https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಮಲಗಲು ಹುಡಗೀರು ಬೇಕಾ ಸಾರ್.. ಎಲ್ಲಾ ಫ್ರೆಶ್, ಜಸ್ಟ್ 18 ರಿಂದ 20 ವರ್ಷದವರು. ಬನ್ನಿ ಕರ್ಕೊಂಡು ಹೋಗ್ತೀನಿ ಸಾರ್.. ಹೀಗಂತ ಆಟೋ ಚಾಲಕ ಆಫರ್ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇ ಕುರಿತು ವಿಡಿಯೋ ವೈರಲ್ ಆಗ್ತಿದೆ.
ಇನ್ನು ಅಟೋ ಡ್ರೈವರ್ ನ ಮಾತಿಗೆ ವಿದೇಶಿಗ ಬೆಚ್ಚಿಬಿದ್ದಿದ್ದಾನೆ. ವಿದೇಶಿಗರೊಬ್ಬರು ತಮಗಾದ ಅನುಭವದ ವಿಡಿಯೋ ಮಾಡಿಕೊಂಡಿದ್ದಾರೆ. ಆಟೋದಲ್ಲಿ ಪ್ರಯಾಣ ಮಾಡಲು ಆಟೋ ಹತ್ತಿದ್ದ ವಿದೇಶೀಯನನ್ನು ನೋಡಿ ಚಾಲಕ ಇಲ್ಲೇ ಜಸ್ಟ್ 20 ನಿಮಿಷ ದೂರ ಚೆನ್ನಾಗಿರೋ ಹುಡುಗೀರು ಇದ್ದಾರೆ. ಕೇವಲ 18-20 ವರ್ಷ ವಯಸ್ಸಿನವರು. ಒಳ್ಳೆ ರೂಂ ಕೂಡಾ ಇದೆ ಸಾರ್. ನಾನು 20 ನಿಮಿಷದಲ್ಲಿ ಹುಡುಗಿಯನ್ನು ಅರೇಂಜ್ ಮಾಡಿ ಕೊಡ್ತೀನಿ ಎಂದು ಆಟೋ ಚಾಲಕ ಹೇಳುತ್ತಾನೆ.
ಇದಕ್ಕೆ ವಿದೇಶಿಗ ಬೇಡ ಎಂದರೂ ಕೇಳದೇ ಆತ ಅಲ್ಲಿಗೆ ಕರೆದುಕೊಂಡು ಹೋಗಲು ನೋಡುತ್ತಾನೆ. ಆದರೆ ವಿದೇಶಿಗ ಬೇಡ ಬೇಡ ಎಂದು ಖಡಾ ಖಂಡಿತವಾಗಿ ಹೇಳುತ್ತಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತ ಸಾಂಪ್ರದಾಯಿಕ ರಾಷ್ಟ್ರ ಎನ್ನುವ ಕಲ್ಪನೆ ವಿದೇಶೀಯರಲ್ಲಿದೆ. ಆದರೆ ಇಂತಹ ಘಟನೆಗಳು ದೇಶದ ಮಾನವನ್ನೇ ಹರಾಜು ಹಾಕುವಂತದ್ದಾಗಿದೆ.