https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವಮೊಗ್ಗ : ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಅಧಿಕಾರಿಯೊಬ್ಬರಿಗೆ ರೈತನೊಬ್ಬ ಬ್ರೆಡ್, ಬಾಳೆಹಣ್ಣು ಹಾಗೂ ಸೊಳ್ಳೆಬತ್ತಿಯನ್ನು ನೀಡಿ, ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುವ ಮೂಲಕ ಅಕ್ಷರಶಃ ಸಾರ್ವಜನಿಕವಾಗಿ ಮಾನ ಹರಾಜು ಹಾಕಿರುವ ಘಟನೆ ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಲಿಂಗರೆಡ್ಡಿ ಇತ್ತೀಚೆಗೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿಗೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾರೆ.
ಈ ಅಧಿಕಾರಿಯ ಕಾರ್ಯವೈಖರಿಯಿಂದ ನೊಂದಿದ್ದ ಶ್ರೀಗಂಧ ಬೆಳೆಗಾರ ವಿಶುಕುಮಾರ್ ತಲೆ ಮೇಲೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಬಳಸಿದ್ದ ಶ್ರೀಗಂಧದ ಪಾದುಕೆಯನ್ನು ಹೊತ್ತು ಜೈಲಿನ ದ್ವಾರಕ್ಕೆ ಬಂದು ಅಧಿಕಾರಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ನಟಿಸುತ್ತಾ ವ್ಯಂಗ್ಯವಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಶುಕುಮಾರ್, ಸಿದ್ದಲಿಂಗರೆಡ್ಡಿ ಅವರ ಭ್ರಷ್ಟಾಚಾರ ಮತ್ತು ರೈತ ವಿರೋಧಿ ಧೋರಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ‘ಸರ್ಕಾರಕ್ಕೆ ಹಣ ಉಳಿಸಲು ಈ ಅಧಿಕಾರಿ ಬಹಳ ಶ್ರಮವಹಿಸಿದ್ದಾರೆ. ಸರ್ಕಾರಕ್ಕೆ 6ನೇ ಗ್ಯಾರಂಟಿ ಕೊಡಲು ಇವರು ಇಷ್ಟು ಹಣ ಉಳಿಸಿರಬೇಕು’ ಎಂದು ವಿಶುಕುಮಾರ್ ಖಾರವಾಗಿ ಟೀಕಿಸಿದರು.
https://www.newsics.com/2026/02/18/ai-will-eliminate-jobs-create-new-companies-khosla/