Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ದುಬೈನಿಂದ ಸುರಕ್ಷಿತವಾಗಿ ಮರಳಿದ ನಟ ಅಜಿತ್
ಪ್ರಮುಖಮನರಂಜನೆ

ದುಬೈನಿಂದ ಸುರಕ್ಷಿತವಾಗಿ ಮರಳಿದ ನಟ ಅಜಿತ್

Share
2 Min Read
SHARE

ಯುದ್ಧದ ಆತಂಕದಿಂದ ದುಬೈನಲ್ಲಿ ಸಿಲುಕಿದ್ದ ತಮಿಳು ಸಿನಿಮಾದ ಪ್ರಮುಖ ನಟ ಅಜಿತ್ ಕುಮಾರ್ ಸುರಕ್ಷಿತವಾಗಿ ಚೆನ್ನೈಗೆ ಮರಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಏಕಾಏಕಿ ಉಂಟಾದ ಯುದ್ಧದ ಆತಂಕ ಮತ್ತು ವಾಯು ದಾಳಿಗಳ ಕಾರಣದಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ತೊಂದರೆ ಉಂಟಾಗಿದೆ.ದುಬೈನಲ್ಲಿ ಇದ್ದ ಅಜಿತ್ ಕುಮಾರ್ ಅವರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿ ಬಂದಿವೆ. ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರು ಸುರಕ್ಷಿತ ಸ್ಥಳದಲ್ಲಿ ಇದ್ದರು. ಕಾರ್ ರೇಸ್‌ನಲ್ಲಿ ಭಾಗವಹಿಸಲು ಅಜಿತ್ ದುಬೈಗೆ ಹೋಗಿದ್ದರು ಮತ್ತು ಮಾರ್ಚ್ 1ರಂದು ದುಬೈಯಿಂದ ಚೆನ್ನೈಗೆ ಮರಳಬೇಕಿತ್ತು. ಆದರೆ, ಇರಾನ್ ಅಧ್ಯಕ್ಷರ ಮೇಲೆ ದಾಳಿ ಮತ್ತು ಅದರ ನಂತರ ದುಬೈ ಸೇರಿದಂತೆ ಸುತ್ತಲಿನ ದೇಶಗಳಲ್ಲಿ ವಾಯು ಪ್ರದೇಶದಲ್ಲಿ ಆತಂಕ ಉಂಟಾದ ಕಾರಣ, ಅವರ ವಿಮಾನ ಪ್ರಯಾಣ ರದ್ದು ಮಾಡಲಾಗಿತ್ತು. ಈ ಕಾರಣದಿಂದ ಅಜಿತ್ ಕಳೆದ ಕೆಲವು ದಿನಗಳು ದುಬೈನಲ್ಲಿ ಉಳಿದು, ಈಗ ಚೆನ್ನೈಗೆ ಮರಳಿದ್ದಾರೆ. ಕಾರ್ ರೇಸಿಂಗ್ ಮುಗಿಸಿ ದುಬೈಯಿಂದ ಚೆನ್ನೈಗೆ ಬಂದ ನಟ ಅಜಿತ್ ಕುಮಾರ್ ಅವರ ವಿಡಿಯೋ ಈಗ ಬಿಡುಗಡೆಯಾಗಿದೆ.ಅವರ ವ್ಯವಸ್ಥಾಪಕ ಸುರೇಶ್ ಚಂದ್ರಾ ಅವರು ಅಜಿತ್ ಭಾನುವಾರ ಚೆನ್ನೈಗೆ ಸುರಕ್ಷಿತವಾಗಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಅಜಿತ್ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ವಿಡಿಯೋ ಈಗ ಹೊರಬಿದ್ದಿದೆ.ತಮಿಳು ಚಿತ್ರರಂಗದ ಅತಿದೊಡ್ಡ ತಾರೆಗಳಲ್ಲಿ ಒಬ್ಬರೆಂದು ಇಂದು ಕರೆಯಲ್ಪಡುವ ಅಜಿತ್ ಕುಮಾರ್ ತಮ್ಮನ್ನು ‘ಆಕಸ್ಮಿಕ ನಟ’ ಎಂದು ಕರೆದುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತುನಿವು ನಟ ತಮ್ಮ ಚಲನಚಿತ್ರ ಪ್ರಯಾಣವು ಪ್ಲಾನ್ಡ್ ಅಲ್ಲ.ಪ್ರಸ್ತುತ ರೇಸಿಂಗ್ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿರೋ ಅಜಿತ್ ಇತ್ತೀಚೆಗೆ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಗುಡ್ ಬ್ಯಾಡ್ ಅಗ್ಲಿಯಲ್ಲಿ ನಟಿಸಿದ್ದಾರೆ . ಅವರು ರೇಸಿಂಗ್‌ನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದರು ಮತ್ತು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.ಅಚ್ಚರಿ ಏನೆಂದರೆ, ಕೇವಲ 8 ತಿಂಗಳುಗಳಲ್ಲಿ ಬರೋಬ್ಬರಿ 42 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ 42 ಕೆಜಿ ಕಡಿಮೆ ಆಗುವುದು ಎಂದರೆ ತಮಾಷೆಯ ಮಾತಲ್ಲ. ಈ ಮೂಲಕ ಅಜಿತ್ ಕುಮಾರ್ ಅವರು ಅಭಿಮಾನಿಗಳಿಗೂ ಸ್ಫೂರ್ತಿ ತುಂಬಿದ್ದಾರೆ.

TAGGED:Actor Ajith returns safely from Dubai
Share This Article
Facebook Twitter Copy Link Print
Previous Article ಕಂಪ್ಯೂಟರ್ , ಲ್ಯಾಪ್ ಟಾಪ್ ಬೆಲೆ ಶೇ. 35ರಷ್ಟು ಏರಿಕೆ ಸಾಧ್ಯತೆ ;
Next Article ವಿಧಾನಸಭೆಯಲ್ಲೂ ಸಿಲಿಂಡರ್ ಕೊರತೆ ಗದ್ದಲ: ಸರ್ಕಾರ ಮತ್ತು ವಿಪಕ್ಷದ ನಡುವೆ ವಾಕ್ಸಮರ

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?