https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.comcom
ಮನುಷ್ಯನಿಗೆ ರಕ್ತದ ಒತ್ತಡ ಯಾವಾಗಲೂ ನಾರ್ಮಲ್ ಆಗಿರಬೇಕು. ಹೆಚ್ಚೂ ಆಗಬಾರದು ಕಡಿಮೆನೂ ಆಗ್ಬಾರದು.ಒಂದು ವೇಳೆ ರಕ್ತದ ಒತ್ತಡದಲ್ಲಿ ಏರುಪೆರಾದರೆ ಅದರ ನೇರ ಪರಿಣಾಮ ಹೃದಯದ ಮೇಲೆ ಕಾಣಿಸಿಕೊಳ್ಳುತ್ತದೆ! ಪ್ರಮುಖವಾಗಿ ಈ ಕಾಯಿಲೆಯ ರೋಗಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭ ಮಾತಲ್ಲ, ಯಾಕೆಂದ್ರೆ ಈ ಕಾಯಿಲೆಯ ಲಕ್ಷಣಗಳು ಅಷ್ಟೊಂದು ಸೂಕ್ಷ್ಮವಾಗಿರುತ್ತವೆ, ನಿಧಾನವಾಗಿ ಮತ್ತು ಯಾವುದೇ ನಿರ್ದಿಷ್ಟ ಲಕ್ಷಣಗಳಿಲ್ಲದೆ ದೇಹವನ್ನು ಒಳಗಿನಿಂದ ಹಾನಿಗೊಳಿಸುತ್ತಾ ಬರುತ್ತದೆ.
ಬಿಪಿ ಇರುವವರು ವೈದ್ಯರ ಸೂಚನೆಯಂತೆ ನಿರಂತರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಆದರೆ, ಈಗ ಅಂತಹವರಿಗಾಗಿ ಒಂದು ವಿಶೇಷ ಸೌಲಭ್ಯ ಲಭ್ಯವಾಗುವ ಸಾಧ್ಯತೆ ಇದೆ. ವರ್ಷಕ್ಕೆ ಕೇವಲ ಎರಡೇ ಇಂಜೆಕ್ಷನ್ ಪಡೆಯುವ ಮೂಲಕ ಬಿಪಿಯನ್ನು ನಿಯಂತ್ರಣದಲ್ಲಿಡಬಹುದು ಎಂದು ಸಂಶೋಧನೆಗಳು ತಿಳಿಸಿವೆ.
ವರ್ಷಕ್ಕೆ ಎರಡು ಇಂಜೆಕ್ಷನ್: ಸಂಶೋಧನೆ ಹೇಳುವುದೇನು?
ಖ್ಯಾತ ವೈದ್ಯಕೀಯ ನಿಯತಕಾಲಿಕೆ ‘ದಿ ಲ್ಯಾನ್ಸೆಟ್’ ಇತ್ತೀಚಿನ ವರದಿಯ ಪ್ರಕಾರ, ಇನ್ಮುಂದೆ ಬಿಪಿ ನಿಯಂತ್ರಣಕ್ಕೆ ಪ್ರತಿದಿನ ಮಾತ್ರೆ ನುಂಗುವ ಅಗತ್ಯವಿಲ್ಲದಿರಬಹುದು. ವರ್ಷಕ್ಕೆ ಕೇವಲ ಎರಡು ಇಂಜೆಕ್ಷನ್ಗಳ ಮೂಲಕ ಬಿಪಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಅಮೆರಿಕದ ರೋಶ್ ಮತ್ತು ಅಲ್ನೈಲಮ್ ಫಾರ್ಮಾಸ್ಯೂಟಿಕಲ್ಸ್ ಈ ಹೊಸ ಮದ್ದನ್ನು ತಯಾರಿಸಿವೆ.ಇದು ಆರ್ಎನ್ಎ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಇಂಜೆಕ್ಷನ್ಗೆ ‘ಜಿಲೆಬೆಸಿರನ್’ ಎಂದು ಹೆಸರಿಡಲಾಗಿದೆ
ಕಾರ್ಯವಿಧಾನ: ಬಿಪಿಗೆ ಮುಖ್ಯ ಕಾರಣವಾದ, ಯಕೃತ್ತಿನಿಂದ ಉತ್ಪತ್ತಿಯಾಗುವ ‘ಆಂಜಿಯೋಟೆನ್ಸಿನೋಜೆನ್’ ಎಂಬ ಪ್ರೋಟೀನ್ ಅನ್ನು ಇದು ತಡೆಯುತ್ತದೆ.
ಈ ಇಂಜೆಕ್ಷನ್ ಪಡೆದರೆ ಆರು ತಿಂಗಳವರೆಗೆ ಬಿಪಿ ಸಮರ್ಥವಾಗಿ ನಿಯಂತ್ರಣದಲ್ಲಿರುತ್ತದೆ ಎಂದು ಮೂರನೇ ಹಂತದ ಪರೀಕ್ಷೆಗಳಲ್ಲಿ ತಿಳಿದುಬಂದಿದೆ.ಶೀಘ್ರದಲ್ಲೇ ಈ ಚಿಕಿತ್ಸೆ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದ್ದು, ಇದು ಲಕ್ಷಾಂತರ ಬಿಪಿ ರೋಗಿಗಳಿಗೆ ದೊಡ್ಡ ರಿಲೀಫ್ ನೀಡಲಿದೆ.