Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 4 ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ ಹಾಡಿದ ನಟಿ ಹನ್ಸಿಕಾ
ದೇಶಪ್ರಮುಖಮನರಂಜನೆ

4 ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ ಹಾಡಿದ ನಟಿ ಹನ್ಸಿಕಾ

Share
1 Min Read
SHARE

https://youtube.com/shorts/yMSO-E277Og?si=gFSvtQQHQjZ3lXBt

newsics.com

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರ ಮದುವೆ ನಾಲ್ಕು ವರ್ಷಗಳಲ್ಲೇ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಬುಧವಾರ (ಮಾ. 11) ಇವರ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.

ಬಹಳ ಹಿಂದಿನಿಂದಲೇ ಇವರಿಬ್ಬರು ಜೊತೆಯಾಗಿ ವಾಸಿಸುತ್ತಿಲ್ಲ ಎಂಬ ವದಂತಿಗಳು ಹರಿದಾಡುತ್ತಿದ್ದವು. ಹನ್ಸಿಕಾ ತಮ್ಮ ತಾಯಿಯ ಮನೆಗೆ ಮರಳಿದ್ದರೆ, ಸೊಹೈಲ್ ತಮ್ಮ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದರು. ಮದುವೆಯ ನಂತರ ಸೊಹೈಲ್ ಅವರ ಕುಟುಂಬದ ಜೊತೆಗೆ ಹನ್ಸಿಕಾ ವಾಸಿಸುತ್ತಿದ್ದರು. ಕೊನೆಗೆ ಅದೇ ಅಪಾರ್ಟ್‌ಮೆಂಟ್‌ನ ಮತ್ತೊಂದು ಫ್ಲಾಟ್‌ಗೆ ವಾಸ್ತವ್ಯವನ್ನು ಹನ್ಸಿಕಾ ಬದಲಿಸಿದ್ದರು. ಆರಂಭದಲ್ಲಿ ಇಬ್ಬರು ಬೇರೆಯಾಗಿರುವ ಸುದ್ದಿಯನ್ನು ಸೊಹೈಲ್ ನಿರಾಕರಿಸಿದ್ದರು. ಹನ್ಸಿಕಾ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಮುದ್ರೆ ಬಿದ್ದಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ  ಮಂಜೂರು ಮಾಡಿದೆ. ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಹನ್ಸಿಕಾ ಅವರು ಪತಿಯಿಂದ ಯಾವುದೇ ರೀತಿಯ ಜೀವನಾಂಶ ಕೇಳಿಲ್ಲ.

ಮದುವೆಯಾದ ನಂತರ ಇಬ್ಬರೂ ಕೆಲವೇ ಕಾಲ ಒಟ್ಟಿಗೆ ವಾಸವಿದ್ದರು. ಆದರೆ, ಇಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು. ಸಣ್ಣ ಸಣ್ಣ ವಿಷಯಗಳಿಗೂ ಜಗಳ ಶುರುವಾಗಿ, ಒಂದೇ ಮನೆಯಲ್ಲಿ ಇರುವುದು ಕಷ್ಟವಾಗಿತ್ತು ಎಂದು ವರದಿಗಳು ತಿಳಿಸಿವೆ.

ಹನ್ಸಿಕಾ ಮತ್ತು ಸೊಹೇಲ್ 2022ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಹನ್ಸಿಕಾ, ನಂತರ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರು. ಬಿ. ಉಣ್ಣಿಕೃಷ್ಣನ್ ನಿರ್ದೇಶನದ, ಮೋಹನ್‌ಲಾಲ್ ನಟನೆಯ ‘ವಿಲ್ಲನ್’ ಚಿತ್ರದ ಮೂಲಕ ಅವರು ಮಲಯಾಳಂಗೂ ಎಂಟ್ರಿ ಕೊಟ್ಟಿದ್ದರು. 2024ರಲ್ಲಿ ತೆರೆಕಂಡ ತಮಿಳಿನ ‘ಗಾರ್ಡಿಯನ್’ ಚಿತ್ರ ಹನ್ಸಿಕಾ ನಟನೆಯ ಕೊನೆಯ ಸಿನಿಮಾ.

https://www.newsics.com/2026/03/12/monalisa-walks-into-a-police-station-in-kerala-with-her-boyfriend/

TAGGED:Actress Hansika ends marriage after 4 years
Share This Article
Facebook Twitter Copy Link Print
Previous Article ಬಾಯ್‌ಫ್ರೆಂಡ್‌ ಜೊತೆ ಕೇರಳದಲ್ಲಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮೊನಾಲಿಸಾ
Next Article ತಾಯಿ ಕೊನೆ ಆಸೆಯಂತೆ ದೇಹ ಛೇದಿಸಿದ ವೈದ್ಯ ಪುತ್ರ

Popular Posts

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

You Might Also Like

ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?