newsics.com
ರಾಕಿಂಗ್ ಸ್ಟಾರ್ ಯಶ್ ಅವರು ಹಲವು ವರ್ಷಗಳ ಬಳಿಕ ಪ್ರೇಕ್ಷರ ಎದುರು ಹೊಸ ಲುಕ್ನಲ್ಲಿ ಬಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಕೆಲಸ ಆರಂಭ ಆದಾಗಿನಿಂದಲೂ ಅವರು ಉದ್ದನೆಯ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟಿದ್ದರು.
ಅದೇ ರೀತಿಯ ಲುಕ್ ‘ಟಾಕ್ಸಿಕ್’ ಚಿತ್ರದಲ್ಲೂ ಮುಂದುವರಿಯಿತು. ಈ ಚಿತ್ರದ ‘ಟಿಕೆಟ್’ ಹೆಸರಿನ ಪಾತ್ರದ ಲುಕ್ಗಾಗಿ ಅವರು ಗಡ್ಡ ಹಾಗೂ ಕೂದಲನ್ನು ಕತ್ತರಿಸಿ ಸಣ್ಣದಾಗಿಸಿಕೊಂಡಿದ್ದಾರೆ. ಈಗ ಈ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ಯಶ್ ಹೊಸ ಲುಕ್ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇದೀಗ ಯಶ್ , ಹೊಸ ಹೇರ್ ಸ್ಟೈಲ್ ಮತ್ತು ಕ್ಲೀನ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೆಜಿಎಫ್ ನಂತರ ಇದೇ ಮೊದಲ ಬಾರಿಗೆ ಈ ರೀತಿಯಾಗಿ ಕಾಣಿಸಿಕೊಂಡಿದ್ದಾರೆಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮೂಡಿಸಿದೆ. ಆದರೆ ಇತ್ತೀಚೆಗೆ ಈ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎಂಬ ಮಾಹಿತಿ ಹೊರಬಿದ್ದಿದೆ.