Subscribe ನ್ಯೂಸಿಕ್ಸ್ ಕನ್ನಡ
newsics.com
ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಗೋವಿಂದ ಹಾಗೂ ಪತ್ನಿ ಸುನಿತಾ ಅಹುಜಾ ನಡುವಿನ ಕೌಟುಂಬಿಕ ಕಲಹದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು.ಗೋವಿಂದ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಸುನೀತಾ ಆರೋಪಿಸಿದ್ದರು. ಗೋವಿಂದ ತಮ್ಮ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಅದಾದ ನಂತರ, ಸುನೀತಾ ಮತ್ತೊಮ್ಮೆ ಗೋವಿಂದನ ಬಗ್ಗೆ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ವ್ಲಾಗ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಕ್ಷಮಿಸೋದಾಗಿ ಹೇಳಿದ್ದಾರೆ.
ನನ್ನ ಮುಗ್ಧತೆಯ ಲಾಭವನ್ನು ಅನೇಕರು ಪಡೆದುಕೊಂಡಿದ್ದಾರೆ. ನಾನು ಬಹಳಷ್ಟು ಸಹಿಸಿಕೊಂಡಿದ್ದೇನೆ. ಆದರೆ ನಾನು ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ. ನಾನು ಈಗ ನನ್ನದೇ ಆದ ಐಡೆಂಟಿಟಿ ಮಾಡಿಕೊಂಡಿದ್ದೇನೆ. 40 ವರ್ಷಗಳ ಸಂಬಂಧವು ರಾತ್ರೋರಾತ್ರಿ ಮುರಿಯುವುದಿಲ್ಲ. ಆದ್ದರಿಂದ ನಾನು ಸ್ವಲ್ಪ ಭಾವನಾತ್ಮಕವಾಗಿರುವುದು ಹೌದು. ಆದರೆ ಈಗ ನನ್ನ ಮನಸ್ಸು ಬಲವಾಗಿದೆ’ ಎಂದು ಸುನೀತಾ ಹೇಳಿದರು.
‘ನಾನು ಯಾವಾಗಲೂ ಸತ್ಯವನ್ನೇ ಹೇಳುತ್ತೇನೆ. ನಾನು ಪ್ರತಿ ಮಹಿಳೆಗೂ ತನ್ನ ಹಕ್ಕುಗಳಿಗಾಗಿ ಹೋರಾಡಬೇಕೆಂದು ಹೇಳುತ್ತೇನೆ. ನನ್ನ ಅತ್ತೆ-ಮಾವಂದಿರು ಇದ್ದಾಗ, ನಾನು ಸುಮ್ಮನಿರುತ್ತಿದ್ದೆ. ಏಕೆಂದರೆ ನಾನು ಅವರನ್ನು ತುಂಬಾ ಗೌರವಿಸುತ್ತಿದ್ದೆ. ಆದರೆ ಈಗ ಗೋವಿಂದ ಮತ್ತು ನಾನು ಸ್ನೇಹಿತರಾಗಿರುವುದರಿಂದ, ನಾನು ಯಾಕೆ ಸುಮ್ಮನಿರಬೇಕು ಮತ್ತು ಅವರ ಮಾತುಗಳನ್ನು ಕೇಳಬೇಕು ಅಥವಾ ಭಯಪಡಬೇಕು’ ಎಂದು ಪ್ರಶ್ನಿಸಿದ್ದಾರೆ.
ಗೋವಿಂದ ಬದಲಾದರೆ ಮತ್ತು ನನ್ನ ನಿಯಮಗಳ ಪ್ರಕಾರ ಬದುಕಲು ಪ್ರಾರಂಭಿಸಿದರೆ, ನಾನು ಅವನನ್ನು ಕ್ಷಮಿಸುತ್ತೇನೆ. ಪ್ರತಿದಿನ ನನ್ನ ಬಗ್ಗೆ ಸುದ್ದಿಗಳಲ್ಲಿ ಏನಿದೆ ಎಂಬುದರ ಬಗ್ಗೆ ನಾನು ಗಮನ ಹರಿಸುವುದಿಲ್ಲ. ನಾನು ಇಷ್ಟೊಂದು ಒತ್ತಡವನ್ನು ಸಹಿಸಿಕೊಳ್ಳುವ ವಯಸ್ಸಿನಲ್ಲಿಲ್ಲ. ಈಗ ನಿಮಗೆ ನಿಮ್ಮ ಗಂಡ ಮತ್ತು ಮಕ್ಕಳ ಬೆಂಬಲ ಬೇಕು, ಒತ್ತಡವಲ್ಲ’ ಎಂದಿದ್ದಾರೆ ಅವರು.