newsics.com
ಬೆಂಗಳೂರು: ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದು ಹೃದಯದ ಆರೋಗ್ಯ, ಹಾರ್ಮೋನ್ ಅಸಮತೋಲನ ಮತ್ತು ಕ್ಯಾನ್ಸರ್‌ಗೆ ಸಂಬಂಧಿಸಿವೆ ಅಂತಾ ಹಿಂದೆ ಸುಮಾರಷ್ಟು ವರದಿಗಳಾಗಿವೆ.
ಪ್ರಸ್ತುತ ಹೊಸ ಅಧ್ಯಯನವು, ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಎಂಬ ಅಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ.
ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.
ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿಕೊಂಡು ಬಿಸಿಲಿಗೆ ಹೋಗುವುದರಿಂದಲೂ ಅಪಾಯವಿದೆ. ಇದರಿಂದ ಬಾಟಲಿಯ ನೀರಿನಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗಿ ನೀರು ಕಲುಷಿತಗೊಳ್ಳುತ್ತದೆ.
ಭೂಮಿಯ ಮೇಲಿನ ಪ್ರತೀ ಜೀವಿಗೆ ನೀರು ಅತ್ಯಗತ್ಯ. ದೇಹದ ಸರ್ವತೋಮುಖ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ಕುಡಿಯಬೇಕು.