೆ.
ಬಾಟಲಿ ಮುಚ್ಚಳಗಳು: ಮುಚ್ಚಳಗಳ ಬೆಲೆ ದುಪ್ಪಟ್ಟಾಗಿದ್ದು, ಪ್ರತಿ ಯೂನಿಟ್ಗೆ 0.45 ಪೈಸೆ ಆಗಿದೆ.
ಪ್ಯಾಕೇಜಿಂಗ್: ಕಾರ್ಡ್ಬೋರ್ಡ್ ಬಾಕ್ಸ್ಗಳು, ಲೇಬಲ್ಗಳು ಮತ್ತು ಅಂಟಿನ ಪಟ್ಟಿಗಳ ಬೆಲೆಯೂ ಸಹ ಏರಿಕೆಯಾಗಿದೆ.