https://youtube.com/shorts/fD6pvkz7g8c?si=uKQ1N3BMJTvK6QIw
newsics.com
ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಮರಳಾಗಾಲ ಗ್ರಾಮದ ಅರ್ಚಕನ ಸಾವಿನ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಪ್ರಿಯಕರನ ಜೊತೆ ಸೇರಿ ತಾಳಿದ ಕಟ್ಟಿದ ಗಂಡನಿಗೆ ಚಟ್ಟಕಟ್ಟಿರೋ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಮಾರ್ಚ್ 6ನೇ ತಾರೀಖಿನಂದು ಅರ್ಚಕ ಸಿದ್ದಲಿಂಗಪ್ಪ ಕೆ ಶೆಟ್ಟಿಹಳ್ಳಿಯ ಗಣಪತಿ ದೇಗುಲಕ್ಕೆ ಪೂಜೆಗೆ ಹೋದವನು ವಾಪಸ್ ಬರಲೇ ಇಲ್ಲ. ನಾಲೆ ಬಳಿ ಅರ್ಚಕ ಚಪ್ಪಲಿ, ರುದ್ರಾಕ್ಷಿ ಮಣಿ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದವು. ಬಳಿಕ ಅದೇ ನಾಲೆಯಲ್ಲಿ ಅರ್ಚಕನ ಶವ ಕೂಡ ಸಿಕ್ಕಿತ್ತು. ಆತನ ಸ್ಥಿತಿ ಕಂಡು ಸಂಬಂಧಿಕರು ಇದು ಉದ್ದೇಶ ಪೂರ್ವಕ ಕೊಲೆ ಎಂದು ಆರೋಪಿಸಿದ್ರು. ಆದ್ರೆ ಅಸಲಿ ಕಥೆ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಎರಡು ಮಕ್ಕಳ ತಾಯಿಯಾಗಿದ್ದ ಅರ್ಚಕನ ಪತ್ನಿ ಶಾಲಿನಿಗೆ ಪರ ಪುರುಷನ ಜೊತೆ ಅಕ್ರಮ ಸಂಬಂಧವಿತ್ತು ಎನ್ನಲಾಗ್ತಿದೆ. ಗಂಡನಿಗೆ ಗೊತ್ತಿಲ್ಲದಂತೆ ಅದೇ ಗ್ರಾಮದ ಹರೀಶ್ ಎಂಬಾತನ ಜೊತೆ ಲವ್ವಿ-ಡವ್ವಿ ಶುರುಮಾಡಿದ್ದ ಶಾಲಿನಿ ವರ್ಷದ ಹಿಂದೆಯೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳಂತೆ.ಗಂಡ ಪಕ್ಕದ ಊರಿಗೆ ಪೂಜೆಗೆ ತೆರಳಿದ್ದ ಬಗ್ಗೆ ಪ್ರಿಯಕರನಿಗೆ ಶಾಲಿನಿಯೇ ಮೆಸೇಜ್ ಕೊಟ್ಟಿದ್ದಳಂತೆ. ನಾಲೆ ಏರಿ ಮೇಲೆ ಬೈಕ್ ನಲ್ಲಿ ಬರ್ತಿದ್ದ ಸಿದ್ದಲಿಂಗಪ್ಪನ ಅಡ್ಡಗಟ್ಟಿದ್ದ ಪ್ರಿಯಕರ ಹರೀಶ್ ಮತ್ತು ಇಬ್ಬರು ಸ್ನೇಹಿತರು, ಆತನ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿ ಹತ್ಯೆಗೈದು ಬಳಿಕ ನಾಲೆಗೆ ಬಿಸಾಡಿ ಹೋಗಿದ್ದರು ಎನ್ನಲಾಗ್ತಿದೆ.
ನಂತರ ಸಿದ್ದಲಿಂಗಪ್ಪ ಅಪಘಾತದಲ್ಲಿ ಸತ್ತ ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅನುಮಾನದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.