Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇಲ್ಲಿದೆ ಸ್ವರ್ಗದ ಅಡ್ರೆಸ್ ! ನೇರವಾಗಿ ವಿಳಾಸವನ್ನೇ ಹೇಳುತ್ತಿರುವ ವಿಜ್ಞಾನಿ!
ಪ್ರಮುಖಮನರಂಜನೆ

ಇಲ್ಲಿದೆ ಸ್ವರ್ಗದ ಅಡ್ರೆಸ್ ! ನೇರವಾಗಿ ವಿಳಾಸವನ್ನೇ ಹೇಳುತ್ತಿರುವ ವಿಜ್ಞಾನಿ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಮನುಷ್ಯ ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತಾನೆ ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಆದರೆ ಆ ಸ್ವರ್ಗ ಎಲ್ಲಿದೆ? ಇದುವರೆಗೆ ಇದು ಕೇವಲ ಒಂದು ನಂಬಿಕೆಯಷ್ಟೇ ಆಗಿತ್ತು. ಆದರೆ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಭೌತಶಾಸ್ತ್ರ ಉಪನ್ಯಾಸಕರೊಬ್ಬರು ಸಂಚಲನ ಸೃಷ್ಟಿಸುವ ಸಿದ್ಧಾಂತವೊಂದನ್ನು ಮುನ್ನೆಲೆಗೆ ತಂದಿದ್ದಾರೆ.

ವಿಶ್ವದ ಒಂದು ನಿರ್ದಿಷ್ಟ ದೂರದಲ್ಲಿ ಸ್ವರ್ಗವಿದೆಯೆಂದು, ಅದಕ್ಕೊಂದು ಭೌತಿಕ ವಿಳಾಸವೂ ಇದೆ ಎಂದು ಅವರು ವಾದಿಸುತ್ತಿದ್ದಾರೆ.
ಸ್ವರ್ಗ ಎಲ್ಲಿದೆ?
ಸ್ವರ್ಗ ಎಂದರೆ ಕೇವಲ ಪುರಾಣಗಳಲ್ಲಿನ ಕಾಲ್ಪನಿಕ ಪ್ರಪಂಚವೇ? ಅಥವಾ ವಿಶ್ವದಲ್ಲಿ ನಮಗೆ ತಿಳಿಯದ ಒಂದು ಭೌತಿಕ ಪ್ರದೇಶವೇ? ಈ ಪ್ರಶ್ನೆಗೆ ಹೌದು ಎನ್ನುತ್ತಿದ್ದಾರೆ ಹಾರ್ವರ್ಡ್‌ನ ಮಾಜಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಪ್ರಮುಖ ಸೈನ್ಸ್ ಕಮ್ಯುನಿಕೇಟರ್ ಮೈಕೆಲ್ ಗಿಲ್ಲೆನ್. ನಾವು ಸ್ವರ್ಗ ಎಂದು ಕರೆಯುವ ಆ ಪವಿತ್ರ ಪ್ರದೇಶವು ಈ ವಿಶ್ವದ ಒಂದು ನಿರ್ದಿಷ್ಟ ದೂರದಲ್ಲಿ ಇರಬಹುದು ಎಂದು ಅವರು ಇತ್ತೀಚೆಗೆ ಪ್ರಕಟಿಸಿದ ಸಂಶೋಧನಾ ಲೇಖನದಲ್ಲಿ ತಿಳಿಸಿದ್ದಾರೆ. ಮೈಕೆಲ್ ಗಿಲ್ಲೆನ್ ಸಿದ್ಧಾಂತದ ಪ್ರಕಾರ.. ಸ್ವರ್ಗವು ‘ಕಾಸ್ಮಿಕ್ ಹೊರಿಜಾನ್’ (Cosmic Horizon) ನ ಆಚೆಯಿದೆ.
ಅಸಲಿಗೆ ಈ ಕಾಸ್ಮಿಕ್ ಹೊರಿಜಾನ್ ಎಂದರೇನು?
ಖಗೋಳಶಾಸ್ತ್ರಜ್ಞ ಎಡ್ವಿನ್ ಹಬಲ್ ಸಿದ್ಧಾಂತದ ಪ್ರಕಾರ.. ಗ್ಯಾಲಕ್ಸಿಗಳು ಒಂದಕ್ಕೊಂದು ಬೆಳಕಿನ ವೇಗದಲ್ಲಿ ದೂರ ಸರಿಯುತ್ತಿವೆ. ಭೂಮಿಯಿಂದ ಸುಮಾರು 439 ಬಿಲಿಯನ್ ಟ್ರಿಲಿಯನ್ ಕಿಲೋಮೀಟರ್‌ಗಳ ದೂರದಲ್ಲಿ ಒಂದು ಗಡಿಯಿದೆ. ಇದನ್ನೇ ‘ಕಾಸ್ಮಿಕ್ ಹೊರಿಜಾನ್’ ಎನ್ನುತ್ತಾರೆ. ಇದನ್ನು ದಾಟಿ ನಾವು ಎಂದಿಗೂ ನೋಡಲು ಸಾಧ್ಯವಿಲ್ಲ ಮತ್ತು ಅಲ್ಲಿಗೆ ತಲುಪಲು ಸಾಧ್ಯವಿಲ್ಲ. ಬೆಳಕು ಕೂಡ ಅಲ್ಲಿಂದ ನಮ್ಮನ್ನು ತಲುಪಲು ಸಮಯ ಸಾಕಾಗುವುದಿಲ್ಲ. ಹಾಗಾಗಿ ಅದರ ಆಚೆ ಏಸಿದೆ ಎಂಬುದು ನಮಗೆ ತಿಳಿಯದು. ಅಲ್ಲಿಯೇ ಸ್ವರ್ಗ ಇರುವ ಸಾಧ್ಯತೆಯಿದೆ ಎಂದು ಗಿಲ್ಲೆನ್ ವಾದಿಸುತ್ತಾರೆ.
ಗಿಲ್ಲೆನ್ ಉಲ್ಲೇಖಿಸಿದ 4 ಪ್ರಮುಖ ಕಾರಣಗಳು:
ಅಪರಿಮಿತ ವಿಶ್ವ: ನಾವು ನೋಡಬಹುದಾದ ವಿಶ್ವಕ್ಕಿಂತ ಆಚೆಗೆ ಇನ್ನೂ ಬಹಳಷ್ಟಿದೆ. ನಾವು ನೋಡಲು ಸಾಧ್ಯವಿಲ್ಲ ಎಂದಾಕ್ಷಣ ಅಲ್ಲಿ ಏನೂ ಇಲ್ಲ ಎಂದು ಅರ್ಥವಲ್ಲ.
ಕಾಲ ನಿಂತುಹೋಗುವ ಜಾಗ: ಐನ್‌ಸ್ಟೈನ್ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ.. ಕಾಸ್ಮಿಕ್ ಹೊರಿಜಾನ್ ಬಳಿ ಕಾಲ (Time) ನಿಂತುಹೋಗುತ್ತದೆ. ಅಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯತ್ ಇರುವುದಿಲ್ಲ. ಸ್ವರ್ಗವು ಕೂಡ ಕಾಲಾತೀತವಾದುದರಿಂದ ಇದು ಹೊಂದಾಣಿಕೆಯಾಗುತ್ತದೆ ಎಂಬುದು ಅವರ ಭಾವನೆ.
ಬಿಗ್ ಬ್ಯಾಂಗ್‌ಗಿಂತ ಮೊದಲೇ: ಕಾಸ್ಮಿಕ್ ಹೊರಿಜಾನ್ ಬಳಿ ವಿಶ್ವದ ಅತ್ಯಂತ ಪುರಾತನ ವಸ್ತುಗಳಿವೆ. ಅಂದರೆ ಇದರ ಆಚೆ ಇರುವುದು ಬಿಗ್ ಬ್ಯಾಂಗ್‌ಗಿಂತ ಮೊದಲೇ ಅಸ್ತಿತ್ವದಲ್ಲಿರಬಹುದು.
ಸೃಷ್ಟಿಯ ರಹಸ್ಯ: ಬಿಗ್ ಬ್ಯಾಂಗ್ ಅನ್ನು ಕೇವಲ ಒಂದು ಸ್ಫೋಟವೆಂದು ಪರಿಗಣಿಸದೆ, ಒಂದು ಸೃಷ್ಟಿಯ ಕಥೆಯಾಗಿ ನೋಡುವ ವಿಜ್ಞಾನಿಗಳು ಕೂಡ ಇದ್ದಾರೆ.
ವಿಮರ್ಶೆಗಳು: ವಿಜ್ಞಾನವೋ ಅಥವಾ ಮೆಟಾಫಿಸಿಕ್ಸ್ (ಆಧ್ಯಾತ್ಮಿಕ ವಿಜ್ಞಾನವೋ)?
ಆದರೆ ಗಿಲ್ಲೆನ್ ಸಿದ್ಧಾಂತವನ್ನು ಇತರ ವಿಜ್ಞಾನಿಗಳು ತಳ್ಳಿಹಾಕುತ್ತಿದ್ದಾರೆ. ಕನೆಕ್ಟಿಕಟ್ ಕಾಲೇಜಿನ ಪ್ರೊಫೆಸರ್ ಅಲೆಕ್ಸ್ ಜಿಯಾನಿನಾಸ್ ಪ್ರಕಾರ.. ಕಾಸ್ಮಿಕ್ ಹೊರಿಜಾನ್ ಎಂಬುದು ಒಂದು ಭೌತಿಕ ಪ್ರದೇಶವಲ್ಲ, ಅದು ಕೇವಲ ನಮ್ಮ ದೃಷ್ಟಿಗೆ ಇರುವ ಒಂದು ಮಿತಿ ಮಾತ್ರ. ಇದು ವಿಜ್ಞಾನಕ್ಕಿಂತ ಹೆಚ್ಚಾಗಿ ‘ಮೆಟಾ ಫಿಸಿಕ್ಸ್’ ಅಡಿಯಲ್ಲಿ ಬರುತ್ತದೆ ಎಂಬುದು ಬಹುತೇಕ ವಿಜ್ಞಾನಿಗಳ ಅಭಿಪ್ರಾಯ. ಸ್ವರ್ಗವು ವಿಶ್ವದ ಒಂದು ಮೂಲೆಯಲ್ಲಿದೆಯೇ ಅಥವಾ ನಮ್ಮ ನಂಬಿಕೆಗಳಲ್ಲಿ ಇದೆಯೇ ಎಂಬುದು ಪಕ್ಕಕ್ಕಿಟ್ಟರೆ.. ಆಧುನಿಕ ಭೌತಶಾಸ್ತ್ರ ಮತ್ತು ಆಧ್ಯಾತ್ಮದ ನಡುವೆ ನಡೆಯುತ್ತಿರುವ ಈ ಚರ್ಚೆ ಈಗ ಜಗತ್ತಿನಾದ್ಯಂತ ಹಾಟ್ ಟಾಪಿಕ್ ಆಗಿದೆ.

TAGGED:Here is the address of heaven! A scientist is telling the address directly!
Share This Article
Facebook Twitter Copy Link Print
Previous Article ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಗುಪ್ತ ಸ್ಥಳಕ್ಕೆ ಖಮೇನಿ ಶಿಫ್ಟ್!
Next Article ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಸಾವು: ದೃಢಪಡಿಸಿದ ಡೊನಾಲ್ಡ್ ಟ್ರಂಪ್ !

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?