https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿರುವುದು ಸತ್ಯ, ಮದುವೆಯಾಗುತ್ತಿರುವುದೂ ಸತ್ಯ! ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಇಬ್ಬರ ಲವ್ ಗಾಸಿಪ್‌ಗೆ ಈಗ ‘ಅಫೀಶಿಯಲ್’ ಎಂಬ ಮುದ್ರೆ ಬಿದ್ದಿದೆ. ತಮ್ಮ ಪ್ರೀತಿ ಹಾಗೂ ಮದುವೆ ಸುದ್ದಿಯನ್ನ ಇಬ್ಬರೂ ಖಚಿತ ಪಡಿಸಿದ್ದಾರೆ.
ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜಯ್ ದೇವರಕೊಂಡ ಜತೆ ಮದುವೆಯಾಗುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ.
ರಶ್ಮಿಕಾ ಪೋಸ್ಟ್‌ನಲ್ಲಿ ಏನಿದೆ?
ಅಭಿಮಾನಿಗಳನ್ನು ಉದ್ದೇಶಿಸಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ’ನಾವು ಏನಾದರೂ ಹೊಸದನ್ನು ಮಾಡುವ ಮೊದಲು, ಹೊಸದನ್ನು ಆರಿಸಿಕೊಳ್ಳುವ ಮೊದಲು ನೀವು ನಮ್ಮೊಂದಿಗೆ ಇರುತ್ತೀರಿ. ನೀವೇ ಪ್ರೀತಿಯಿಂದ ನಮಗೆ ‘VIROSH’ (ವಿರೋಶ್) ಎಂದು ಕರೆದಿದ್ದೀರಿ. ಆದ್ದರಿಂದ ಇಂದು, ನಾವು ಒಂದಾಗುತ್ತಿರುವ ಈ ಶುಭ ಸಂದರ್ಭಕ್ಕೆ ಅದೇ ಹೆಸರನ್ನು ಇಡುತ್ತಿದ್ದೇವೆ. ನಾವೀಗ ಇದನ್ನು ‘The Wedding of VIROSH’ ಎಂದು ಕರೆಯಲು ಬಯಸುತ್ತೇವೆ, ನಮಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ನೀವು ಎಂದಿಗೂ ನಮ್ಮ ಬದುಕಿನ ಭಾಗವಾಗಿರುತ್ತೀರಿ’ ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಹೆಸರನ್ನು ಸೇರಿಸಿ ವಿರೋಶ್- ‘VIROSH’ ಎಂದು ಕರೆದಿದ್ದಾರೆ. ಅಂದರೆ VIjay + ROSHmika ಎಂದರ್ಥವಾಗಿದೆ.
ಫೆಬ್ರವರಿ 26ರಂದು ರಾಜಸ್ಥಾನದಲ್ಲಿನ ಉದಯಪುರದ ಹೆರಿಟೇಜ್ ಪ್ಯಾಲೆಸ್‌ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ ಎನ್ನಲಾಗಿದೆ. ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ಯಂತೆ. ಆಪ್ತರಷ್ಟೇ ಭಾಗಿಯಾಗುವ ಈ ಸಮಾರಂಭದಲ್ಲಿ ‘ನೋ ಫೋನ್’ ನಿಯಮ ಜಾರಿಯಾಗಲಿದೆ. ಮಾರ್ಚ್ 4ರಂದು ಸ್ನೇಹಿತರು, ಸಹಕಲಾವಿದರು ಮತ್ತು ಸಿನಿರಂಗದ ಗಣ್ಯರಿಗಾಗಿ ಅದ್ಧೂರಿ ರಿಸೆಪ್ಷನ್ ಏರ್ಪಡಿಸಲಾಗಿದೆ.
https://www.newsics.com/2026/02/23/8-year-old-girl-dies-after-swallowing-ludo-nut/