https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ಸೋಮವಾರ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬುಲೆನ್ಸ್ (ವಿಮಾನ) ಪತನಗೊಂಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಾಹಿತಿ ನೀಡಿದೆ.
ಅಪಘಾತಕ್ಕೀಡಾದ ವಿಮಾನದಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು. ಅದರಂತೆ ಇಬ್ಬರು ಪೈಲಟ್‌ಗಳು, ಒಬ್ಬ ರೋಗಿ (ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದವರು), ಇಬ್ಬರು ರೋಗಿಯ ಸಹಾಯಕರು, ಒಬ್ಬ ವೈದ್ಯರು ಮತ್ತು ಒಬ್ಬ ಅರೆವೈದ್ಯಕೀಯ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ತಿಳಿದುಬಂದಿದೆ.
ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್‌ಕ್ರಾಫ್ಟ್ ಸಿ90 (VT-AJV) ವಿಮಾನವು ರಾಂಚಿಯಿಂದ ಸಂಜೆ 7:11ಕ್ಕೆ ದೆಹಲಿಗೆ ಹೊರಟಿದೆ. ಕೋಲ್ಕತ್ತಾ ಎಟಿಸಿ (ATC) ಜೊತೆಗೆ ಸಂಪರ್ಕ ಸಾಧಿಸಿದ ನಂತರ, ರಾತ್ರಿ 7:34ರ ಸುಮಾರಿಗೆ ವಾರಣಾಸಿಯಿಂದ ಆಗ್ನೇಯಕ್ಕೆ ಸುಮಾರು 100 ನಾಟಿಕಲ್ ಮೈಲಿ ದೂರದಲ್ಲಿ ವಿಮಾನದ ರಡಾರ್ ಮತ್ತು ಸಂವಹನ ಸಂಪರ್ಕ ಕಡಿತಗೊಂಡಿದೆ. ಆ ನಂತರ ವಿಮಾನವು ಛತ್ರ ಜಿಲ್ಲೆಯ ವ್ಯಾಪ್ತಿಯಲ್ಲಿ ಪತನಗೊಂಡಿದೆ.ರಕ್ಷಣಾ ತಂಡಗಳು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಚುರುಕುಗೊಂಡಿದೆ.