Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇರಾನ್ ಹಾರ್ಮುಜ್ ಜಲಸಂಧಿ ಬಂದ್; ಪೆಟ್ರೋಲ್-ಡಿಸೇಲ್ ಬೆಲೆ ಮತ್ತಷ್ಟು ಹೆಚ್ಚಳ?
ಪ್ರಮುಖವಿದೇಶ

ಇರಾನ್ ಹಾರ್ಮುಜ್ ಜಲಸಂಧಿ ಬಂದ್; ಪೆಟ್ರೋಲ್-ಡಿಸೇಲ್ ಬೆಲೆ ಮತ್ತಷ್ಟು ಹೆಚ್ಚಳ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಾವುದೇ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಬಿಡಕೂಡದು ಎಂದು ರೇಡಿಯೋ ಎಚ್ಚರಿಕೆಗಳನ್ನು ನೀಡಿದ್ದೇ ತಡ ಇದೀಗ ಇದರ ಪರಿಣಾಮವಾಗಿ ಪ್ರಮುಖ ಜಲಮಾರ್ಗವು ಸಂಪೂರ್ಣವಾಗಿ ಬಂದ್ ಆಗಿದೆ. ಭಾರತ ಸೇರಿದಂತೆ ತೈಲದ ಮೇಲೆ ಶೇ.50ರಿಂದ 60ರಷ್ಟು ಅವಲಂಬಿಸಿದ್ದ ಹಲವು ರಾಷ್ಟ್ರಗಳಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಇರಾನ್ ತೆಗೆದುಕೊಂಡಿರುವ ಈ ಕಟು ನಿರ್ಧಾರವು ಇತರೆ ರಾಷ್ಟ್ರಗಳಿಗೆ ತೈಲ ಬೇಡಿಕೆಯನ್ನು ಹೆಚ್ಚಿಸಲಿದೆ.

ಅಷ್ಟಕ್ಕೂ ಈ ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?
ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಸುಲಭ ಮಾರ್ಗ (ಅಗಲ ಕೇವಲ 33 ಕಿ.ಮೀ). ವಿಶ್ವದ ತೈಲ ಪೂರೈಕೆಯ ಶೇ.20ರಿಂದ 25ರಷ್ಟು ಕೈಗೊಳ್ಳಲಾಗುತ್ತದೆ. ಶೇ.20ರಷ್ಟು LNG (ದ್ರವೀಕೃತ ನೈಸರ್ಗಿಕ ಅನಿಲ) ಸರಬರಾಜು ಮಾಡಲಾಗುತ್ತದೆ. ಸೌದಿ ಅರೇಬಿಯಾ, ಇರಾಕ್, ಯುಎಇ, ಇರಾನ್‌ನಂತಹ ದೇಶಗಳಿಂದ ರಫ್ತು ಮಾಡಲಾಗುವ ತೈಲವು ಈ ಜಲಸಂಧಿ ಮುಖಾಂತರವೇ ಹಾದುಹೋಗುತ್ತದೆ.
ಜಾಗತಿಕ ಆರ್ಥಿಕ ಪರಿಣಾಮಗಳೇನು?
ಮತ್ತೊಂದೆಡೆ, ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಬ್ರೆಂಟ್ ಕಚ್ಚಾ ತೈಲವು ಶೇ.8ರಿಂದ 10ರಷ್ಟು ಏರಿಕೆಯಾಗಿ 82 ಡಾಲರ್ಗೆ ತಲುಪಿದೆ. ದೀರ್ಘಕಾಲದ ಸ್ಥಗಿತಗೊಂಡರೆ, ಅದು 100 ಡಾಲರ್ಗೂ ಅಧಿಕ ಹೆಚ್ಚಾಗಿ, 250 ಡಾಲರ್ಗೂ ತಲುಪಬಹುದು. ಹಡಗು ಕಂಪನಿಗಳು (ಮೇರ್ಸ್ಕ್, ಎಂಎಸ್‌ಸಿ, ಹಪಾಗ್-ಲಾಯ್ಡ್, ಸಿಎಂಎ ಸಿಜಿಎಂ) ಸಾಗಣೆಯನ್ನು ಸ್ಥಗಿತಗೊಳಿಸಿವೆ. ವಿಮಾ ಕಂಪನಿಗಳು ಯುದ್ಧ ಅಪಾಯದ ವ್ಯಾಪ್ತಿಯನ್ನು ರದ್ದುಗೊಳಿಸಿವೆ. ಏಷ್ಯಾದ ರಾಷ್ಟ್ರಗಳಾದ (ಚೀನಾ, ಭಾರತ, ಜಪಾನ್) ತೈಲ ದಾಸ್ತಾನುಗಳನ್ನು ನಿರ್ಣಯಿಸುತ್ತಿವೆ. ಜಾಗತಿಕ ಹಣದುಬ್ಬರ ಮತ್ತು ಜೀವನ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಇರಾನ್ ಸ್ವತಃ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರೂ ಪ್ರತೀಕಾರದ ನಿಟ್ಟಿನಲ್ಲಿ ಇಂಥ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದು ಸ್ಪಷ್ಟ,

ಫೆ.28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಜಂಟಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನಿನ ಹಲವಾರು ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ಮಾಡಿತು. ಇಷ್ಟಕ್ಕೆ ನಿಲ್ಲದ ಈ ದಾಳಿ, ಇರಾನ್‌ನ ಸರ್ವೋಚ್ಚ ನಾಯಕ ಅಯೊತಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಕಾರಣವಾಯಿತು. ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ಪಣತೊಟ್ಟಿರುವ ಇರಾನ್, ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.

ದಾಟಲು ಯತ್ನಿಸಿದ್ರೆ ಹಡಗು ಸ್ಫೋಟ
ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಹಲವು ರಾಷ್ಟ್ರಗಳು ವೀಕ್ ಪಾಯಿಂಟ್ ಅನ್ನು ಗಟ್ಟಿಯಾಗಿ ಹಿಡಿದಿರುವ ಇರಾನ್, ತಮ್ಮ ಹಾರ್ಮುಜ್ ಜಲಸಂಧಿಯನ್ನು ದಾಟಿಯೇ ಟನ್ಗಟ್ಟಲೇ ತೈಲವನ್ನು ಹೊತ್ತೊಯ್ಯುವ ಹಡಗುಗಳು ಹೋಗಬೇಕು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಐಆರ್ಜಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಈಗ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅದರಲ್ಲೂ, ಇಲ್ಲಿ ಯಾರಿಗೂ ಈ ಮಾರ್ಗದಲ್ಲಿ ಸಾಗಲು ಅನುಮತಿಸುವುದಿಲ್ಲ” ಎಂದು ಇರಾನ್ ಎಚ್ಚರಿಕೆಗಳನ್ನು ನೀಡಿದೆ. ಅತಿ ಮುಖ್ಯವಾಗಿ, ಯಾರಾದರೂ ಎಚ್ಚರಿಕೆ ಮೀರಿಯೂ ಮುಂದುವರಿಯಲು ಹೋದರೆ, ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ ಎಂದು ಒತ್ತಿ ಹೇಳಿದೆ..

ಹಡಗು ಟ್ರ್ಯಾಕಿಂಗ್ ಡೇಟಾದ ಪ್ರಕಾರ, ಜಲಸಂಧಿಯಲ್ಲಿ ಸಂಚಾರವು ಶೇ.70ರಷ್ಟು ಕಡಿಮೆಯಾಗಿದೆ. ಅನೇಕ ಟ್ಯಾಂಕರ್‌ಗಳು ಲಂಗರು ಹಾಕಲ್ಪಟ್ಟಿವೆ. ಕನಿಷ್ಠ 150 ಹಡಗುಗಳು ಮಾರ್ಗ ಮಧ್ಯೆಯೇ ಸಿಲುಕಿಕೊಂಡಿವೆ. ಕೆಲವು ಕಂಟೈನರ್ಗಳು ಮತ್ತು ಇತರ ಹಡಗುಗಳ ಮೇಲೆ ದಾಳಿಯೂ ನಡೆದಿವೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ 5 ಪಂದ್ಯಗಳು

TAGGED:Iran closes Strait of Hormuz; Will petrol-diesel prices increase further in the coming days?
Share This Article
Facebook Twitter Copy Link Print
Previous Article ಅಮೆರಿಕದಲ್ಲಿ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ
Next Article 60 ಸೆಕೆಂಡುಗಳಲ್ಲಿ ಖಮೇನಿಯನ್ನು ಕೊಲ್ಲಲು ಅಮೆರಿಕ ಖರ್ಚು ಮಾಡಿದ್ದೆಷ್ಟು ಕೋಟಿ?

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?