Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಶಿಖರ್ ಧವನ್‌ಗೆ 5.72 ಕೋಟಿ ಹಿಂತಿರುಗಿಸುವಂತೆ ಮಾಜಿ ಪತ್ನಿಗೆ ಕೋರ್ಟ್‌ ಆದೇಶ
ದೇಶಪ್ರಮುಖ

ಶಿಖರ್ ಧವನ್‌ಗೆ 5.72 ಕೋಟಿ ಹಿಂತಿರುಗಿಸುವಂತೆ ಮಾಜಿ ಪತ್ನಿಗೆ ಕೋರ್ಟ್‌ ಆದೇಶ

Share
1 Min Read
SHARE

https://youtube.com/shorts/tAQS6h_SZWA?si=f1t_2CedcPuoHdto

Subscribe ನ್ಯೂಸಿಕ್ಸ್ ಕನ್ನಡ

newsics.com

ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿಖರ್ ಧವನ್ ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಎರಡನೇ ಬಾರಿಗೆ ಬಹಳ ಸಂಭ್ರಮದಿಂದ ಮದುವೆಯಾಗಿದ್ದರು. ಮದುವೆಯ ಮೂರನೇ ದಿನ ಶಿಖರ್ ಧವನ್‌ ಅವರಿಗೆ ಗುಡ್​ ನ್ಯೂಸ್ ಸಿಕ್ಕಿದೆ. ದೆಹಲಿಯ ಪಟಿಯಾಲ ಹೌಸ್ ಫ್ಯಾಮಿಲಿ ಕೋರ್ಟ್ ಶಿಖರ್ ಧವನ್‌ ಅವರಿಗೆ ದೊಡ್ಡ ಪರಿಹಾರ ನೀಡಿದೆ. ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರು ಮಾಜಿ ಕ್ರಿಕೆಟಿಗರಿಗೆ ಸುಮಾರು 5.72 ಕೋಟಿಯನ್ನು ಹಿಂದಿರುಗಿಸುವಂತೆ ಆದೇಶಿಸಿದೆ.

ಶಿಖರ್‌ ಧವನ್‌ ಮತ್ತು ಆಸ್ಟ್ರೇಲಿಯನ್‌ ಮೂಲದ ಆಯೆಷಾ ಮುಖರ್ಜಿ ದಂಪತಿ 2012 ರಲ್ಲಿ ಮದುವೆಯಾಗಿದ್ದರು. ಅಲ್ಲದೇ ಮೊದಲ ಪತ್ನಿಗೆ ಜೋರಾವರ್‌ ಧವನ್‌ ಎಂಬ ಒಬ್ಬ ಮಗನಿದ್ದು, ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ 2023ರ ಅಕ್ಟೋಬರ್‌ನಲ್ಲಿ ದೆಹಲಿ ಕೋರ್ಟ್‌ ಇವರಿಬ್ಬರಿಗೆ ವಿಚ್ಛೇದನ ನೀಡಿತ್ತು.

ವಿಚ್ಛೇದನದ ನಂತರ ಆಸ್ಟ್ರೇಲಿಯಾ ಕೋರ್ಟ್‌ 2024ರ ಫೆಬ್ರವರಿಯಲ್ಲಿ “ಇಂಟರಿಮ್‌ ಪ್ರಾಪರ್ಟಿ ಸೆಟಲ್‌ಮೆಂಟ್‌” ಆದೇಶ ನೀಡಿ. ಆಸ್ಟ್ರೇಲಿಯಾದಲ್ಲಿ ಮಾರಾಟವಾದ ಆಸ್ತಿಗಳಿಂದ ಬಂದ ಹಣದಲ್ಲಿ ಒಂದಿಷ್ಟು ಹಣವನ್ನು ಆಯೆಷಾ ಅವರಿಗೆ ನೀಡಬೇಕೆಂದು ಧವನ್‌ಗೆ ಆದೇಶ ನೀಡಿತ್ತು. ಆದೇಶದ ಅನುಸಾರವಾಗಿ ಧವನ್‌ ಹಣವನ್ನು ನೀಡಿದ್ದಾರೆ ಅಂತಾನೂ ಹೇಳಲಾಗಿದೆ.

ಆಸ್ಟ್ರೇಲಿಯಾದ ಕುಟುಂಬ ನ್ಯಾಯಾಲಯದ ಆದೇಶದ ನಂತರ ಈ ವಿಷಯ ಪ್ರಾರಂಭವಾಗಿತ್ತು. ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಆಸ್ಟ್ರೇಲಿಯಾದ ಪ್ರಜೆ. ಆಸ್ತಿ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಅವರು ಆಸ್ಟ್ರೇಲಿಯಾದ ನ್ಯಾಯಾಂಗವನ್ನು ಸಂಪರ್ಕಿಸಿದರು. ಈಗ ಆಸ್ಟ್ರೇಲಿಯಾದ ಕೋರ್ಟ್ ನೀಡಿದ ಆಸ್ತಿ ವಿತರಣಾ ಆದೇಶವು ಭಾರತೀಯ ಕಾನೂನಿನ ಅಡಿಯಲ್ಲಿ ಅಮಾನ್ಯವಾಗಿದೆ ಎಂದು ಸ್ಪಷ್ಟಪಡಿಸುವ ಮೂಲಕ ದೆಹಲಿ ಕೋರ್ಟ್ ಈ ಮಹತ್ವದ ಹೆಜ್ಜೆ ಇಟ್ಟಿದೆ.

https://www.newsics.com/2026/02/26/rashmika-vijay-who-crossed-the-threshold-kodagu-style-wedding-in-the-evening/

TAGGED:Court orders ex-wife to return Rs 5.72 crore to Shikhar Dhawan
Share This Article
Facebook Twitter Copy Link Print
Previous Article ಸಪ್ತಪದಿ ತುಳಿದ ರಶ್ಮಿಕಾ- ವಿಜಯ್: ಸಂಜೆ ಕೊಡಗು ಶೈಲಿಯಲ್ಲಿ ಮದುವೆ
Next Article ಮಹಿಳೆಯರಿಗೆ ಕಾಲ್ಬೆರಳುಗಳ ಮೇಲೆ ಕೂದಲು ಇರುವುದು ಒಳ್ಳೆಯದೋ? ಕೆಟ್ಟದ್ದೋ?

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?