Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇರಾನ್ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಿಗೇ ಕೈಹಾಕಿದ ಇಸ್ರೇಲ್ ಆರ್ಮಿ: ರಕ್ಷಣಾ ಸಚಿವ, IRGC ಕಮಾಂಡರ್ ಹತ
ಪ್ರಮುಖವಿದೇಶ

ಇರಾನ್ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಿಗೇ ಕೈಹಾಕಿದ ಇಸ್ರೇಲ್ ಆರ್ಮಿ: ರಕ್ಷಣಾ ಸಚಿವ, IRGC ಕಮಾಂಡರ್ ಹತ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಯ ಬಿಸಿ, ಇರಾನ್’ಗೆ ತಟ್ಟಲು ಆರಂಭಿಸಿದೆ. ಇರಾನ್ ಕೂಡಾ ತೀವ್ರ ಪ್ರತಿರೋಧವನ್ನು ತೋರುತ್ತಿದ್ದು, ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕಾದ ವಾಯುನೆಲೆಗಳ ಮೇಲೆ ದಾಳಿಯನ್ನು ನಡೆಸಿದೆ.
ಸದ್ಯದ ಮಟ್ಟಿಗೆ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಗೆ ಇರಾನ್ ದೇಶದ ಆಯಕಟ್ಟಿನ ಇಬ್ಬರು ಪ್ರಭಾವೀ ನಾಯಕರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಇರಾನ್ ಸರ್ಕಾರ ಈ ಬಗ್ಗೆ ಇನ್ನೂ ಸ್ಪಷ್ಟನೆಯನ್ನು ನೀಡಿಲ್ಲ. ಇಸ್ರೇಲ್ ಆರ್ಮಿ, ಶಾಲೆಯ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ 51 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದೆ.

ಇರಾನ್ ದೇಶದ ರಕ್ಷಣಾ ಸಚಿವ ಅಮೀರ್ ಹತಾಮಿ ಮತ್ತು IRGC ಕಮಾಂಡರ್ ಮೊಹಮ್ಮದ್ ಪಕ್ಪೂರ್, ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಈ ಇಬ್ಬರು ಪ್ರಮುಖರು, ಸರ್ವೋಚ್ಚ ನಾಯಕ ಆಯತೊಲ್ಲಾ ಆಲಿ ಖಮೇನಿಯ ಪರಮಾಪ್ತರು ಎಂದು ವರದಿಯಾಗಿದೆ.
ಇರಾನ್ ದೇಶದ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು
ಇರಾನ್ ದೇಶದ ರಕ್ಷಣಾ ಸಚಿವರನ್ನೇ ಇಸ್ರೇಲ್ ಟಾರ್ಗೆಟ್ ಮಾಡಿದ್ದು, ಇರಾನ್ ದೇಶದ ಸ್ವಾಭಿಮಾನಕ್ಕೆ ಭಾರೀ ಪೆಟ್ಟನ್ನು ನೀಡಿದಂತಾಗಿದೆ. ಇನ್ನು, ದೇಶದ ಇಸ್ಲಾಮಿಕ್ ರೆವಲ್ಯೂಷನರಿ ಗಾಡ್ ಕಾರ್ಪ್ಸ್, ಭೂಸೇನಾ ಕಮಾಂಡರ್ ಆಗಿದ್ದ ಮೊಹಮ್ಮದ್ ಪಕ್ಪೂರ್ ಹತರಾಗಿದ್ದಾರೆ ಎಂದು ವರದಿಯಾಗಿದೆ. ನಮ್ಮ ಟಾರ್ಗೆಟ್ ಸರಿಯಾಗಿ ಬಿದ್ದಿದೆ ಎಂದು ಇಸ್ರೇಲ್ ಸೇನೆ ಸಂತಸವನ್ನು ವ್ಯಕ್ತ ಪಡಿಸಿದೆ. ಇದು, ಯುದ್ದ ಮುಂದುವರಿದರೆ, ಇರಾನ್’ಗೆ ದೊಡ್ಡ ಹೊಡೆತವನ್ನು ನೀಡಬಹುದು.
ರಕ್ಷಣಾ ಇಲಾಖೆಯ ಬೆನ್ನೆಲುಬುಗೇ ಕೈಹಾಕಿದ ಇಸ್ರೇಲ್ ಆರ್ಮಿ
ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ಪಡೆಗಳು, ಇರಾನ್’ನ ಆಯಕಟ್ಟಿನ ಮಿಲಿಟರಿ ಕೇಂದ್ರಗಳು, ಸರ್ಕಾರದ ಪ್ರಮುಖರ ನಿವಾಸ/ಕಚೇರಿ, ಅಧ್ಯಕ್ಷರ ಕಚೇರಿಯನ್ನೇ ಟಾರ್ಗೆಟ್ ಮಾಡುತ್ತಿದೆ. ಇರಾನ್ ದೇಶದ ರಕ್ಷಣಾ ಇಲಾಖೆಯ ಬೆನ್ನೆಲುಬಾಗಿದ್ದ ಇಬ್ಬರು ಪ್ರಮುಖರು ಹತ್ಯೆಯಾಗಿರುವುದು ಇರಾನ್’ಗೆ ದೊಡ್ಡ ಹೊಡೆತವನ್ನು ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇರಾನ್ ಪ್ರತಿರೋಧದ ಶಕ್ತಿಯನ್ನು ಕುಂದಿಸಲು, ಇಸ್ರೇಲ್ ರಣತಂತ್ರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.

ಕೆಲವೊಂದು ವರದಿಗಳ ಪ್ರಕಾರ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ನಿವಾಸ / ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಆದರೆ, ಅಧ್ಯಕ್ಷರ ಸ್ಥಿತಿಗತಿ ಏನು ಎನ್ನುವ ಅಂಶ ಇನ್ನೂ ಬಹಿರಂಗಗೊಂಡಿಲ್ಲ. ನಮ್ಮ ಕಾರ್ಯಾಚರಣೆಯು ಅತ್ಯಂತ ಯಶಸ್ವಿಯಾಗಿದೆ ಎಂದು ಇಸ್ರೇಲ್ ಸೈನಿಕರು ಸಂಭ್ರಮಿಸುತ್ತಿದ್ದಾರೆ, ಈ ದಾಳಿಯ ನಂತರ, ಪೂರ್ಣ ಪ್ರಮಾಣದ ಯುದ್ದದ ಎಚ್ಚರಿಕೆಯನ್ನು ಇರಾನ್ ನೀಡಿದೆ.
ಅಧಿಕೃತವಾಗಿ ಯುದ್ದಕ್ಕೆ ಇಳಿಯಿತೇ ಸೌದಿ ಅರೇಬಿಯಾ

ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ಜಂಟಿ ದಾಳಿಗೆ ಇರಾನ್ ಕೂಡಾ ಪ್ರತಿರೋಧವನ್ನು ತೋರುತ್ತಿದೆ. ಕತಾರ್, ಅಬುಧಾಬಿ ಮುಂತಾದ ಕಡೆ ಇರುವ ಅಮೆರಿಕಾದ ರಕ್ಷಣಾ ವ್ಯವಸ್ಥೆಯ ಮೇಲೆ ಇರಾನ್ ದಾಳಿ ನಡೆಸಿದೆ. ನಮ್ಮ ಪ್ರದೇಶದ ಮೇಲೆ, ದಾಳಿ ಮಾಡಿದ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕತಾರ್ ಎಚ್ಚರಿಕೆಯನ್ನು ನೀಡಿದೆ. ಕೆಲವೊಂದು ಮೂಲಗಳ ಪ್ರಕಾರ, ಸೌದಿ ಅರೇಬಿಯಾ, ಅಧಿಕೃತವಾಗಿ ಅಮೆರಿಕ ಮತ್ತು ಇಸ್ರೇಲ್ ಜೊತೆ ಯುದ್ದಕ್ಕೆ ಇಳಿದಿದೆ. ಇದಿನ್ನೂ ಖಚಿತವಾಗಿಲ್ಲ.

ಕುಕ್ಕರ್ ಸೀಟಿ ಪದೇ ಪದೇ ಹಾಳಾಗುತ್ತಿದೆಯೇ? ಜಸ್ಟ್ ಈ ರೀತಿ ಮಾಡಿ ಸಾಕು

TAGGED:IRGC commander killedIsraeli Army strikes at the very backbone of Iran's defense system: Defense Minister
Share This Article
Facebook Twitter Copy Link Print
Previous Article ಕುಕ್ಕರ್ ಸೀಟಿ ಪದೇ ಪದೇ ಹಾಳಾಗುತ್ತಿದೆಯೇ? ಜಸ್ಟ್ ಈ ರೀತಿ ಮಾಡಿ ಸಾಕು
Next Article ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಗುಪ್ತ ಸ್ಥಳಕ್ಕೆ ಖಮೇನಿ ಶಿಫ್ಟ್!

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?