https://youtube.com/shorts/I7q3Ny48oOg?si=RFP8giogzKefv9jC
newsics.com
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರು ರಾಜ್ ನಿಡಿಮೋರು ಜೊತೆ ವಿವಾಹವಾದ ಮೇಲೆ ಪುನಃ ಸಿನಿಮಾ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಸದ್ಯ ʻಮಾ ಇಂಟಿ ಬಂಗಾರಂʼ ಸಿನಿಮಾಗೆ ನಾಯಕಿಯಾಗಿರುವ ಸಮಂತಾ, ಆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ವಿಶೇಷ ಏನಪ್ಪ ಅಂದರೆ, ಇದರ ಶೂಟಿಂಗ್ ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆ.
ನಗರ ಸುತ್ತಮುತ್ತ ಶೂಟಿಂಗ್
ಹೌದು, ʻಮಾ ಇಂಟಿ ಬಂಗಾರಂʼ ಸಿನಿಮಾದ ಶೂಟಿಂಗ್ ಅನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಸುತ್ತಮುತ್ತ ಮಾಡಲಾಗುತ್ತಿದೆ. ಈಚೆಗೆ ಸಿನಿಮಾದ ಸೆಟ್ನಲ್ಲಿ ಹೋಳಿ ಹಬ್ಬದ ಆಚರಣೆ ಮಾಡಲಾಗಿದೆ. ಅದರ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿತ್ತು. ವೀಡಿಯೊದಲ್ಲಿ ಸಮಂತಾ ಪಿಚಕಾರಿಯಿಂದ ನೀರು ಹಾರಿಸುವ ಮೂಲಕ ಹೋಳಿ ಆಟದಲ್ಲಿ ಮಿಂದೆದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ಸಹನಟರು ನೀರಿನ ಬಲೂನ್ಗಳನ್ನು ಎಸೆಯುವ ಮೂಲಕ ಇಡೀ ಸೆಟ್ ಅನ್ನು ಕಲರ್ಫುಲ್ ಮಾಡಿದ್ದಾರೆ.
ಇನ್ನು, ನಟಿ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೂಟಿಂಗ್ ಸೆಟ್ನಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿ, ಹಂಚಿಕೊಂಡಿದ್ದಾರೆ. ಶಿವಮೊಗ್ಗದ ಲೊಕೇಷನ್ ಅನ್ನು ಹಂಚಿಕೊಂಡಿರುವ ಅವರು, ʻಬೇಸಿಗೆ ಶುರುವಾಯ್ತುʼ ಎಂದು ಬರೆದುಕೊಂಡಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ಮಲೆನಾಡ ನಟ ದಿಗಂತ್ ಮಂಚಾಲೆ ನಾಯಕರಾಗಿದ್ದು, ಅವರು ಕೂಡ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರಾ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
ಈ ಸಿನಿಮಾವನ್ನು ಬಿ. ವಿ. ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೇ 15ರಂದು ವಿಶ್ವಾದ್ಯಂತ ಚಿತ್ರ ತೆರೆಕಾಣಲಿದೆ. ಸಮಂತಾ ಪತಿ ರಾಜ್ ನಿಡಿಮೋರು ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದು, ಸಮಂತಾ ಅವರೇ ಇದರ ನಿರ್ಮಾಣ ಮಾಡುತ್ತಿದ್ದಾರೆ.
https://www.instagram.com/reel/DVdX4_tATFG/?igsh=azVmbm5meThqc3Ft
ನಯನತಾರಾ-ವಿಘ್ನೇಶ್ ಕನಸಿನ ಮನೆ ರೆಡಿ: ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ