https://youtube.com/shorts/fD6pvkz7g8c?si=uKQ1N3BMJTvK6QIw
newsics.com
ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಭಾರತಕ್ಕೂ ಇದರ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸಲ್ ಜೊತೆಗೆ ಅನಿಲದ ಅಭಾವ ಭಾರತಕ್ಕೆ ತಾಕತೊಡಗಿದೆ.
ಇದೀಗ ಭಾರತ ಸರ್ಕಾರವು ದೇಶದ ಇಂಧನ ಭದ್ರತೆಗಾಗಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-1968 ಅನ್ನು ಇಡೀ ದೇಶದಲ್ಲಿ ಜಾರಿಗೊಳಿಸಿದೆ.
ಇದರೊಂದಿಗೆ, ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಗರಿಷ್ಠ ಮಟ್ಟದ ಎಲ್‌ಪಿಜಿ ಉತ್ಪಾದನೆಗೆ ಬಳಸಿಕೊಳ್ಳುವಂತೆ ಮತ್ತು ಹೈಡ್ರೋಕಾರ್ಬನ್ ಘಟಕಗಳನ್ನು ಎಲ್‌ಪಿಜಿ ಉತ್ಪಾದನೆಯತ್ತ ತಿರುಗಿಸುವಂತೆ (Divert) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಜೊತೆಗೆ ಅಗತ್ಯ ವಸ್ತುಗಳ ಕಾಯ್ದೆ-1955 ಅನ್ನು ಸಹ ಜಾರಿಗೊಳಿಸಲಾಗಿದೆ.
1968ರಲ್ಲಿ ಸಂಸತ್ತು ಅಂಗೀಕರಿಸಿದ ಈ ಕಾಯ್ದೆಯು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಗತ್ಯವಾದ ಸೇವೆಗಳನ್ನು ಸುಗಮವಾಗಿ ನಡೆಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗುವಂತಹ ಸಂದರ್ಭಗಳಲ್ಲಿ ಈ ಕಾನೂನನ್ನು ಅಸ್ತ್ರವಾಗಿ ಬಳಸಲಾಗುತ್ತದೆ.
ಎಸ್‌ಮಾ ಅಡಿಯಲ್ಲಿ ಬರುವ ಪ್ರಮುಖ ಸೇವೆಗಳು:
ಸಾರ್ವಜನಿಕ ಸಾರಿಗೆ (ಬಸ್, ರೈಲು ಇತ್ಯಾದಿ).
ಆರೋಗ್ಯ ಸೇವೆಗಳು (ಡಾಕ್ಟರ್, ನರ್ಸ್, ಆಸ್ಪತ್ರೆ).
ನೀರು ಸರಬರಾಜು, ನೈರ್ಮಲ್ಯ ಮತ್ತು ವಿದ್ಯುತ್ ಶಕ್ತಿ.
ಎಸ್‌ಮಾ ಜಾರಿಯಾದ ನಂತರ ಯಾವುದೇ ನೌಕರ ಅಥವಾ
ಎಸ್‌ಮಾ ಜಾರಿಯಾದ ನಂತರ ಯಾವುದೇ ನೌಕರ ಅಥವಾ ಸಂಘಟನೆಗಳು ಮುಷ್ಕರ ನಡೆಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ:
ವಾರೆಂಟ್ ಇಲ್ಲದೆ ಬಂಧನ: ಯಾವುದೇ ಪೊಲೀಸ್ ಅಧಿಕಾರಿಗೆ ಮುಷ್ಕರ ನಿರತರನ್ನು ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವಿರುತ್ತದೆ.
ಜೈಲು ಮತ್ತು ದಂಡ: ನಿಯಮ ಮೀರಿದವರಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಕೆಲಸದಿಂದ ವಜಾ: ಮುಷ್ಕರದಲ್ಲಿ ಪಾಲ್ಗೊಂಡ ಅಥವಾ ಪ್ರಚೋದಿಸಿದ ನೌಕರರನ್ನು ಕೆಲಸದಿಂದ ವಜಾ ಮಾಡುವ ಅಧಿಕಾರ ಸರ್ಕಾರಕ್ಕಿದೆ.
ಅವಧಿ: ಈ ಕಾನೂನನ್ನು ಒಮ್ಮೆ ಜಾರಿಗೊಳಿಸಿದರೆ ಗರಿಷ್ಠ 6 ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಸರ್ಕಾರ ಈಗ ಮನೆಮನೆಗೆ ಮತ್ತು ಆಸ್ಪತ್ರೆಗಳಿಗೆ ಗ್ಯಾಸ್ ಕೊಡಲು ಫಸ್ಟ್ ಪ್ರಯಾರಿಟಿ ನೀಡಿರುವುದರಿಂದ, ಕೆಲವು ದೊಡ್ಡ ದೊಡ್ಡ ಕೈಗಾರಿಕಾ ವಲಯಗಳಿಗೆ ಹೋಗುವ ಗ್ಯಾಸ್ ಪೂರೈಕೆಗೆ ಬ್ರೇಕ್ ಬೀಳಲಿದೆ. ಅಂದ್ರೆ, ಫ್ಯಾಕ್ಟರಿಗಳಿಗೆ ಗ್ಯಾಸ್ ಕಟ್ ಆಗೋದು ಗ್ಯಾರಂಟಿ. ಈ ಯುದ್ಧದ ಭೀತಿ ಕಮ್ಮಿ ಆಗುವವರೆಗೆ ದೇಶದೊಳಗೆ ಇಂಧನ ಕೊರತೆ ಆಗದಿರಲಿ ಅಂತ ನಮ್ಮ ದೇಶೀಯ ಇಂಧನ ನಿರ್ವಹಣಾ ವ್ಯವಸ್ಥೆಯನ್ನು ಬ್ಯಾಲೆನ್ಸ್ ಮಾಡಲು ಈ ಪ್ಲಾನ್ ಮಾಡಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.