https://youtube.com/shorts/fD6pvkz7g8c?si=uKQ1N3BMJTvK6QIw
newsics.com
ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯರಲ್ಲಿ ಒಬ್ಬರು. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾಗಳಲ್ಲಿ ಹೆಚ್ಚಾಗಿ ನಿರತರಾಗಿದ್ದಾರೆ. ಇತ್ತೀಚೆಗೆ ಪುಷ್ಪಾ ಮತ್ತು ಚಾವಾ ಸಿನಿಮಾದ ಮೂಲಕ ಬ್ಲಾಕ್‌ಬಸ್ಟರ್‌ಗಳನ್ನು ಗಳಿಸಿದರು.
ಸುಮಾರು ಎಂಟು ವರ್ಷಗಳ ಹಿಂದೆ ಇಡೀ ಕರ್ನಾಟಕವೇ ಮೆಚ್ಚಿಕೊಂಡಿದ್ದ ‘ಕರುನಾಡ ಕ್ರಶ್’ ರಶ್ಮಿಕಾ ಮಂದಣ್ಣ ಮತ್ತು ಖ್ಯಾತ ನಟನೊಂದಿನ ಅವರ ಪ್ರೇಮಕಥೆ ಮುರಿದುಬಿದ್ದಾಗ, ಎಲ್ಲರೂ ಬೆರಳು ತೋರಿಸಿದ್ದು ರಶ್ಮಿಕಾ ಕಡೆಗೆ. ರಶ್ಮಿಕಾ ನಂಬಿಕೆ ದ್ರೋಹಿ, ಆಕೆ ಮೋಸಗಾತಿ ಎಂಬ ಹಣೆಪಟ್ಟಿ ಹಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಭೀಕರವಾಗಿ ಟ್ರೋಲ್ ಮಾಡಲಾಗಿತ್ತು. ಆದರೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ, ಮಗಳ ಬ್ರೇಕಪ್ ಕುರಿತು ಮಾತನಾಡಿದ್ದಾರೆ. ಆ ನಟ ರಶ್ಮಿಕಾ ಬೆಳವಣಿಗೆಯನ್ನು ಸಹಿಸದೆ, ‘ಗೀತಾ ಗೋವಿಂದಂ’ ಚಿತ್ರದ ಬಳಿಕ ವೃತ್ತಿಜೀವನವನ್ನೇ ಅಂತ್ಯಗೊಳಿಸಲು ಒತ್ತಡ ಹೇರಿದ್ದ ಮತ್ತು ಆತನ ಪೊಸೆಸಿವ್‌ನೆಸ್ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಿಶೆಟ್ಟಿ ತಮ್ಮ ಯೂಟ್ಯೂಬ್ ಚಾನೆಲ್ ‘ಕೊನೆ ಆಟ ಯಾರನ್ನು ಬಿಡಲ್ಲ’ದಲ್ಲಿ ಇಡೀ ಬ್ರೇಕಪ್ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಅದರೊಂದಿಗೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ನಟನ ಅವರ ಸರ್ವಾಧಿಕಾರಿ ವರ್ತನೆಯನ್ನು ಎಳೆಎಳೆಯಾಗಿ ಅವರು ಬಿಚ್ಚಿಟಟಿದ್ದಾರೆ.
ರಶ್ಮಿಕಾ ಮಾಡೆಲಿಂಗ್ ಲೋಕದಲ್ಲಿದ್ದಾಗ ಆಕೆಯನ್ನು ಚಿತ್ರರಂಗಕ್ಕೆ ಕರೆತಂದಿದ್ದು ಇದೇ ನಟ. ಆದರೆ ಪ್ರೀತಿ ಬೆಳೆದಂತೆ ನಟನಲ್ಲಿ Possessiveness ಅತಿಯಾಯಿತು. ಆಕೆ ಎಲ್ಲಿ ಹೋಗಬೇಕು, ಯಾರ ಜೊತೆ ಇರಬೇಕು ಎಂಬುದನ್ನು ಆತನೇ ನಿರ್ಧರಿಸುತ್ತಿದ್ದ. ಆಕೆ ಕುಳಿತರೂ ತಪ್ಪು, ನಿಂತರೂ ತಪ್ಪು ಎನ್ನುವಂತಹ ಡಿಕ್ಟೇಟರ್‌ಶಿಪ್ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಬ್ರೇಕಪ್ ಸಮಯದಲ್ಲಿ ರಶ್ಮಿಕಾಗೆ ಕೇವಲ 21 ವರ್ಷ, ಆದರೆ ನಟನಿಗೆ 35 ವರ್ಷ ವಯಸ್ಸು. “21 ವರ್ಷದ ಹುಡುಗಿಯನ್ನು 35 ವರ್ಷದ ಹುಡುಗನಿಗೆ ಕೊಟ್ಟಿದ್ದೇ ನನ್ನ ದೊಡ್ಡತನ” ಎಂದು ರಶ್ಮಿಕಾ ತಾಯಿ ನೋವಿನಿಂದ ಹೇಳಿಕೊಂಡಿದ್ದಾರೆ. ಇಷ್ಟಿದ್ದರೂ ಈ ಖ್ಯಾತ ನಟ ಸಣ್ಣಪುಟ್ಟ ವಿಷಯಕ್ಕೂ ರಶ್ಮಿಕಾ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ, ಆಕೆಯ ಮೇಲೆ ಸವಾರಿ ಮಾಡಲು ನೋಡುತ್ತಿದ್ದ ಎಂದು ಆಡಿಯೋದಲ್ಲಿ ದೂರಲಾಗಿದೆ.
ರಶ್ಮಿಕಾ ಸಿನಿಮಾ ರಂಗದಲ್ಲಿ ಸ್ಟಾರ್ ನಟರಾದ ದರ್ಶನ್, ಧ್ರುವ ಸರ್ಜಾ, ಗಣೇಶ್ ಅವರೊಂದಿಗೆ ನಟಿಸಿ ಬೆಳೆಯುತ್ತಿರುವುದು ನಟನಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ರಶ್ಮಿಕಾಗೆ ತೆಲುಗಿನ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ನಟ ಹಾಗೂ ಆತನ ಗ್ಯಾಂಗ್ ಆಕೆಯ ಮೇಲೆ ಸಿನಿಮಾ ಬಿಟ್ಟುಬಿಡುವಂತೆ ಅತಿಯಾದ ಒತ್ತಡ ಹೇರಿತು ಎಂದಿದ್ದಾರೆ. ನಾನು ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿ ವೃತ್ತಿಜೀವನ ಅಂತ್ಯಗೊಳಿಸು ಎಂದು ಆಕೆಗೆ ಹೇಳಲಾಗಿತ್ತು ಎಂದು ರಶ್ಮಿಕಾ ಅವರ ತಾಯಿ ಆಡಿಯೋದಲ್ಲಿ ಹೇಳಿದ್ದಾರೆ.