https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.
ಕಾರಣ, ಇತ್ತೀಚೆಗೆ ನಮ್ರತಾ ಗೌಡ ಪೋಸ್ಟ್ ಮಾಡಿದ ರೀಲ್‌ನಿಂದ. ಹೌದು ಕೆಲವರಿಗೆ ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಪ್ರೀತಿಯಲ್ಲಿದ್ದಾರೆ ಅನ್ನೋ ಅನುಮಾನ ಶುರುವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ನಮ್ರತಾ ಗೌಡ ಅವರ ರೀಲ್ಸ್‌ನಲ್ಲಿ ಕಾರ್ತಿಕ್ ಮಹೇಶ್ ಅವರ ಕೈ ಕಾಣ್ತಿತ್ತು ಎಂದು ಹಲವರು ಇದು ನಿಜಾ ಅಂತೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.ಆದರೆ ಅವರಿಬ್ಬರೂ ಇದು ವರೆಗೂ ತಾವು ಸ್ನೇಹಿತರಷ್ಟೇ ಎಂದು ಹೇಳಿಕೊಂಡು ಬರುತ್ತಿದ್ದಾರೆ.
ಈ ಎಲ್ಲ ವದಂತಿಗಳಿಗೆ ತೆರೆ ಎಳೆಯುವಂತೆ ನಮ್ರತಾ ಗೌಡ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ರಿಲೇಶನ್‌ಶಿಪ್ ಸ್ಟೇಟಸ್ ಹಾಗೂ ಮದುವೆ ಬಗ್ಗೆ ಹರಡುತ್ತಿರುವ ಸುದ್ದಿಗಳ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ನನ್ನ ರಿಲೇಶನ್‌ಶಿಪ್ ಸ್ಟೇಟಸ್, ಮದುವೆಯ ಬಗ್ಗೆ ಸಾಕಷ್ಟು ವದಂತಿ ಹರಡುತ್ತಿರೋದು ನಾನು ಗಮನಿಸುತ್ತಿದ್ದೇನೆ. ನಾನೊಂದು ಮಾತು ಹೇಳ್ತೀನಿ ಕೇಳಿ, ಒಂದು ವೇಳೆ ನಾನು ಮದುವೆಯಾಗುತ್ತಿದ್ದರೆ, ಈ ವಿಷಯವನ್ನು ಗುಟ್ಟಾಗಿಡಲು ನಾನೇ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದೆನು. ಆದರೆ ಮದುವೆ ಸೀರೆಗಾಗಿ ಹೊಸ ಬಣ್ಣವೊಂದನ್ನು ಸಂಶೋಧಿಸುತ್ತಿದ್ದಾರಂತೆ ಎಂದು ನಾನು ಕೇಳಲ್ಪಟ್ಟೆ, ಅದು ಮಾರ್ಕೆಟ್‌ಗೆ ಬರುವವರೆಗೆ ನಾನು ಇನ್ನು ಕೆಲವು ವರ್ಷ ಕಾಯಲಿದ್ದೇನೆ. ಇಷ್ಟೇ ನಾನು ಹೇಳೋಕೆ ಇರೋದು” ಎಂದು ನಟಿ ನಮ್ರತಾ ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಹೇಳಿಕೆಯಿಂದ ನಮ್ರತಾ ಪ್ರಸ್ತುತ ಮದುವೆ ಅಥವಾ ಪ್ರೀತಿ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
https://www.newsics.com/2026/02/18/ai-will-eliminate-jobs-create-new-companies-khosla/