Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ತಲೆಹೊಟ್ಟು ಸಮಸ್ಯೆಯೇ? ನಿಮ್ಮ ಮನೆಯಲ್ಲಿಯೇ ಇದೆ ಮದ್ದು!
ಪ್ರಮುಖಲೈಫ್‌ಸ್ಟೈಲ್

ತಲೆಹೊಟ್ಟು ಸಮಸ್ಯೆಯೇ? ನಿಮ್ಮ ಮನೆಯಲ್ಲಿಯೇ ಇದೆ ಮದ್ದು!

Share
2 Min Read
SHARE

https://youtube.com/shorts/HPVnxKDV8XI?si=2U7j97VieswUTk3f

Subscribe ನ್ಯೂಸಿಕ್ಸ್ ಕನ್ನಡ

newsics.com

ಸಾಮಾನ್ಯವಾಗಿ ಕೆಲವರಿಗೆ ಒತ್ತಡದ ಕೆಲಸ, ಎಸಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದು, ಒಬ್ಬರ ಹೆಲ್ಮೆಟ್ ಮತ್ತೊಬ್ಬರು ಬಳಸುವುದು, ಒಬ್ಬರು ಬಳಸಿದ ಬಾಚಣಿಕೆಯನ್ನು ಮತ್ತೊಬ್ಬರು ಬಳಸುವುದು, ಮನೆಯಲ್ಲಿ ಸಾಮಾನ್ಯ ತಲೆದಿಂಬುಗಳನ್ನು ಬಳಸುವುದು , ಮಾಲಿನ್ಯಕಾರಕ ಧೂಳುಯುಕ್ತ ಪ್ರದೇಶದಲ್ಲಿ ಸಂಚಾರ ಸೇರಿದಂತೆ ವಿವಿಧ ಕಾರಣಗಳಿಂದ ತಲೆಯ ಹೊಟ್ಟು ಬರುತ್ತದೆ.

 

ಆದರೆ, ಒಮ್ಮೆ ಬಂದ ತಲೆಹೊಟ್ಟು ಸುಲಭವಾಗಿ ಹೋಗುವುದಿಲ್ಲ. ಕೆಲವರಿಗೆ ಹಲವು ತಿಂಗಳು, ಹಲವು ವರ್ಷಗಳು ಕಳೆದರೂ ತಲೆಹಿಟ್ಟು ಹೋಗದೇ ಬೇಸತ್ತಿರುತ್ತಾರೆ. ಇನ್ನು ಟಿವಿಯಲ್ಲಿ ಹಾಗೂ ಇತರೆ ಜಾಹೀರಾತುಗಳ ಮೂಲಕ ತೋರಿಸುವ ಶಾಂಪೂಗಳನ್ನು ಬಳಸಿ ಸ್ನಾನ ಮಾಡಿದಾಗ ಮಾತ್ರ ಕಣ್ಮರೆಯಾಗುವ ಹೊಟ್ಟು ಪುನಃ ಮೂರು ದಿನಕ್ಕೆ ವಾಪಸ್ ಬರುತ್ತದೆ.

 

ಇದರಿಂದ ತಲೆಯಲ್ಲಿ ತುರಿಕೆ, ಕೂದಲು ಉದುರುವಿಕೆ, ಸೌಂದರ್ಯ ಕಳೆಗುಂದುವುದು, ಮುಖ ಹಾಗೂ ಬೆನ್ನಿನ ಮೇಲೆ ಸಣ್ಣ ಗುಳ್ಳೆಗಳಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ತಲೆ ಹೊಟ್ಟಿನಿಂದ ಬೇಸತ್ತು ಕೆಲವು ಪುರುಷರು ಇಡೀ ತಲೆಯನ್ನೇ ಬೋಳಿಸಿಕೊಂಡಿರುತ್ತಾರೆ. ಆದರೆ, ಮಹಿಳೆಯರು ತಮ್ಮ ಸೌಂದರ್ಯಕ್ಕೆ ಪೂರಕವಾಗಿರುವ ತಲೆ ಕೂದಲನ್ನು ತೆಗೆಯಲಾಗದೇ ಹೊಟ್ಟಿನಿಂದ ಬಳಲುತ್ತಿರುತ್ತಾರೆ. ಜೊತೆಗೆ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದರೂ ವೈದ್ಯರ ಫೀಸು ಹಾಗೂ ದುಬಾರಿ ಬೆಲೆಯ ಶಾಂಪೂ ಬಳಸಲು ಆರ್ಥಿಕ ಪರಿಸ್ಥಿತಿಯೂ ಉತ್ತಮ ಆಗಿರುವುದಿಲ್ಲ. ಹೀಗೆ, ತಲೆ ಹೊಟ್ಟಿನಿಂದ ಬೇಸತ್ತವರಿಗೆ ಸುಲಭವಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳುವ ಸಿಂಪಲ್ ಟಿಪ್ಸ್‌ಗಳು ಇಲ್ಲಿವೆ ನೋಡಿ.

 

1. ನಿಂಬೆ ರಸದ ಚಮತ್ಕಾರ

ನಿಂಬೆ ರಸವು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿದ್ದು, ಇದು ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಇದರಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಗಳು ಹೊಟ್ಟಿಗೆ ಕಾರಣವಾಗುವ ಶಿಲೀಂಧ್ರವನ್ನು (Fungus) ಬುಡದಿಂದಲೇ ನಿವಾರಿಸುತ್ತದೆ.

 

2. ಟೀ ಟ್ರೀ ಆಯಿಲ್ ಮತ್ತು ತೆಂಗಿನ ಎಣ್ಣೆ

ಆಂಟಿಫಂಗಲ್ ಗುಣಗಳನ್ನು ಹೊಂದಿರುವ ಟೀ ಟ್ರೀ ಆಯಿಲ್ ಅನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನೆತ್ತಿಗೆ ಮಸಾಜ್ ಮಾಡುವುದರಿಂದ ತುರಿಕೆ ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆಯು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡಿ ನೆತ್ತಿಯ ಶುಷ್ಕತೆಯನ್ನು ತಡೆಯುತ್ತದೆ.

 

 

3. ಅಡುಗೆ ಸೋಡಾ (Baking Soda)

ಅಡುಗೆ ಸೋಡಾ ನೆತ್ತಿಯಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕೂದಲನ್ನು ಒದ್ದೆ ಮಾಡಿ ಸ್ವಲ್ಪ ಸೋಡಾವನ್ನು ನೆತ್ತಿಗೆ ಉಜ್ಜಿ ನಂತರ ತೊಳೆದರೆ ಉತ್ತಮ ಫಲಿತಾಂಶ ಸಿಗಲಿದೆ.

 

4. ಲೋಳೆಸರ (Aloe Vera)

ಅಲೋವೆರಾ ತಂಪು ನೀಡುವ ಗುಣವನ್ನು ಹೊಂದಿದೆ. ಇದು ನೆತ್ತಿಯ ಉರಿಯೂತ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ. ತಾಜಾ ಅಲೋವೆರಾ ಜೆಲ್ ಅನ್ನು ನೇರವಾಗಿ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದುಕೊಂಡರೆ ಕೂದಲು ಕಾಂತಿಯುತವಾಗುತ್ತದೆ.

 

5. ಆಪಲ್ ಸೈಡರ್ ವಿನೆಗರ್

ಇದು ನೆತ್ತಿಯ pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಶಾಂಪೂ ಮಾಡಿದ ನಂತರ ತೊಳೆಯಲು ಬಳಸುವುದರಿಂದ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಬಹುದು.

https://www.newsics.com/2026/02/28/rashmika-vijay-couple-surprises-fans-after-wedding-celebrations-2/

TAGGED:Is dandruff a problem? There's a remedy right at your home!
Share This Article
Facebook Twitter Copy Link Print
Previous Article ವಿವಾಹ ಸಂಭ್ರಮ ಬೆನ್ನಲ್ಲೇ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ-ವಿಜಯ್ ಜೋಡಿ
Next Article ಆಂಧ್ರಪ್ರದೇಶದಲ್ಲಿ ಪಟಾಕಿ ದುರಂತಕ್ಕೆ 18 ಮಂದಿ ಬಲಿ

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?