https://youtube.com/shorts/lXpfR5AMayg?si=IIZyhvs0NmKZnB7O
Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದಲೇ ಸದಾ ಸುದ್ದಿಯಲ್ಲಿದ್ದು, ಕರಿಬಸಪ್ಪ ಹಾಗೂ ಹಾಡಿನ ಸಾಲುಗಳ ನಂತರ ಇದೀಗ ವರ್ತೂರು ಸಂತೋಷ್ ಅವರ ಹೆಸರನ್ನೂ ಬದಲಿಸಿಬಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವಾಗ ರಕ್ಷಿತಾ ಶೆಟ್ಟಿ ಅವರ ನಿಜವಾದ ವ್ಯಕ್ತಿತ್ವ ಜನರಿಗೆ ಗೊತ್ತಾಯಿತು. ಅವರು ಮೊದಲು ಸಾಕಷ್ಟು ಟ್ರೋಲ್ ಆದ ಉದಾಹರಣೆ ಇದೆ. ಆದರೆ, ಬಿಗ್ ಬಾಸ್ಗೆ ತೆರಳಿದ ಬಳಿಕ ಅನೇಕರು ಅವರನ್ನು ಇಷ್ಟಪಟ್ಟರು. ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಸಂದರ್ಶನ ಒಂದರಲ್ಲಿ ಮಾತನಾಡುವಾಗ, ‘ಕರಿಬಸಯ್ಯ’ ಎನ್ನಲು ‘ಕರಿಬಸೊಪ್ಪು’ ಎಂದು ಕರೆದಿದ್ದರು.
ಇದೀಗ ರಕ್ಷಿತಾ ಶೆಟ್ಟಿ ವರ್ತೂರು ಸಂತೋಷ್ ಅವರ ಹೆಸರಿಗೂ ಕಳಂಕ ತಂದುಬಿಟ್ಟಿದ್ದಾರೆ. ಹಾಗೆಂದು ರಕ್ಷಿತಾ ಕೆಟ್ಟದ್ದೇನೂ ಮಾಡಿಲ್ಲ ಮತ್ತೆ. ಸಂದರ್ಶನವೊಂದರಲ್ಲಿ ವರ್ತೂರು ಸಂತೋಷ್ ಎನ್ನುವ ಬದಲು ವರ್ತೂರು ಸಂತೂರು ಎಂದಿದ್ದಾರೆ. ಇದೀಗ ಸಂತೂರ್ ಸೋಪಿನ ಜಾಹೀರಾತಿನ ಜೊತೆ ವರ್ತೂರು ಅವರ ವಿಡಿಯೋ ವೈರಲ್ ಆಗುತ್ತಿದೆ.
https://www.newsics.com/2026/02/16/as-monday-approaches-gold-lovers-will-get-bumper-good-news/