Subscribe ನ್ಯೂಸಿಕ್ಸ್ ಕನ್ನಡ
newsics.com
ತನ್ನ ಹೆಂಡತಿಯನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ ಪತಿ, ಬೆಡ್‌ರೂಮ್‌ನ ಆ ದೃಶ್ಯವನ್ನು ಕಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಈ ಘಟನೆ ಎಲ್ಲಿ ನಡೆದಿದೆ, ಸಂತ್ರಸ್ತ ಪತಿ ಮತ್ತು ಆರೋಪಿ ಯುವಕ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆಲ ಸಮಯದ ಹಿಂದೆಯಷ್ಟೇ ಇವರಿಬ್ಬರ ಮದುವೆಯಾಗಿತ್ತು. 37 ವರ್ಷದ ಪತಿ, ತನ್ನ ಪತ್ನಿಗಿಂತ ಸುಮಾರು 13 ವರ್ಷ ದೊಡ್ಡವನು. ಪತ್ನಿಯ ವಯಸ್ಸು 25 ವರ್ಷ. ಈ ನಡುವೆ, ಮಹಿಳೆಯು ಪಕ್ಕದ ಮನೆಯ ಯುವಕನೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದಳು.
ಒಂದು ದಿನ ಪತಿ, ತನ್ನ ಹೆಂಡತಿಯನ್ನು ಮನೆಯ ಬೆಡ್‌ರೂಮ್‌ನಲ್ಲೇ ಬೇರೊಬ್ಬ ವ್ಯಕ್ತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಹಿಡಿದಿದ್ದಾನೆ. ಪತ್ನಿಯ ಈ ನಾಚಿಕೆಗೇಡಿನ ಕೃತ್ಯದಿಂದ ಆತ ತೀವ್ರ ಆಘಾತಕ್ಕೊಳಗಾಗಿ ಅಲ್ಲೇ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ.
ಪತಿ ಪ್ರಜ್ಞೆ ತಪ್ಪಿ ಬಿದ್ದ ನಂತರ, ಕುಟುಂಬದ ಇತರ ಸದಸ್ಯರು ಬಂದು ಆತನನ್ನು ಎಚ್ಚರಗೊಳಿಸಲು ಪ್ರಯತ್ನಿಸಿದರು. ಈ ವೇಳೆ, ಪತ್ನಿಯು ಜೋರಾಗಿ ಅಳುತ್ತಾ, ‘ನನ್ನನ್ನು ಕ್ಷಮಿಸಿ, ನನ್ನಿಂದ ತಪ್ಪಾಗಿದೆ’ ಎಂದು ಪದೇ ಪದೇ ಗೋಗರೆಯುತ್ತಿದ್ದಳು.