https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಭುವನೇಶ್ವರ್: ಟ್ರಕ್ ಹಾಗೂ ಪೊಲೀಸ್ ವ್ಯಾನ್ ಮುಖಾಮುಖಿ ಡಿಕ್ಕಿಯಾಗಿ ಐವರು ಪೊಲೀಸರು ಸಾವನ್ನಪ್ಪಿರುವ ಘೋರ ಘಟನೆ ಒಡಿಶಾದ ಜಾರ್ಸುಗುಡಾ ಜಿಲ್ಲೆಯ ಸಾದರ್ ಪೊಲೀಸ್ ಸ್ಟೇಷನ್ ಎದುರೇ ನಡೆದಿದೆ.
ಮೃತರನ್ನು ಸಬ್ ಇನ್ಸ್ ಪೆಕ್ಟರ್ ನಿರಂಜನ್ ಕುಜೂರ್, ಲಿಂಗರಾಜ್ ಧುರುವಾ, ಕಾಶಿರಾಮ್ ಭೋಯ್, ದೇಬ್ಡತ್ ಸಾ, ಭಕ್ರಬಂಧು ಮಿರ್ದಾ ಎಂದು ಗುರುತಿಸಲಾಗಿದೆ. ಗಾಯಾಳು ಮೂವರು ಪೊಲೀಸ್ ಸಿಬ್ಬಂದಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಸಿಆರ್ ವ್ಯಾನ್ ಹಾಗೂ ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ರಸ್ತೆ ಪಕ್ಕದ ಪ್ರದೇಶಕ್ಕೆ ಹೋಗಿ ಬಿದ್ದಿವೆ.
https://www.newsics.com/2026/02/22/if-govinda-changes-i-will-forgive-him-wife/