Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮದುವೆ ಭರವಸೆ ನೀಡಿ ಲೈಂಗಿಕ ಸಂಪರ್ಕ ಪ್ರಕರಣಗಳಲ್ಲಿ ಕಡ್ಡಾಯವಿಲ್ಲದಿದ್ದರೂ ಆರೋಪಿಗಳನ್ನು ಬಂಧಿಸ್ತಿರೋದೇಕೆ?
ಕರ್ನಾಟಕಪ್ರಮುಖ

ಮದುವೆ ಭರವಸೆ ನೀಡಿ ಲೈಂಗಿಕ ಸಂಪರ್ಕ ಪ್ರಕರಣಗಳಲ್ಲಿ ಕಡ್ಡಾಯವಿಲ್ಲದಿದ್ದರೂ ಆರೋಪಿಗಳನ್ನು ಬಂಧಿಸ್ತಿರೋದೇಕೆ?

Share
1 Min Read
SHARE

https://youtube.com/shorts/OcRzQ68lM7k?si=kBWGhvCtygy6kinF

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು : ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸಿದ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಲ್ಲದಿದ್ದರೂ, ಪೊಲೀಸರು ಬಂಧಿಸುತ್ತಿರುವುದಕ್ಕೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಬೆಳವಣಿಗೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹೊಕ್ಕಳ್ಳಿ ಗ್ರಾಮದ ನಿವಾಸಿ ಎಚ್‌.ಜಿ. ಗಂಗ (29) ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಪ್ರಕರಣ ಸಂಬಂಧ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣಾ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೂರು ದಾಖಲಿಸುವಲ್ಲಿ ದೂರುದಾರೆ 1 ವರ್ಷ 3 ತಿಂಗಳು ವಿಳಂಬ ಮಾಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆರೋಪಿಯನ್ನು ಏಕೆ ಬಂಧಿಸಲಾಗಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಅರ್ಜಿದಾರ ತಲೆಮರೆಸಿಕೊಂಡಿದ್ದರು. ಈಗ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಯನ್ನು ಬಂಧಿಸುವುದು ಕಡ್ಡಾಯವೇನಿಲ್ಲ. 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಂಧಿಸಲಾಗುತ್ತಿದೆ. ಇಂಥ ಪ್ರಕರಣ ಎದುರಿಸುತ್ತಿರುವ ಎಲ್ಲ ಆರೋಪಿಗಳು ಜೈಲಿನೊಳಗಿದ್ದಾರೆ. ಬಂಧನ ಮಾಡಬಾರದು ಎಂದು ಕೋರ್ಟ್‌ ಹೇಳುತ್ತಲೇ ಇದೆ. ಪೊಲೀಸರು ಮಾತ್ರ ಬಂಧನ ಮಾಡುತ್ತಲೇ ಇದ್ದಾರೆ ಎಂದು ಖಾರವಾಗಿ ನುಡಿದರು.

https://www.newsics.com/2026/02/27/former-cm-o-panneerselvam-joins-dmk/

TAGGED:Why are the accused being arrested in cases of sexual intercourse on promise of marriage even though it is not mandatory?
Share This Article
Facebook Twitter Copy Link Print
Previous Article ಮಾಜಿ ಸಿಎಂ ಓ. ಪನ್ನೀರಸೆಲ್ವಂ DMK ಸೇರ್ಪಡೆ
Next Article ತಲೆಹೊಟ್ಟು ಸಮಸ್ಯೆಯೇ? ನಿಮ್ಮ ಮನೆಯಲ್ಲಿಯೇ ಇದೆ ಮದ್ದು!

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?