https://youtube.com/shorts/4DdUNKT1F8Q?si=WqCYQodDieS5bX6t
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಪಡೆಗಳು ನಡೆಸುತ್ತಿರುವ ದಾಳಿಯು ಎರಡನೇ ದಿನವೂ ಮುಂದುವರಿದಿದೆ. ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಜೊತೆಗೆ 40 ಉನ್ನತ ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಅಮೆರಿಕ ತಿಳಿಸಿದೆ.
ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಸೇನೆ ಅಬ್ಬರಿಸಿದೆ. ಪ್ರತಿದಾಳಿ ನಡೆಸಿದರೆ, ಹಿಂದೆಂದೂ ಕಂಡಿರದ ಭೀಕರತೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಒಂದೇ ನಿಮಿಷದಲ್ಲಿ ನಡೆದ ದಾಳಿಯಲ್ಲಿ ಖಮೇನಿ ಸೇರಿದಂತೆ ಇರಾನ್ನ 40 ಹಿರಿಯ ಕಮಾಂಡರ್ಗಳನ್ನು ನಿರ್ಮೂಲನೆ ಮಾಡಿದ್ದೇವೆ” ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾದವ್ ಶೋಶಾನಿ ತಿಳಿಸಿದ್ದಾರೆ.
ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತಿಯಾಗಿ ಇರಾನ್ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರೆ ಹಿಂದೆಂದೂ ಕಂಡಿರದ ಭೀಕರತೆಯನ್ನು ನೋಡಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.
ತಮ್ಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ನೀವು (ಇರಾನ್) ಹಾಗೆ ಮಾಡದಿರುವುದೇ ಉತ್ತಮ. ಒಂದೊಮ್ಮೆ ಹಾಗೆ (ದಾಳಿ) ಮಾಡಿದಲ್ಲಿ ನೀವು ಹಿಂದೆಂದೂ ನೋಡಿರದ ಭೀಕರ ದಾಳಿಯನ್ನು ಎದುರಿಸಬೇಕಾಗುತ್ತದೆ” ಎಂದು ಟ್ರಂಪ್ ಹೇಳಿದ್ದಾರೆ.