https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ಟೆಹ್ರಾನ್‌ನಲ್ಲಿ ನಡೆದ ಅಮೆರಿಕ-ಇಸ್ರೇಲಿ ದಾಳಿಯಲ್ಲಿ 86 ವರ್ಷದ ಅಲಿ ಖಮೇನಿ ಎಕ್ಸ್ ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಸುದೀರ್ಘ ಸಂದೇಶ ಬರೆದಿರುವ ಡೊನಾಲ್ಡ್ ಟ್ರಂಪ್, ಖಮೇನಿ ಸಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.ಖಮೇನಿ ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ಅಂತ್ಯವಾಗಿದೆ, ಎಂದು ಟ್ರಂಪ್ ಹೇಳಿದ್ದಾರೆ.
ಇದು ಕೇವಲ ಇರಾನ್ ಜನರಿಗೆ ಸಂದ ಜಯವಲ್ಲ, ಬದಲಾಗಿ ಖಮೇನಿ ಮತ್ತು ಅವರ ಗೂಂಡಾ ಪಡೆಯಿಂದ ಹತ್ಯೆಗೀಡಾದ ಅಮೆರಿಕನ್ನರು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳ ಜನರಿಗೆ ಸಂದ ನ್ಯಾಯವಾಗಿದೆ,” ಎಂದು ಅವರು ಬಣ್ಣಿಸಿದ್ದಾರೆ.ಇಸ್ರೇಲ್ ಜೊತೆಗೂಡಿ ನಡೆಸಿದ ಈ ಅತ್ಯಂತ ಅತ್ಯಾಧುನಿಕ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಖಮೇನಿಗೆ ಸಾಧ್ಯವಾಗಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಅವರು ಸಾವಿನ ಸುದ್ದಿ ದೃಢಪಡಿಸಿದ ಕೆಲವೇ ನಿಮಿಷಗಳಲ್ಲಿ, ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಿಂದ ಪರ್ಷಿಯನ್ ಭಾಷೆಯಲ್ಲಿ ಪೋಸ್ಟ್ ಒಂದು ಹೊರಬಿದ್ದಿದೆ. ಅದರ ಅಂದಾಜು ಅರ್ಥ “ನಾಮಿ ಹೈದರ್ ಹೆಸರಿನಲ್ಲಿ (ಅವರಿಗೆ ಶಾಂತಿ ಸಿಗಲಿ)” ಎಂಬುದಾಗಿದೆ. ಇರಾನ್‌ನ ಹಿರಿಯ ನಾಯಕತ್ವದ ಬಹುತೇಕ ಮಂದಿ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಈ ಸಂದರ್ಭದಲ್ಲಿ, ಈ ಪೋಸ್ಟ್ ಅನ್ನು ಯಾರು ಮಾಡಿರಬಹುದು ಎಂಬುದು ಈಗ ರಹಸ್ಯವಾಗಿ ಉಳಿದಿದೆ.